28.9.2024ರ ನಾಲ್ಕನೇ ಶನಿವಾರದಂದು ರಾಜ್ಯದ ನ್ಯಾಯಾಲಯಗಳು ಕಾರ್ಯ ನಿರ್ವಹಿಸಲಿವೆಯೇ?
28.9.2024ರ ನಾಲ್ಕನೇ ಶನಿವಾರದಂದು ರಾಜ್ಯದ ನ್ಯಾಯಾಲಯಗಳು ಕಾರ್ಯ ನಿರ್ವಹಿಸಲಿವೆಯೇ?
ಪ್ರತಿ ತಿಂಗಳ ಎರಡನೆಯ ಮತ್ತು ನಾಲ್ಕನೆಯ ಶನಿವಾರದಂದು ಸರಕಾರಿ ಕಚೇರಿಗಳಿಗೆ ರಜೆ ಘೋಷಿಸಿ ಸರಕಾರ ಆದೇಶ ಹೊರಡಿಸಿ ಐದು ವರ್ಷಗಳು ಕಳೆದಿವೆ.
ಆದರೆ ಮಾನ್ಯ ಕರ್ನಾಟಕ ಹೈಕೋರ್ಟ್ ಪ್ರಕಟಿಸಿದ 2024ನೆಯ ಕ್ಯಾಲೆಂಡರ್ ನಲ್ಲಿ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಿಗೆ ನೂತನ ವರ್ಷಾರಂಭದ ದಿನ, ಶ್ರೀ ಕೃಷ್ಣ ಜನ್ಮಾಷ್ಟಮಿ, ವರಮಹಾಲಕ್ಷ್ಮಿ ವೃತ, ಸ್ವರ್ಣ ಗೌರಿ ವೃತ ಸೇರಿದಂತೆ ಏಳು ದಿನಗಳ ಹೆಚ್ಚುವರಿ ರಜೆಯನ್ನು ಘೋಷಿಸಿದ್ದು ಸದರಿ 7 ರಜಾ ದಿನಗಳನ್ನು ಸರಿದೂಗಿಸಲು 2024ನೇ ಇಸವಿಯ ಜನವರಿ, ಮಾರ್ಚ್, ಏಪ್ರಿಲ್, ಜೂನ್, ಆಗಸ್ಟ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ನಾಲ್ಕನೆಯ ಶನಿವಾರದಂದು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳು ಕಾರ್ಯ ನಿರ್ವಹಿಸುವಂತೆ ಹೈಕೋರ್ಟ್ ನಿರ್ದೇಶಿಸಿತ್ತು.
ಈತನ್ಮಧ್ಯೆ ಸೆಪ್ಟೆಂಬರ್ 2024 ರ 4ನೇ ಶನಿವಾರದಂದು ಅಂದರೆ ದಿನಾಂಕ 28.9.2024 ರಂದು ರಾಜ್ಯದ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಕಲಾಪಗಳು ನಡೆಯಲಿವೆಯೇ ಎಂಬ ಬಗ್ಗೆ ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿಗಳಲ್ಲಿ ಗೊಂದಲ ಉಂಟಾಗಿದೆ.
ಕರ್ನಾಟಕ ಹೈಕೋರ್ಟ್ ಪ್ರಕಟಿಸಿದ ಕ್ಯಾಲೆಂಡರ್ ಪ್ರಕಾರ 2024 ನೇ ಸೆಪ್ಟೆಂಬರ್ ತಿಂಗಳ 4ನೇ ಶನಿವಾರದಂದು ಅಂದರೆ ದಿನಾಂಕ 28.9.2024 ರಂದು ರಾಜ್ಯದ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಯಾವುದೇ ಕಲಾಪಗಳು ನಡೆಯುವುದಿಲ್ಲ.
ಯಾವುದೇ ಪ್ರಕರಣ ದಿನಾಂಕ 28.9.2024 ರಂದು ವಿಚಾರಣೆಗೆ ನಿಗದಿಯಾದಲ್ಲಿ ಸದರಿ ಪ್ರಕರಣವನ್ನು ದಿನಾಂಕ 30.9.2024 ರಂದು ತೆರೆದ ನ್ಯಾಯಾಲಯದಲ್ಲಿ ಕರೆಯಲಾಗುವುದು. ಆದರೆ ದಿನಾಂಕ 28.9.2024ರ ತೆರೆದ ನ್ಯಾಯಾಲಯದ ಕಲಾಪಗಳು ಇಲ್ಲವಾದರೂ ನ್ಯಾಯಾಲಯದ ಕಚೇರಿಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಕಾರ್ಯನಿರ್ವಹಿಸಲಿವೆ.