ರಾಮೇಶ್ವರ ಕೆಫೆ ಬಾಂಬ್ ಕೃತ್ಯದಲ್ಲಿ ತಮಿಳು ಜನ: ತನ್ನ ಬೇಜವಾಬ್ದಾರಿ ಹೇಳಿಕೆಗೆ ಶೋಭಾ ಕ್ಷಮೆ- ಎಫ್‌ಐಆರ್ ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್
ರಾಮೇಶ್ವರ ಕೆಫೆ ಬಾಂಬ್ ಕೃತ್ಯದಲ್ಲಿ ತಮಿಳು ಜನ: ತನ್ನ ಬೇಜವಾಬ್ದಾರಿ ಹೇಳಿಕೆಗೆ ಶೋಭಾ ಕ್ಷಮೆ- ಎಫ್‌ಐಆರ್ ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್
ಬೆಂಗಳೂರಿನ ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಕೃತ್ಯದಲ್ಲಿ ತಮಿಳುನಾಡಿನ ಜನರು ಭಾಗಿಯಾಗಿದ್ದಾರೆ ಎಂಬ ತನ್ನ ಬೇಜವಾಬ್ದಾರಿ ಹೇಳಿಕೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮದ್ರಾಸ್ ಹೈಕೋರ್ಟ್‌ನಲ್ಲಿ ಅಧಿಕೃತವಾಗಿ ಕ್ಷಮೆಯಾಚನೆ ಮಾಡಿದ್ದಾರೆ.
ಬೆಂಗಳೂರಿನ ಬಾಂಬ್ ಸ್ಫೋಟದಲ್ಲಿ ಬಾಂಬ್ ಇಟ್ಟವರಿಗೆ ತಮಿಳುನಾಡಿನಲ್ಲಿ ತರಬೇತು ನೀಡಲಾಗಿತ್ತು ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸಾರ್ವಜನಿಕ ಸಭೆಯಲ್ಲಿ ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ಶೋಭಾ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದೀಗ ಶೋಭಾ ಕರಂದ್ಲಾಜೆ ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್ ಮೂಲಕ ತಮಿಳುನಾಡು ಜನರಲ್ಲಿ ಬೇಷರತ್ ಕ್ಷಮೆ ಯಾಚನೆ ಮಾಡಿದ್ದರಿಂದ ಆಕೆಯ ವಿರುದ್ಧ ಪ್ರಕರಣ ಮುಂದುವರಿಸಲು ಬಯಸುವುದಿಲ್ಲ ಎಂದು ತಮಿಳುನಾಡು ಸರ್ಕಾರ ಹೈಕೋರ್ಟ್‌ಗೆ ತಿಳಿಸಿತು.
ಈ ಹಿನ್ನೆಲೆಯಲ್ಲಿ ಶೋಭಾ ವಿರುದ್ಧ ದಾಖಲಾದ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ. ನ್ಯಾ. ಜಿ. ಜಯಚಂದ್ರನ್ ಅವರಿದ್ದ ನ್ಯಾಯಪೀಠ ಈ ಬಗ್ಗೆ ಆದೇಶ ಹೊರಡಿಸಿದೆ.