-->
ಎದುರುವಾದಿಯ ಗಮನಕ್ಕೆ ಬಾರದೆ ಕೋರ್ಟ್ ಕಲಾಪದ ದಿನಾಂಕ ಬದಲು: ವಿಚಾರಣಾ ನ್ಯಾಯಾಲಯದ ಆದೇಶ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಎದುರುವಾದಿಯ ಗಮನಕ್ಕೆ ಬಾರದೆ ಕೋರ್ಟ್ ಕಲಾಪದ ದಿನಾಂಕ ಬದಲು: ವಿಚಾರಣಾ ನ್ಯಾಯಾಲಯದ ಆದೇಶ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಎದುರುವಾದಿಯ ಗಮನಕ್ಕೆ ಬಾರದೆ ಕೋರ್ಟ್ ಕಲಾಪದ ದಿನಾಂಕ ಬದಲು: ವಿಚಾರಣಾ ನ್ಯಾಯಾಲಯದ ಆದೇಶ ವಜಾಗೊಳಿಸಿದ ಸುಪ್ರೀಂ ಕೋರ್ಟ್‌






ಎದುರು ಪಕ್ಷಕಾರರಿಗೆ ನೋಟೀಸ್ ನೀಡದೆ ಪ್ರಕರಣದ ವಿಚಾರಣಾ ದಿನವನ್ನು ನ್ಯಾಯಾಲಯಗಳು ಬದಲಿಸಲು ಅಥವಾ ಹಿಂದಕ್ಕೆ ಹಾಕಿಕೊಳ್ಳಲು ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.


ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅಭಯ ಶ್ರೀನಿವಾಸ ಓಕಾ, ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲ ಮತ್ತು ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್‌ ಮಾಸಿಹ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.


ಉತ್ತರಾಖಂಡ ರಾಜ್ಯದ ವಿಚಾರಣಾ ನ್ಯಾಯಾಲಯವು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವಾದ ಆಲಿಸಲು 2002ರ ಮೇ 30ಕ್ಕೆ ದಿನಾಂಕ ನಿಗದಿಪಡಿಸಿತ್ತು. ಈ ನಿಗದಿತ ದಿನಾಂಕಕ್ಕಿಂಗ ಮೊದಲೇ ಮೇ 3ರಂದು ಅರ್ಜಿದಾರರ ಪರ ವಕೀಲರು ಪ್ರಕರಣದ ವಿಚಾರಣೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.


ಇದನ್ನು ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯವು ಮೇ 3ರಂದು ವಾದವನ್ನು ಆಲಿಸಿ ಮೇ 22ರಂದು ಆದೇಶ ಪ್ರಕಟಿಸಿತ್ತು.


ಮೇ 20, 2002ರಂದು ಪ್ರತಿವಾದಿಯನ್ನು ಪ್ರತಿನಿಧಿಸುತ್ತಿರುವ ವಕೀಲರು ನ್ಯಾಯಾಲಯಕ್ಕೆ ಹಾಜರಾಗಿ ಮೇ 3ರಂದು ಹೊರಡಿಸಿರುವ ಆದೇಶ ಹಿಂದಕ್ಕೆ ಪಡೆಯುವಂತೆ ಕೋರಿದ್ದರು. ಆದರೆ, ಪ್ರತಿವಾದಿಗಳು ಅರ್ಜಿಗೆ ಆಕ್ಷೇಪಣೆಯನ್ನೂ ಸಲ್ಲಿಸದೇ ಇದ್ದುದರಿಂದ ನ್ಯಾಯಾಲಯ ಏಕಪಕ್ಷೀಯ ಆದೇಶ ಮಾಡಿರುವುದಾಗಿ ಸಮರ್ಥಿಸಿಕೊಂಡಿತು.


ಆ ಬಳಿಕ, ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪ್ರತಿವಾದಿ ಪಕ್ಷಕಾರರು ಹೈಕೋರ್ಟ್ ಮೆಟ್ಟಿಲೇರಿದರು. ಆದರೆ, ಹೈಕೋರ್ಟ್‌ ಕೂಡ ವಿಚಾರಣಾ ನ್ಯಾಯಾಲಯದ ಆದೇಶವು ಸರಿಯಾಗಿದೆ ಮತ್ತು ಮಧ್ಯಪ್ರವೇಶ ಮಾಡಲು ಅರ್ಹವಾದ ಪ್ರಕರಣವಲ್ಲ ಎಂದು ತೀರ್ಪು ನೀಡಿತು.


ಇದರಿಂದ ಬಾಧಿತರಾದ ಮೇಲ್ಮನವಿದಾರರು ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್‌, ಮೇಲ್ಮನವಿದಾರರ ಪರ ತೀರ್ಪು ನೀಡಿತು.


ಎದುರು ಪಕ್ಷಕಾರರಿಗೆ ನೋಟಿಸ್ ನೀಡದೆ ನ್ಯಾಯಾಲಯಗಳು ವಿಚಾರಣೆಯ ದಿನಾಂಕವನ್ನು ಹಿಂದಕ್ಕೆ ಹಾಕಲು ಯಾ ಬದಲಿಸಲು ಬರುವುದಿಲ್ಲ. ಹಾಗೆ ಮಾಡಿದರೆ, ಅದು ಸಹಜ ನ್ಯಾಯಾದ ತತ್ವದ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.


ವಿಚಾರಣಾ ನ್ಯಾಯಾಲಯವು ನಿಗದಿತ ದಿನವಾದ ಮೇ 30ರ ದಿನಾಂಕವನ್ನು ಬದಲಿಸಿ ಮೇ 3ರಂದು ವಿಚಾರಣೆ ನಡೆಸಿದೆ. ಒಂದು ವೇಳೆ, ನಿಗದಿತ ದಿನವಾದ ಮೇ 30ರಂದೇ ನಡೆಸುತ್ತಿದ್ದರೆ ಮೇಲ್ಮನವಿದಾರರು ವಿಚಾರಣೆಗೆ ಹಾಜರಿರಲು ಸಾಧ್ಯವಾಗುತ್ತಿತ್ತು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.


ಮೇ 30ರಂದು ಮೇಲ್ಮನವಿದಾರರು ಹಾಜರಾಗಿ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದ್ದರೂ ಅದನ್ನು ಪರಿಗಣಿಸದಿರುವುದು ಸೂಕ್ತವಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದು, ಮೇ 22ರಂದು ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ರದ್ದು ಮಾಡಿದೆ.




Ads on article

Advertise in articles 1

advertising articles 2

Advertise under the article