-->
ಬಗರ್ ಹುಕುಂ ಅರ್ಜಿ ಹಾಕಿದ ರೈತರಿಗೆ ಸಿಹಿ ಸುದ್ದಿ: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

ಬಗರ್ ಹುಕುಂ ಅರ್ಜಿ ಹಾಕಿದ ರೈತರಿಗೆ ಸಿಹಿ ಸುದ್ದಿ: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

ಬಗರ್ ಹುಕುಂ ಅರ್ಜಿ ಹಾಕಿದ ರೈತರಿಗೆ ಸಿಹಿ ಸುದ್ದಿ: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ






ಸಾಗುವಳಿ ಹಕ್ಕು ಕೋರಿ ರೈತರು ಸಲ್ಲಿಸಿರುವ 'ಬಗರ್ ಹುಕುಂ' ಅರ್ಜಿಗಳನ್ನು ನವೆಂಬರ್ 30ರೊಳಗೆ ಇತ್ಯರ್ಥ ಮಾಡಲಾಗುವುದು. ಈ ಬಗ್ಗೆ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎಂದು ಕಂದಾಯ ಸಚಿವಾಲಯ ಹೇಳಿದೆ.


ಸಾಗುವಳಿ ಹಕ್ಕು ನೀಡಬೇಕೆಂದು ಮನವಿ ಮಾಡಿ ರೈತರು ಸಲ್ಲಿಸಿರುವ 'ಬಗರ್ ಹುಕುಂ' ಅರ್ಜಿಗಳನ್ನು ನವೆಂಬರ್ 30ರೊಳಗೆ ಇತ್ಯರ್ಥ ಮಾಡದಿದ್ದರೆ ಅಂತಹ ತಹಶೀಲ್ದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವಾಲಯ ಸ್ಪಷ್ಟಪಡಿಸಿದೆ.


ಅರ್ಜಿ ನಮೂನೆ 53 ಮತ್ತು ಅರ್ಜಿ ನಮೂನೆ 57ರಲ್ಲಿ ರೈತರು ಸಾಗುವಳಿ ಹಕ್ಕು ಕೋರಿ ಅರ್ಜಿ ಸಲ್ಲಿಸಿದ್ಧಾರೆ. ರಾಜ್ಯದಲ್ಲಿ ಇಂತಹ 14.85 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಎಲ್ಲ ಅರ್ಜಿಗಳನ್ನೂ ಪರಿಶೀಲಿಸಬೇಕು. ಅರ್ಹರಿಗೆ ಭೂಹಕ್ಕು ನೀಡಬೇಕು ಎಂದು ಸಚಿವಾಲಯ ತಿಳಿಸಿದೆ.





ಒಂದು ವೇಳೆ, ಅನರ್ಹ ಅರ್ಜಿಗಳನ್ನು ತಿರಸ್ಕರಿಸುವುದಿದ್ದರೂ ಸಕಾರಣ ನೀಡಿ ತಿರಸ್ಕರಿಸಬೇಕು ಎಂದು ಕಂದಾಯ ಸಚಿವಾಲಯ ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ತಾಕೀತು ಮಾಡಿದೆ.


ಅನರ್ಹ ಭೂರಹಿತರಿಗೆ ಭೂಮಿ ದೊರೆಯಬೇಕು. ಅರ್ಹ ಅರ್ಜಿಗಳಿಗೆ ಜಮೀನು ಮಂಜೂರು ಮಾಡಬೇಕು ಎಂಬುದು ಸರ್ಕಾರದ ಧ್ಯೇಯ. ಅದಕ್ಕಾಗಿ ಅಕ್ರಮ-ಸಕ್ರಮ ಯೋಜನೆ ರೂಪಿಸಲಾಗಿದೆ. ಈಗಾಗಲೇ 160 ಬಗರ್ ಹುಕುಂ ಸಮಿತಿಗಳನ್ನು ರಚಿಸಲಾಗಿದೆ. ಅಧಿಕಾರಿಗಳು ಸಮಿತಿಯ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತ್ವರಿತವಾಗಿ ಅರ್ಜಿಗಳನ್ನು ಇತ್ಯರ್ಥ ಮಾಡಬೇಕು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.





Ads on article

Advertise in articles 1

advertising articles 2

Advertise under the article