-->
40 ಸೆಕೆಂಡ್‌ನಲ್ಲಿ ತತ್ಕಾಲ್ ಬುಕ್ಕಿಂಗ್: ಐಐಟಿ ಪದವೀಧರನ ವಿರುದ್ಧದ ಕೇಸ್‌ ರದ್ದು- ಕರ್ನಾಟಕ ಹೈಕೋರ್ಟ್‌

40 ಸೆಕೆಂಡ್‌ನಲ್ಲಿ ತತ್ಕಾಲ್ ಬುಕ್ಕಿಂಗ್: ಐಐಟಿ ಪದವೀಧರನ ವಿರುದ್ಧದ ಕೇಸ್‌ ರದ್ದು- ಕರ್ನಾಟಕ ಹೈಕೋರ್ಟ್‌

40 ಸೆಕೆಂಡ್‌ನಲ್ಲಿ ತತ್ಕಾಲ್ ಬುಕ್ಕಿಂಗ್: ಐಐಟಿ ಪದವೀಧರನ ವಿರುದ್ಧದ ಕೇಸ್‌ ರದ್ದು- ಕರ್ನಾಟಕ ಹೈಕೋರ್ಟ್‌





ರೈಲ್ವೇ ತತ್ಕಾಲ್‌ ಟಿಕೆಟ್ ಬುಕ್ಕಿಂಗ್ ಸಮಯವನ್ನು 47 ಸೆಕೆಂಡ್‌ಗೆ ಇಳಿಸುವ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ ಐಐಟಿ ಪದವೀಧರನ ವಿರುದ್ಧ ರೈಲ್ವೇ ಇಲಾಖೆ ಹೂಡಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.


ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.


ಔರಂಗಬಾದ್‌ನ ಗೌರವ್ ಡಾಕೆ ಅವರು ತಮ್ಮ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಮನವಿ ಮಾಡಿ ಈ ಅರ್ಜಿ ಸಲ್ಲಿಸಿದ್ದರು.


ಅರ್ಜಿದಾರರು ರೈಲ್ವೇ ಇಲಾಖೆಯ ಐಆರ್‌ಸಿಟಿಸಿಯ ವೆಬ್‌ಸೈಟ್‌ನ್ನು ಎಕ್ಸ್‌ಟೆಂಡ್ ಮಾಡಿದ್ದಾರೆ. ಅವರಿಗೆ ತತ್ಕಾಲ್‌ನಲ್ಲಿ ಟಿಕೆಟ್ ಮುಂಗಡವಾಗಿ ಕಾಯ್ದಿರಿಸಲು ತಗಲುತ್ತಿದ್ದ ಸಮಯವನ್ನು ಏಳು ನಿಮಿಷದಿಂದ 40 ಸೆಕೆಂಡ್‌ಗೆ ಇಳಿಸಿದ್ದರು. ಇದರಿಂದ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಅನುಕೂಲವಾಗಿದೆ ಎಂದು ನ್ಯಾಯಪೀಠ ಹೇಳಿದೆ.


ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಅರ್ಜಿದಾರರು ರೈಲ್ವೇ ಇಲಾಖೆಯಿಂದ ಯಾವುದೇ ಟಿಕೆಟ್ ಖರೀದಿಸಿಲ್ಲ. ಅಥವಾ ಟಿಕೆಟ್ ಪೂರೈಕೆ ಮಾಡಿಲ್ಲ. ಅವರ ವಿರುದ್ಧ ಪ್ರಕರಣ ಮುಂದುವರಿಸಿದರೆ ಅದು ಕಾನೂನಿನ ದುರ್ಬಳಕೆಯಾಗಲಿದೆ ಎಂದು ವಾದಿಸಿದರು.


ಇದಕ್ಕೆ ತಕರಾರು ಸಲ್ಲಿಸಿದ್ದ ರೈಲ್ವೇ ಪರ ವಕೀಲರು, ವಿಚಾರಣಾ ನ್ಯಾಯಾಲಯ ಪ್ರಕರಣದ ಸಂಜ್ಞೇಯತೆಯನ್ನು ತೆಗೆದುಕೊಂಡಿದೆ. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ಹಂತದಲ್ಲಿ ಪ್ರಕರಣ ರದ್ದುಗೊಳಿಸಬಾರದು ಎಂದು ವಾದಿಸಿದರು.


ಅಲ್ಲದೆ, ಒಮ್ಮೆ ಟಿಕೆಟ್ ಬುಕ್ಕಿಂಗ್‌ಗೆ ರೂ. 30 ರಂತೆ ಸುಮಾರು 12.50 ಲಕ್ಷ ರೂ. ಲಾಭ ಮಾಡಿಕೊಂಡಿದ್ದಾರೆ. ಹಾಗಾಗಿ, ಪ್ರಕರಣ ರದ್ದುಗೊಳಿಸಬಾರದು ಎಂದು ಮನವಿ ಮಾಡಿದ್ದರು.


ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಮ್ಯಾಥ್ಯೂ ಕೆ.ಚೆರಿಯನ್ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ, ರೈಲ್ವೇ ಪೊಲೀಸರು ಪ್ರಕರಣ ದಾಖಲಾಗಿ ಮೂರು ವರ್ಷಗಳ ಬಳಿಕ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದಾರೆ. ಸ್ರಿ ಪ್ರಕರಣದಲ್ಲಿ ಮೇಲ್ನೋಟಕ್ಕೆ ಅರ್ಜಿದಾರರ ವಿರುದ್ಧ ಯಾವುದೇ ಅಂಶವಿಲ್ಲ. ಹಾಗಾಗಿ, ಅರ್ಜಿದಾರರ ವಿರುದ್ಧ ರೈಲ್ವೇ ಇಲಾಖೆ ಪ್ರಕರಣ ಹೂಡಬಾರದಿತ್ತು ಎಂದು ಅಭಿಪ್ರಾಯಪಟ್ಟು ಪ್ರಕರಣವನ್ನು ರದ್ದುಗೊಳಿಸಿತು.




Ads on article

Advertise in articles 1

advertising articles 2

Advertise under the article