-->
ನಕಲಿ ಅಂಕಪಟ್ಟಿ ಸಲ್ಲಿಕೆ: 107 ನಕಲಿ ವಕೀಲರನ್ನು ವೃತ್ತಿಯಿಂದ ಕಿತ್ತೊಗೆದ ಭಾರತೀಯ ವಕೀಲರ ಪರಿಷತ್ತು

ನಕಲಿ ಅಂಕಪಟ್ಟಿ ಸಲ್ಲಿಕೆ: 107 ನಕಲಿ ವಕೀಲರನ್ನು ವೃತ್ತಿಯಿಂದ ಕಿತ್ತೊಗೆದ ಭಾರತೀಯ ವಕೀಲರ ಪರಿಷತ್ತು

ನಕಲಿ ಅಂಕಪಟ್ಟಿ ಸಲ್ಲಿಕೆ: 107 ನಕಲಿ ವಕೀಲರನ್ನು ವೃತ್ತಿಯಿಂದ ಕಿತ್ತೊಗೆದ ಭಾರತೀಯ ವಕೀಲರ ಪರಿಷತ್ತು





2019ರಿಂದ 2024ರ ನಡುವಿನ ಅವಧಿಯಲ್ಲಿ 107 ನಕಲಿ ವಕೀಲರನ್ನು ವಕೀಲರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಭಾರತೀಯ ವಕೀಲರ ಮಂಡಳಿ(ಬಿಸಿಐ) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


ಕಾನೂನು ವೃತ್ತಿಯಲ್ಲಿ ವೃತ್ತಿಪರತೆ ಮತ್ತು ಸಮಗ್ರತೆ ತರುವ ನಿಟ್ಟಿನಲ್ಲಿ ವಕೀಲರ ಪರಿಷತ್ತು ನಿರಂತರವಾಗಿ ಶ್ರಮಿಸುತ್ತಿದೆ. ಅದರ ಭಾಗವಾಗಿ ದೆಹಲಿ ರಾಜ್ಯದಲ್ಲಿ ಕಾನೂನು ವೃತ್ತಿಯಲ್ಲಿ ತೊಡಗಿಸಿಕೊಂಡ ನಕಲಿ ವಕೀಲರ ವಿರುದ್ಧ ಬಿಸಿಐ ಕ್ರಮ ಕೈಗೊಂಡಿದೆ.


ಭಾರತೀಯ ವಕೀಲರ ಮಂಡಳಿ(ಬಿಸಿಐ) ಸರ್ಟಿಫಿಕೇಟ್ ಆಂಡ್ ಪ್ಲೇಸ್ ಆಪ್ ಪ್ರ್ಯಾಕ್ಟೀಸ್ ರೂಲ್ಸ್‌ 2015 ಇದರ ನಿಯಮ 32ರ ಪ್ರಕಾರ ಕಾನೂನು ವೃತ್ತಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳದ ಹಾಗೂ ನಕಲಿ ವಕೀಲರುಗಳನ್ನು ಗುರುತಿಸಿ ಅವರನ್ನು ವಕೀಲರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ.


ಬಹುತೇಕ ವಕೀಲರು ನಕಲಿ ಹಾಗೂ ಖೊಟ್ಟಿ ದಾಖಲೆ ಪತ್ರಗಳನ್ನು ಸಲ್ಲಿಸಿ ರಾಜ್ಯ ವಕೀಲರ ಪರಿಷತ್ತಿನಿಂದ ವಕೀಲ ವೃತ್ತಿಯ ಸನದು ಪಡೆದುಕೊಂಡಿದ್ದರು. ಅಂಥವರನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.


ಅಜಯ್ ಶಂಕರ್ ಶ್ರೀವಾತ್ಸವ Vs ಬಾರ್ ಕೌನ್ಸಿಲ್ ಆಫ್ ಇಂಡಿಯಾ ಪ್ರಕರಣದಲ್ಲಿ ಮಾನ್ಯ ಸುಪ್ರೀಂ ಕೋರ್ಟ್‌ ನೀಡಿರುವ ನಿರ್ದೇಶನದಂತೆ ಬಿಸಿಐ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದ್ದು, ಅನುಮಾನ ಬಂದ ಪ್ರಕರಣಗಳ ಗಂಭೀರ ಪರಿಶೀಲನೆಯಲ್ಲಿ ಹಲವು ಖೊಟ್ಟಿ ದಾಖಲೆಗಳನ್ನು ನೀಡಿರುವ ವಿಷಯ ಬಯಲಾಗಿದೆ. 


ಹಲವು ವಕೀಲರು ತಮ್ಮ ವಿರುದ್ಧದ ಕಾನೂನು ಕ್ರಮವನ್ನು ತಪ್ಪಿಸಲು ತಮ್ಮ ಸನದು ಪತ್ರವನ್ನು ವಾಪಸ್ ನೀಡಿದ್ದು, ವಕೀಲ ವೃತ್ತಿಯಿಂದ ಹಿಂದೆ ಸರಿದಿದ್ದಾರೆ.


ಇದೇ ರೀತಿ, ಪ್ರತಿ ರಾಜ್ಯಗಳಲ್ಲೂ ಆಯಾ ರಾಜ್ಯದ ವಕೀಲರ ಪರಿಷತ್ತುಗಳು ನಕಲಿ ವಕೀಲರ ವಿರುದ್ಧ ಕಾನೂನು ಕ್ರಮವನ್ನು ಮುಂದುವರಿಸುವಂತೆ ಭಾರತೀಯ ವಕೀಲರ ಮಂಡಳಿ ಸೂಚನೆ ನೀಡಿದೆ.



Ads on article

Advertise in articles 1

advertising articles 2

Advertise under the article