-->
5 ಮೊಬೈಲ್, ಸಾವಿರಾರು ಅಶ್ಲೀಲ ವೀಡಿಯೋ: ಚಿತ್ರಕಲಾ ಶಿಕ್ಷಕನ ವಿರುದ್ಧ ಪೋಕ್ಸೊ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಕಾರ

5 ಮೊಬೈಲ್, ಸಾವಿರಾರು ಅಶ್ಲೀಲ ವೀಡಿಯೋ: ಚಿತ್ರಕಲಾ ಶಿಕ್ಷಕನ ವಿರುದ್ಧ ಪೋಕ್ಸೊ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಕಾರ

5 ಮೊಬೈಲ್, ಸಾವಿರಾರು ಅಶ್ಲೀಲ ವೀಡಿಯೋ: ಚಿತ್ರಕಲಾ ಶಿಕ್ಷಕನ ವಿರುದ್ಧ ಪೋಕ್ಸೊ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಕಾರ






ಐದು ಮೊಬೈಲ್‌ಗಳಲ್ಲಿ ವಿದ್ಯಾರ್ಥಿನಿಯರ ಸಾವಿರಾರು ಫೋಟೋ ಮತ್ತು ವೀಡಿಯೋ ಹೊಂದಿರುವ ಸರ್ಕಾರಿ ವಸತಿ ಶಾಲೆಯೊಂದರ ಶಿಕ್ಷಕನ ವಿರುದ್ಧ ದಾಖಲಾದ ಪೋಕ್ಸೊ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.


ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಇಷ್ಟೊಂದು ಮೊಬೈಲ್, ನೂರಾರು ಅಶ್ಲೀಲ ಚಿತ್ರಗಳ ವಿಚಾರಕ್ಕೆ ಕಳವಳ ವ್ಯಕ್ತಪಡಿಸಿದ್ದು, ಈ ಪ್ರಕರಣ ನಿಜಕ್ಕೂ ಆಘಾತಕಾರಿ ಎಂದು ಹೇಳಿದೆ.


ತಮ್ಮ ವಿರುದ್ಧದ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿ ವಸತಿ ಶಾಲೆಯ ಶಿಕ್ಷಕ ಹೈಕೋರ್ಟ್‌ ಮುಂದೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರ ಶಿಕ್ಷಕ ಐದು ಮೊಬೈಲ್ ಫೋನ್ ಹೊಂದಿದ್ದು, ಪ್ರತಿ ಮೊಬೈಲ್‌ನಲ್ಲೂ ಸಾವಿರಾರು ಫೋಟೋಗಳು, ನೂರಾರು ವೀಡಿಯೋಗಳು ಇವೆ.


ಈ ವೀಡಿಯೋ ಮತ್ತು ಫೋಟೋಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದ ದಾಖಲೆಗಳು ಧೃಢಪಡಿಸಿದ್ದು, ಪ್ರಕರಣದ ತನಿಖಾ ವರದಿಯಲ್ಲೂ ಮೇಲ್ನೋಟಕ್ಕೆ ಸಾಬೀತಾಗಿವೆ ಎಂಬುದನ್ನು ಪರಿಗಣಿಸಿದ ನ್ಯಾಯಪೀಠ, ಇದು ನಿಕಕ್ಕೂ ಆತಂಕಕಾರಿ ಘಟನೆ ಎಂದು ಹೇಳಿದೆ.


ಒಬ್ಬ ಶಿಕ್ಷಕನಾಗಿ ಈ ರೀತಿಯ ವೀಡಿಯೋ ಚಿತ್ರೀಕರಿಸುವುದು ನಿಜವಾಗಿಯೂ ಅಸಭ್ಯತನದ ಪರಮಾವಧಿ. ಇಂತಹ ಕೃತ್ಯಗಳು ಕೃಮೆಗೆ ಅರ್ಹವಲ್ಲ ಎಂದು ಹೇಳಿರುವ ನ್ಯಾಯಪೀಠ, ಪೂರ್ಣಪ್ರಮಾಣದ ವಿಚಾರಣೆ ನಡೆದು ಆರೋಪಮುಕ್ತನಾಗಿ ಅರ್ಜಿದಾರ ಹೊರಬರಲಿ. ಆದರೆ, ಎಫ್‌ಐಆರ್ ರದ್ದುಪಡಿಸಿದರೆ ಆತನ ಅಕ್ರಮ ಚಟುವಟಿಕೆಗಳನ್ನು ಉತ್ತೇಜಿಸಿದಂತಾಗುತ್ತದೆ. ಹೀಗಾಗಿ ತನಿಖೆ ಮತ್ತು ವಿಚಾರಣೆಯಿಂದ ಸತ್ಯಾಂಶ ಹೊರಬರಲಿ ಎಂದು ನ್ಯಾಯಪೀಠ ಅರ್ಜಿಯನ್ನು ತಿರಸ್ಕರಿಸಿದೆ.





ಪ್ರಕರಣದ ವಿವರ

ಶಾಲಾ ಭಾಲಕಿಯರು ಬಟ್ಟೆ ಬದಲಿಸುವ ಸಮಯದಲ್ಲಿ ಫೋಟೋ ಕ್ಲಿಕ್ ಮಾಡಿ ಹಾಗೂ ವೀಡಿಯೋ ಚಿತ್ರೀಕರಿಸಿದ ಘಟನೆ ಬಗ್ಗೆ ನಿಯಂತ್ರಣ ಕೊಠಡಿ ಮೂಲಕ ದೂರು ಸ್ವೀಕರಿಸಿದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು 2023ರ ಡಿಸೆಂಬರ್ 15ರಂದು ದೂರು ದಾಖಲಿಸಿದ್ದರು.


ಡಿಸೆಂಬರ್ 17ರಂದು ಪೊಲೀಸರು ಆರೋಪಿ ಶಿಕ್ಷಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಕೋಲಾರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ (ಪೋಕ್ಸೋ ವಿಶೇಷ ನ್ಯಾಯಾಲಯ)ದಲ್ಲಿ ನ್ಯಾಯ ವಿಚಾರಣೆ ನಡೆದಿತ್ತು.





Ads on article

Advertise in articles 1

advertising articles 2

Advertise under the article