ಕಂದಾಯ ಇಲಾಖೆಯಿಂದ ದರ್ಖಾಸ್ತು ಭೂಮಿಗೂ ಪೋಡಿ ಭಾಗ್ಯ: 59 ಲಕ್ಷ ರೈತರಿಗೆ ವರದಾನ
ಕಂದಾಯ ಇಲಾಖೆಯಿಂದ ದರ್ಖಾಸ್ತು ಭೂಮಿಗೂ ಪೋಡಿ ಭಾಗ್ಯ: 59 ಲಕ್ಷ ರೈತರಿಗೆ ವರದಾನ
ರಾಜ್ಯದ ದರ್ಖಾಸ್ತು ಜಮೀನು ಬಳಿಕ ಕೃಷಿ ಮಾಡುತ್ತಿರುವ 59 ಲಕ್ಷ ರೈತರಿಗೆ ಇದು ಸಿಹಿ ಸುದ್ದಿ. ರೈತರು ಕೃಷಿ ಕಾರ್ಯ ನಡೆಸುತ್ತಿರುವ ಸರ್ಕಾರಿ ಜಮೀನು, ದರ್ಖಾಸ್ತು ಭೂಮಿಗೂ ಪೋಡಿ ಭಾಗ್ಯ ನೀಡಲು ಕಂದಾಯ ಇಲಾಖೆ ಮುಂದಾಗಿದೆ.
ಈ ಕಾರ್ಯಕ್ಕೆ ಈ ವರ್ಷದ ಅಕ್ಟೋಬರ್ 2ರಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹಾಸನ ಜಿಲ್ಲೆಯಲ್ಲಿ ಚಾಲನೆ ನೀಡಲಿದ್ದಾರೆ. ಪೋಡಿ ಭಾಗ್ಯ ಕಾರ್ಯಕ್ರಮದಿಂದ ದಶಕಗಳ ಹಿಂದೆ ಮಂಜೂರಾದ ಭೂಮಿ ಉಳುಮೆ ಮಾಡುತ್ತಿರುವ ಸುಮಾರು ಐದು ಲಕ್ಷ ರೈತರ ಸಂಕಷ್ಟ ನಿವಾರಣೆ ಆಗಲಿದೆ ಎಂದು ಅಂದಾಜಿಸಲಾಗಿದೆ.
ಸರ್ಕಾರಿ ಭೂಮಿಗಳ ಸಾಗುವಳಿ 59 ಸಾವಿರ ಸರ್ವೇ ನಂಬರ್‌ಗಳ ಪೋಡಿಗಾಗಿ ಅರ್ಹತಾ ಕಡತ ಸಿದ್ಧಪಡಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ದೊರೆತಿದ್ದು, ಅಂತಿಮ ಪಟ್ಟಿ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ.
ಮೊದಲ ಹಂತದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು, ತಹಶೀಲ್ದಾರ್ ಮೊದಲಾದ ಕಂದಾಯ ಅಧಿಕಾರಿಗಳು ಅಕ್ಟೋಬರ್ 1ರಿಂದ 5ರ ವರೆಗೆ ಅರ್ಹತಾ ಕಡತ ಸಿದ್ಧಪಡಿಸುತ್ತಾರೆ. ಆ ನಂತರ ಸರ್ವೇ ಕಾರ್ಯ ನಡೆದು, ಜಮೀನಿನ ಪೋಡಿ ಕಾರ್ಯ ನಡೆಸಲು ಕಂದಾಯ ಇಲಾಖೆ ಮುಂದಾಗಿದೆ.
ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಸರ್ವೇ ಇಲಾಖೆಯ ಉಪ ನಿರ್ದೇಶಕರಿಗೆ ಈ ಕಾರ್ಯದ ಹೊಣೆಗಾರಿಕೆಯನ್ನು ನೀಡಲಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.