-->
ಕರ್ನಾಟಕ ಲೋಕಸೇವಾ ಆಯೋಗ: ಕಾನೂನು ಸಲಹೆಗಾರರ ಹುದ್ದೆಗೆ ಅರ್ಜಿ ಆಹ್ವಾನ; ವೇತನ ಮಾಸಿಕ 1.15 ಲಕ್ಷ ರೂ.

ಕರ್ನಾಟಕ ಲೋಕಸೇವಾ ಆಯೋಗ: ಕಾನೂನು ಸಲಹೆಗಾರರ ಹುದ್ದೆಗೆ ಅರ್ಜಿ ಆಹ್ವಾನ; ವೇತನ ಮಾಸಿಕ 1.15 ಲಕ್ಷ ರೂ.

ಕರ್ನಾಟಕ ಲೋಕಸೇವಾ ಆಯೋಗ: ಕಾನೂನು ಸಲಹೆಗಾರರ ಹುದ್ದೆಗೆ ಅರ್ಜಿ ಆಹ್ವಾನ; ವೇತನ ಮಾಸಿಕ 1.15 ಲಕ್ಷ ರೂ.






ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಕಾನೂನು ಕೋಶದ ಮುಖ್ಯಸ್ಥರ ಹುದ್ದೆಗೆ ಕಾನೂನು ಸಲಹೆಗಾರರನ್ನು ನೇಮಕಾತಿ ಮಾಡಿಕೊಳ್ಳಲು ಲೋಕಸೇವಾ ಆಯೋಗವು 5-09-2024ರಂದು ಅಧಿಸೂಚನೆಯನ್ನು ಹೊರಡಿಸಿದೆ.


ಈ ಹುದ್ದೆಯು ಎರಡು ವರ್ಷಗಳ ಅವಧಿಯದ್ದಾಗಿರುತ್ತದೆ.


ಹುದ್ದೆಯ ಹೆಸರು: ಕಾನೂನು ಕೋಶದ ಮುಖ್ಯಸ್ಥರ ಹುದ್ದೆಗೆ ಕಾನೂನು ಸಲಹೆಗಾರರು

ವೇತನವು ಪ್ರತಿ ತಿಂಗಳು 1.15 ಲಕ್ಷ ರೂ.ಗಳು. ಇದರ ಜೊತೆಗೆ ವಾಹನ ಭತ್ಯೆಯಾಗಿ ಪ್ರತಿ ತಿಂಗಳಿಗೆ ರೂ. 35 ಸಾವಿರ ನಿಗದಿಪಡಿಸಲಾಗಿದೆ.





ಈ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಇಚ್ಚಿಸುವ ಸೇವಾ ವಿಷಯದಲ್ಲಿ ನುರಿತ ಹಾಗೂ ಹೆಚ್ಚಿನ ಅನುಭವ ಇರುವ ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.


ಈ ಹುದ್ದೆಯು ಎರಡು ವರ್ಷಗಳ ಕಾಲಾವಧಿಯದ್ದಾಗಿದ್ದು, ಒಂದು ವರ್ಷದ ಕಾರ್ಯನಿರ್ವಣೆಯ ಆಧಾರದ ಮೇಲೆ ನಂತರದ ಒಂದು ವರ್ಷದ ವರೆಗೆ ಮುಂದುವರಿಸಲಾಗುವುದು.


1958ರ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳಲ್ಲಿ ತಿಳಿಸಿದಂತೆ ಸದರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುವ ನಿವೃತ್ತ ಸರ್ಕಾರಿ ನೌಕರರಿಗೆ ಲಭ್ಯವಾಗುವ ರಜಾ ಸೌಲಭ್ಯಗಳನ್ನು ಈ ಹುದ್ದೆಗೂ ಅನ್ವಯ ಮಾಡಲಾಗಿದೆ.


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-09-2024 ಆಗಿರುತ್ತದೆ.


ಅರ್ಜಿಯನ್ನು ಮುಚ್ಚಿದ ಲಕೋಟೆಯಲ್ಲಿ ಕಾರ್ಯದರ್ಶಿ, ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು- 560001ಈ ವಿಳಾಸಕ್ಕೆ ಸಲ್ಲಿಸಲು ಸೂಚಿಸಲಾಗಿದೆ ಎಂದು ಆಯೋಗದ ಆದೇಶದ ಮೇರೆಗೆ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಯವರು ಅಧಿಸೂಚನೆಯಲ್ಲಿ ತಿಳಿಸಿರುತ್ತಾರೆ.






Ads on article

Advertise in articles 1

advertising articles 2

Advertise under the article