ರಾಜ್ಯ ಸರ್ಕಾರದ ಭರ್ಜರಿ ಆಫರ್: ನಿವೃತ್ತಿ ವಯಸ್ಸು ಹೆಚ್ಚಳ; ಎಲ್ಲ ವರ್ಗಕ್ಕೂ ಲಾಭ ತಂದ ಅಧಿಸೂಚನೆ
ರಾಜ್ಯ ಸರ್ಕಾರದ ಭರ್ಜರಿ ಆಫರ್: ನಿವೃತ್ತಿ ವಯಸ್ಸು ಹೆಚ್ಚಳ; ಎಲ್ಲ ವರ್ಗಕ್ಕೂ ಲಾಭ ತಂದ ಅಧಿಸೂಚನೆ
ವಯೋಮಿತಿ ದಾಟಿದೆ ಎಂಬ ಕಾರಣಕ್ಕೆ ಸರ್ಕಾರಿ ಹುದ್ದೆ ತಪ್ಪಿಸಿಕೊಂಡವರಿಗೆ ರಾಜ್ಯ ಸರ್ಕಾರ ಬಂಪರ್ ಆಫರ್ ನೀಡಿದೆ. ವಯಸ್ಸು ಮೀರಿತು, ಎಷ್ಟೇ ಪ್ರಯತ್ನ ಮಾಡಿದರೂ ಸರ್ಕಾರಿ ನೌಕರಿ ಸಿಗಲೇ ಇಲ್ಲ ಎಂದು ಹತಾಶೆಯಲ್ಲಿ ಇದ್ದ ಅಭ್ಯರ್ಥಿಗಳಿಗೆ ಇದು ಮರುಭೂಮಿಯಲ್ಲಿ ಓಯಸಿಸ್ ಕಂಡ ಹಾಗೆ ಆಗಿದೆ.
ರಾಜ್ಯ ಸಿವಿಲ್ ಸೇವೆಗಳಲ್ಲಿ ಇರುವ ವಿವಿಧ ಇಲಾಖೆಗಳ ಬಿ ಗ್ರೂಪ್ ಮತ್ತು ಸಿ ಗ್ರೂಪ್ ಹುದ್ದೆಗಳಿಗೆ ಎಲ್ಲ ಪ್ರವರ್ಗದ ಅಭ್ಯರ್ಥಿಗಳಿಗೆ ಒಂದು ಸಲದ ಕ್ರಮವಾಗಿ ಗರಿಷ್ಠ ವಯೋಮಿತಿಯನ್ನು ಮೂರು ವರ್ಷಗಳಿಗೆ ಹೆಚ್ಚಿಸಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ನಿರ್ಧರಿಸಿದೆ.
ರಾಜ್ಯ ಸಿವಿಲ್ ಸೇವೆಗಳಲ್ಲಿ ಇರುವ ಗ್ರೂಪ್ ಬಿ ಮತ್ತು ಸಿ ಹುದ್ದೆಗಳ ನೇರ ನೇಮಕಾತಿ ಮೂಲಕ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅದೇ ರೀತಿ, ರಾಜ್ಯ ಸಿವಿಲ್ ಸೇವೆಗಳಲ್ಲಿ ಇರುವ ಗ್ರೂಪ್ ಸಿ ಹುದ್ದೆಗೆ ಮುಂದಿನ ಒಂದು ವರ್ಷದಲ್ಲಿ ಹೊರಡಿಸಲಿರುವ ಅಧಿಸೂಚನೆಯಲ್ಲಿ ಈಗಿರುವ ನಿಯಮಗಳ ಮೇಲೆ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯನ್ನು ಮೂರು ವರ್ಷಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ.
# ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಯೋಮಿತಿಯಲ್ಲಿ ಹೆಚ್ಚಳ.
# ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ಸೇರ್ಪಡೆಯಾಗುವ ಗರಿಷ್ಠ ವಯೋಮಿತಿ ಹೆಚ್ಚಳ
# ಮುಂದಿನ ಒಂದು ವರ್ಷದ ವರೆಗೆ ಮಾತ್ರ ಈ ನಿರ್ಧಾರ ಅನ್ವಯ
# ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ