-->
CrPC 311 ಅರ್ಜಿ: ಸರಿಯಾಗಿ ಪಾಟೀ ಸವಾಲು ಮಾಡಿಲ್ಲ ಎಂಬ ಕಾರಣ ಸಮರ್ಥನೀಯವಲ್ಲ- ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

CrPC 311 ಅರ್ಜಿ: ಸರಿಯಾಗಿ ಪಾಟೀ ಸವಾಲು ಮಾಡಿಲ್ಲ ಎಂಬ ಕಾರಣ ಸಮರ್ಥನೀಯವಲ್ಲ- ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

CrPC 311 ಅರ್ಜಿ: ಸರಿಯಾಗಿ ಪಾಟೀ ಸವಾಲು ಮಾಡಿಲ್ಲ ಎಂಬ ಕಾರಣ ಸಮರ್ಥನೀಯವಲ್ಲ- ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌





ನ್ಯಾಯಾಲಯದ ಕಲಾಪದಲ್ಲಿ ಹಾಜರಾಗಿದ್ದ ಸಂದರ್ಭದಲ್ಲಿ ಸಾಕ್ಷಿಯನ್ನು ಸರಿಯಾಗಿ ಅಡ್ಡ ವಿಚಾರಣೆ ಮಾಡಲಾಗಿಲ್ಲ ಎಂಬ ಕಾರಣ ನೀಡಿ, ಆ ಸಾಕ್ಷಿಯನ್ನು ಮತ್ತೆ ಕರೆಸಬೇಕು ಎಂದು ಕೋರಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.


ಸುಪ್ರೀಂ ಕೋರ್ಟ್‌ನ ನ್ಯಾ. ಪಿ.ಎಸ್. ನರಸಿಂಹ ಮತ್ತು ನ್ಯಾ. ಸಂದೀಪ್ ಮೆಹ್ತಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ.


ಈ ಹಿಂದೆ ನೇಮಕವಾಗಿದ್ದ ಅರ್ಜಿದಾರರ ಪರ ವಕೀಲರು ಸಾಕ್ಷಿಯನ್ನು ಸಮರ್ಪಕವಾಗಿ ಅಡ್ಡ ವಿಚಾರಣೆ ಮಾಡಿಲ್ಲ ಎಂಬ ಕಾರಣ ನೀಡಿ ನೇಹಾ ಬೇಗಂ ಮತ್ತಿತರರು ವಿಚಾರಣಾ ನ್ಯಾಯಾಲಯಕ್ಕೆ CRPC ಸೆಕ್ಷನ್ 311ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಮತ್ತು ಗುವಾಹಟಿ ಹೈಕೋರ್ಟ್ ವಜಾಗೊಳಿಸಿತ್ತು.


ಇದರಿಂದ ಬಾಧಿತರಾದ ಅರ್ಜಿದಾರರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಅಸ್ಸಾಂನ ದಿಬ್ರುಗಢದಲ್ಲಿ ನಡೆದ ಮಾನವ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಆರೋಪಿಗಳಾಗಿದ್ದಾರೆ.


ಅರ್ಜಿದಾರರು, ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 311 ಅರ್ಜಿಯಲ್ಲಿ, ಸಾಕ್ಷಿಗಳನ್ನು ಮತ್ತೆ ಕರೆಸಲು, ಈ ಹಿಂದೆ ತಮ್ಮ ಪರವಾಗಿ ವಾದ ಮಂಡಿಸಲು ನೇಮಕವಾಗಿದ್ದ ವಕೀಲರಿಂದ ಸಮರ್ಪಕವಾಗಿ ಕ್ರಾಸ್ ಎಕ್ಸಾಮಿನೇಷನ್ ನಡೆಸಲು ಸಾಧ್ಯವಾಗಲಿಲ್ಲ ಎಂಬ ಕಾರಣ ನೀಡಿದ್ದರು. ಆದರೆ, ಈ ಅರ್ಜಿಗಳನ್ನು ಸೆಷನ್ಸ್ ಕೋರ್ಟ್ ಮತ್ತು ಗುವಾಹಾಟಿ ಹೈಕೋರ್ಟ್ ತಿರಸ್ಕರಿಸಿತ್ತು.


ವಿಚಾರಣಾ ನ್ಯಾಯಾಲಯವು ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 311 ಅರ್ಜಿಯನ್ನು ಆಧರಿಸಿ ಯಾವುದೇ ವ್ಯಕ್ತಿಯನ್ನು ಸಾಕ್ಷಿಯಾಗಿ ಕರೆಸಬಹುದು ಅಥವಾ ಈಗಾಗಲೇ ವಿಚಾರಣೆ ಮಾಡಲಾದ ಸಾಕ್ಷಿಯನ್ನು ಮುಖ್ಯ ವಿಚಾರಣೆಗೆ ಯಾ ಅಡ್ಡ ವಿಚಾರಣೆಗೆ ಮತ್ತೆ ಕರೆಸಬಹುದು. ಆದರೆ ಸೆಕ್ಷನ್ 311ರ ಅರ್ಜಿಯು ನ್ಯಾಯಾಲಯಕ್ಕೆ ತೃಪ್ತಿಯಾದರೆ ಮಾತ್ರ ವಿಚಾರಣಾ ನ್ಯಾಯಾಲಯ ಸಾಕ್ಷಿಯನ್ನು ಮತ್ತೆ ಕರೆಸಲು ಅನುಮತಿಸಬಹುದು ಎಂದು ನ್ಯಾಯಪೀಠ ಹೇಳಿದೆ.


ಆದರೆ, ಅರ್ಜಿದಾರರು ಕೇವಲ ಕ್ರಾಸ್ ಎಕ್ಸಾಮಿನೇಷನ್ ನಡೆಸಲು ಅನುಮತಿ ಕೋರಿದ್ದಾರೆ. ಅವರ ಕೇವಲ ಬರಿದಾದ ಕೋರಿಕೆಯನ್ನು ಮನ್ನಿಸಲು ಸಾಧ್ಯವಿಲ್ಲ. ಏಕೆಂದರೆ, ಅಡ್ಡ ವಿಚಾರಣೆ ಬಳಿಕ ಮರು ವಿಚಾರಣೆ ನಡೆಯಬೇಕು. ಅಭಿಯೋಜನೆಯು ಸಾಕ್ಷಿಯ ಮರುವಿಚಾರಣೆಯನ್ನೇ ನಡೆಸಲಿಲ್ಲ. ಹಾಗಾಗಿ, ಪ್ರತಿರಕ್ಷೆಯು ಮರು ಅಡ್ಡ ವಿಚಾರಣೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ವಿವರಣೆ ನೀಡಿದೆ.



Ads on article

Advertise in articles 1

advertising articles 2

Advertise under the article