-->
ವಕೀಲರ ಅನುಚಿತ ವರ್ತನೆ: ಜಡ್ಜ್‌ ಜೊತೆಗೆ ವಾಗ್ವಾದ, ಪೊಲೀಸರಿಂದ ಲಾಠಿ ಪ್ರಹಾರ

ವಕೀಲರ ಅನುಚಿತ ವರ್ತನೆ: ಜಡ್ಜ್‌ ಜೊತೆಗೆ ವಾಗ್ವಾದ, ಪೊಲೀಸರಿಂದ ಲಾಠಿ ಪ್ರಹಾರ

ವಕೀಲರ ಅನುಚಿತ ವರ್ತನೆ: ಜಡ್ಜ್‌ ಜೊತೆಗೆ ವಾಗ್ವಾದ, ಪೊಲೀಸರಿಂದ ಲಾಠಿ ಪ್ರಹಾರ






ನಿರೀಕ್ಷಣಾ ಜಾಮೀನು ಪ್ರಕರಣಗಳನ್ನು ಆದ್ಯತೆ ಮೇಲೆ ವಿಚಾರಣೆ ನಡೆಸಬೇಕು ಎಂಬ ವಿಷಯದಲ್ಲಿ ಜಡ್ಜ್‌ ಜೊತೆಗೆ ವಕೀಲರು ವಾಗ್ವಾದ ನಡೆಸಿದ ಪ್ರಕರಣ ಗಾಜಿಯಾಬಾದ್‌ನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ನಡೆದಿದೆ.


ಈ ಸಂದರ್ಭದಲ್ಲಿ ಜಡ್ಜ್‌ ಜೊತೆಗೆ ವಕೀಲರ ಅನುಚಿತ ವರ್ತನೆ ತೋರಿದ್ದು, ಇದರಿಂದ ಕೋಪಗೊಂಡ ನ್ಯಾಯಾಧೀಶರು ಪೊಲೀಸರನ್ನು ಕರೆಸಿದರು. ಆಕ್ರೋಶಿತ ವಕೀಲರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.


ಮೂಲಗಳ ಪ್ರಕಾರ, ಪೊಲೀಸರು ಲಾಠಿ ಪ್ರಹಾರ ಮಾಡಿದ ಕಾರಣಕ್ಕೆ ವಕೀಲರು ಆಕ್ರೋಶಗೊಂಡಿದ್ದು, ಕೋರ್ಟ್ ಆವರಣದ ಬಳಿಯೇ ಇದ್ದ ಪೊಲೀಸ್ ಔಟ್‌ ಪೋಸ್ಟ್‌ಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.





ಘಟನೆಯ ವಿವರ

ನಹರ್ ಸಿಂಗ್ ಯಾದವ್ ನೇತೃತ್ವದ ವಕೀಲರ ತಂಡ ಜಿಲ್ಲಾ ನ್ಯಾಯಾಧೀಶರಾದ ಅನಿಲ್ ಕುಮಾರ್ ಅವರ ಜೊತೆಗೆ ನಿರೀಕ್ಷಣಾ ಜಾಮೀನು ಪ್ರಕರಣಗಳನ್ನು ಆದ್ಯತೆ ಮೇರೆಗೆ ವಿಚಾರಣೆಗೆ ಪರಿಗಣಿಸಬೇಕು ಎಂದು ಮನವಿ ಮಾಡಿದ್ದರು. ಒಂದು ವೇಳೆ, ಇದು ಸಾಧ್ಯವಾಗದೇ ಇದ್ದರೆ, ಅದನ್ನು ಬೇರೆ ಪೀಠಕ್ಕೆ ವರ್ಗಾಯಿಸಬೇಕು ಎಂದು ಕೋರಿಕೆ ಸಲ್ಲಿಸಿದ್ದರು.


ತಕ್ಷಣ ವಿಚಾರಣೆ ನಡೆಸಲು ನಿರಾಕರಿಸಿದ ನ್ಯಾಯಾಧೀಶರು, ಪಟ್ಟಿ ಮಾಡಿದ ಕ್ರಮದಲ್ಲಿಯೇ ಅರ್ಜಿಗಳನ್ನು ವಿಚಾರಣೆ ನಡೆಸುವುದಾಗಿ ತಿಳಿಸಿದರು. ಇದು ವಕೀಲರು ಮತ್ತು ನ್ಯಾಯಾಧೀಶರ ಮಧ್ಯೆ ವಾಗ್ವಾದಕ್ಕೆ ಕಾರಣವಾಯಿತು.


ಪರಿಸ್ಥಿತಿ ಕೈಮೀರುತ್ತಿದೆ ಎಂದು ಅನಿಸಿದಾಗ, ನ್ಯಾಯಾಧೀಶರು ಪೊಲೀಸರ ನೆರವನ್ನು ಯಾಚಿಸಿದರು. ಆದರೆ, ಕೋರ್ಟ್ ಆವರಣ ಪ್ರವೇಶಿಸಿದ ಪೊಲೀಸರು ವಾಗ್ವಾದ ನಡೆಸುತ್ತಿದ್ದ ವಕೀಲರನ್ನು ಚದುರಿಸಲು ಮುಂದಾದರು. ಒಂದು ಹಂತದಲ್ಲಿ ಪೊಲೀಸರು ವಕೀಲರ ಮೇಲೆ ನೇರವಾಗಿ ಹಲ್ಲೆ ನಡೆಸಿದರು. ಲಾಠ ಪ್ರಹಾರ ಮಾಡಿದರು.


ಪೊಲೀಸರು ಅಮಾನುಷವಾಗಿ ನಡೆದುಕೊಂಡಿರುವುದನ್ನು ಖಂಡಿಸಿ ವಕೀಲರು ಪ್ರತಿಭಟನೆ ನಡೆಸಿದರು. ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಬೇಡಿಕೆ ಈಡೇರದಿದ್ದರೆ, ವಿವಾದಿತ ಜಿಲ್ಲಾ ನ್ಯಾಯಾಧೀಶರ ಕಲಾಪವನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.






Ads on article

Advertise in articles 1

advertising articles 2

Advertise under the article