-->
ಸೂಕ್ಷ್ಮ ಪ್ರಕರಣಗಳ ಆದೇಶ ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ: ಹೈಕೋರ್ಟ್‌ ಮಹತ್ವದ ತೀರ್ಪು

ಸೂಕ್ಷ್ಮ ಪ್ರಕರಣಗಳ ಆದೇಶ ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ: ಹೈಕೋರ್ಟ್‌ ಮಹತ್ವದ ತೀರ್ಪು

ಸೂಕ್ಷ್ಮ ಪ್ರಕರಣಗಳ ಆದೇಶ ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ: ಹೈಕೋರ್ಟ್‌ ಮಹತ್ವದ ತೀರ್ಪು





ಲೈಂಗಿಕ ಅಪರಾಧಗಳು, ವೈವಾಹಿಕ ವಿವಾದಗಳು ಮತ್ತು ಬಾಲಾಪರಾಧಿಗಳನ್ನು ಒಳಗೊಂಡ ಪ್ರಕರಣಗಳ ತೀರ್ಪು ಇಲ್ಲವೇ ಆದೇಶವನ್ನು ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ ಎಂಬುದಾಗಿ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಈ ಕುರಿತು ನೀಡಲಾಗಿದ್ದ ಆಡಳಿತಾತ್ಮಕ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್)ಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ತಿರಸ್ಕರಿಸಿದೆ.

ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್‌) ಸೆಕ್ಷನ್ 73 ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್‌)ನ ಸೆಕ್ಷನ್ 366 (3) ಅನ್ನು ಪ್ರಶ್ನಿಸಿ ವಕೀಲರೊಬ್ಬರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಮತ್ತು ನ್ಯಾ. ಅನಿಲ್ ಕ್ಷೇತ್ರಪಾಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.

ಸಂತ್ರಸ್ತರಿಗೆ ಅನಾಮಧೇಯವಾಗಿ ಉಳಿಯುವ ಹಕ್ಕು ನೇರವಾಗಿ ಅವರ ಅಸ್ತಿತ್ವ ಮತ್ತು ಘನತೆಗೆ ಸಂಬಂಧಿಸಿದೆ. ಅವರಿಗೂ ಎಲ್ಲರಂತೆ ಘನತೆಯುಕ್ತ ಬದುಕುವ ಹಕ್ಕಿದೆ. ಅವರಿಗೂ ವೈಯಕ್ತಿಕ ಸ್ವಾತಂತ್ರ್ಯ ಇದೆ. ಮತ್ತು ಈ ವಿಷಯ ಮಾನವನ ಅಸ್ತಿತ್ವಕ್ಕೆ ನೇರವಾಗಿ ಸಂಬಂಧಿಸಿದ್ದಾಗಿದೆ. ಉಳಿದೆಲ್ಲ ಮೂಲಭೂತ ಹಕ್ಕುಗಳು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಹಕ್ಕಿನೆದುರು ಗೌಣವಾಗುತ್ತವೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.


ಸೂಕ್ಷ್ಮ ಎಂದು ಪರಿಗಣಿಸಲಾದ ಪ್ರಕರಣಗಳ ವಿವರ:

ಬಾಲನ್ಯಾಯ ಕಾಯ್ದೆ

ಅಧಿಕೃತ ರಹಸ್ಯ ಕಾಯ್ದೆ

ಗುಪ್ತಚರ ಸಂಸ್ಥೆಗಳ ಕುರಿತ ಪ್ರಕರಣ

ಕೌಟುಂಬಿಕ ಹಿಂಸೆ

ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ಪ್ರಕರಣ


ಇಂತಹ ಪ್ರಕರಣಗಳಲ್ಲಿ ಹಾಜರಾಗುವ ವಕೀಲರು ಆ ತೀರ್ಪುಗಳನ್ನು ಡೌನ್‌ಲೋಡ್ ಮಾಡಲು ಹೈಕೋರ್ಟ್‌ ಜಾಲತಾಣದಲ್ಲಿ ವಿಶೇಷ ವಿಭಾಗ ಇದ್ದು, ಅದು ಸಾಮಾನ್ಯ ಜನರಿಗೆ ಲಭ್ಯ ಇರುವುದಿಲ್ಲ.

Ads on article

Advertise in articles 1

advertising articles 2

Advertise under the article