ಅಪ್ರಾಪ್ತ ದ್ವಿಚಕ್ರ ಚಾಲಕರಿಗೆ ಸಿಹಿ ಸುದ್ದಿ: ವಾಹನ ಚಲಾವಣೆಯಲ್ಲಿ ನಿಯಮ ಬದಲು- ಹೊಸ ನಿಯಮವೇನು..?
ಅಪ್ರಾಪ್ತ ದ್ವಿಚಕ್ರ ಚಾಲಕರಿಗೆ ಸಿಹಿ ಸುದ್ದಿ: ವಾಹನ ಚಲಾವಣೆಯಲ್ಲಿ ನಿಯಮ ಬದಲು- ಹೊಸ ನಿಯಮವೇನು..?
18 ವರ್ಷ ಮೀರದ ಅಪ್ರಾಪ್ತ ವಯಸ್ಕರು ಯಾವುದೇ ವಾಹನ ಚಲಾಯಿಸುವಂತಿಲ್ಲ. ಆದರೆ, ಈ ನಿಯಮದಲ್ಲಿ ಬದಲಾವಣೆ ಮಾಡಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ತಂದಿದೆ.
ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ.
16 ವರ್ಷ ಪೂರ್ಣಗೊಂಡ ಚಾಲಕರಿಗೆ ಸಾರ್ವಜನಿಕ ರಸ್ತೆಯಲ್ಲಿ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಆದರೆ, ಇ ವಾಹನದ ಗರಿಷ್ಟ ವೇಗದ ಮಿತಿ 25 ಕಿಲೋ ಮೀಟರ್, ಸ್ಕೂಟರ್ ಸಾಮರ್ಥ್ಯ 50 ಸಿಸಿ ಮೋಟಾರ್ ಶಕ್ತಿ ಗರಿಷ್ಟ 1500 ವ್ಯಾಟ್‌ಗೆ ಸೀಮಿತವಾಗಿರಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ನಿಗದಿಪಡಿಸಿದೆ. ಈ ಸಂಬಂಧ ರಸ್ತೆ ಸಾರಿಗೆ ನಿಯಮಗಳಿಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ.
ಈ ನಿರ್ಧಾರದಿಂದ ಶಾಲೆ, ಕಾಲೇಜು, ಮನೆಪಾಠಕ್ಕೆ ತೆರಳಲು ಹರೆಯದ ಬಾಲಕ-ಬಾಲಕಿಯವರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಈ ಕುರಿತು ವಿಧೇಯಕ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡನೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.