-->
ಜಿಲ್ಲಾ ನ್ಯಾಯಾಂಗ ಮಹಿಳಾ ನೌಕರರಿಗೆ ಶಿಶುಪಾಲನಾ ರಜೆ: ಮಹತ್ವದ ಮಾರ್ಗಸೂಚಿ ಹೊರಡಿಸಿದ ಕರ್ನಾಟಕ ಹೈಕೋರ್ಟ್‌

ಜಿಲ್ಲಾ ನ್ಯಾಯಾಂಗ ಮಹಿಳಾ ನೌಕರರಿಗೆ ಶಿಶುಪಾಲನಾ ರಜೆ: ಮಹತ್ವದ ಮಾರ್ಗಸೂಚಿ ಹೊರಡಿಸಿದ ಕರ್ನಾಟಕ ಹೈಕೋರ್ಟ್‌

ಜಿಲ್ಲಾ ನ್ಯಾಯಾಂಗ ಮಹಿಳಾ ನೌಕರರಿಗೆ ಶಿಶುಪಾಲನಾ ರಜೆ: ಮಹತ್ವದ ಮಾರ್ಗಸೂಚಿ ಹೊರಡಿಸಿದ ಕರ್ನಾಟಕ ಹೈಕೋರ್ಟ್‌





ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ನೌಕರರಿಗೆ ಶಿಶು ಪಾಲನಾ ರಜೆ ಮಂಜೂರಾತಿ ಕುರಿತು ಮಾನ್ಯ ಕರ್ನಾಟಕ ಹೈಕೋರ್ಟ್ ಪತ್ರ ಸಂಖ್ಯೆ ಡಿ.ಜೆ.ಎ. 605/2121 ದಿನಾಂಕ 20.7.2024 ರಲ್ಲಿ ಹೊರಡಿಸಿದ ಮಾರ್ಗಸೂಚಿಗಳು


ಕರ್ನಾಟಕ ಸರಕಾರವು ಆದೇಶ ಸಂಖ್ಯೆ ಎಫ್‌ಡಿ 4(ಇ) ಎಸ್.ಆರ್.ಎಸ್. 2021 ದಿನಾಂಕ 21.6.2021 ರ ಪ್ರಕಾರ ಮಹಿಳಾ ಸರಕಾರಿ ನೌಕರರಿಗೆ ತಮ್ಮ ಸಂಪೂರ್ಣ ಸೇವಾ ಅವಧಿಯಲ್ಲಿ 180 ದಿನಗಳ ಶಿಶು ಪಾಲನಾ ರಜೆಯನ್ನು ಕೆಲವು ನಿಬಂಧನೆಗಳನ್ನು ವಿಧಿಸಿ ಮಂಜೂರು ಮಾಡಲು ಆದೇಶಿಸಿದೆ. ಸದರಿ ನಿಬಂಧನೆಗಳಿಗೆ ಹೆಚ್ಚುವರಿಯಾಗಿ ರಾಜ್ಯದ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಸರಕಾರಿ ನೌಕರರಿಗೆ ಶಿಶುಪಾಲನಾ ರಜೆ ಮಂಜೂರು ಮಾಡುವ ಕುರಿತು ಈ ಕೆಳಗಿನ ಮಾರ್ಗಸೂಚಿಗಳನ್ನು ದಿನಾಂಕ 20.7.2024 ರಂದು ಮಾನ್ಯ ಕರ್ನಾಟಕ ಹೈಕೋರ್ಟ್ ಹೊರಡಿಸಿದೆ.


1) ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ ಎರಡು ಬಾರಿ ಶಿಶುಪಾಲನಾ ರಜೆಯನ್ನು ಪಡೆಯಬಹುದಾಗಿದೆ. ಒಮ್ಮೆ ರಜೆಯನ್ನು ಪಡೆದು ಮೂರು ತಿಂಗಳ ಅವಧಿ ಮುಗಿದ ಬಳಿಕ ಮಾತ್ರವೇ ಎರಡನೆಯ ಬಾರಿ ರಜೆಯನ್ನು ಪಡೆಯಬಹುದಾಗಿದೆ. ಕನಿಷ್ಠ 15 ದಿನಗಳು ಹಾಗೂ ಗರಿಷ್ಠ 25 ದಿನಗಳ ಶಿಶುಪಾಲನಾ ರಜೆಯನ್ನು ಒಂದು ಬಾರಿ ಪಡೆಯಬಹುದಾಗಿದೆ. ಮಹಿಳಾ ಸರಕಾರಿ ನೌಕರರ ಮನವಿ ಹಾಗೂ ಪರಿಸ್ಥಿತಿಯನ್ನು ಪರಿಗಣಿಸಿ ಈ ನಿಬಂಧನೆಗಳನ್ನು ಜಿಲ್ಲಾ ಘಟಕದ ಮುಖ್ಯಸ್ಥರಾದ ಮಾನ್ಯ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಸಡಿಲಿಸಬಹುದು.


2) ವಿಶೇಷ ಸನ್ನಿವೇಶಗಳನ್ನು ಹೊರತುಪಡಿಸಿ ಪರಿವೀಕ್ಷಣ ಅವಧಿಯಲ್ಲಿರುವ ಮಹಿಳಾ ಸರಕಾರಿ ನೌಕರರಿಗೆ ಶಿಶು ಪಾಲನಾ ರಜೆಯನ್ನು ನಿರ್ಬಂಧಿಸಬಹುದಾಗಿದೆ


3) ತಾಲೂಕು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಎರಡು ನ್ಯಾಯಾಲಯಗಳು ಕಾರ್ಯ ನಿರ್ವಹಿಸುವ ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಿರುವ ಒಂದಕ್ಕಿಂತ ಹೆಚ್ಚು ಸಂಖ್ಯೆಯ ಮಹಿಳಾ ನೌಕರರು ಒಂದೇ ಅವಧಿಗೆ ಶಿಶುಪಾಲನ ರಜೆಯನ್ನು ಕೋರಿದ್ದಲ್ಲಿ ಮಂಜೂರಾತಿ ಪ್ರಾಧಿಕಾರವಾಗಿರುವ ಮಾನ್ಯ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಸಾರ್ವಜನಿಕ ಹಿತಾಸಕ್ತಿ ಮತ್ತು ಆಡಳಿತಾತ್ಮಕ ಕಾರಣಗಳಿಗಾಗಿ ರಜೆಯನ್ನು ಮಂಜೂರು ಮಾಡುವ ಅಥವಾ ತಿರಸ್ಕರಿಸುವ ಅಧಿಕಾರ ಹೊಂದಿರುತ್ತಾರೆ. ಒಂದೇ ನ್ಯಾಯಾಲಯವು ಕಾರ್ಯನಿರ್ವಹಿಸುತ್ತಿರುವ ತಾಲೂಕಿಗೂ ಈ ಮಾನದಂಡ ಅನ್ವಯಿಸುತ್ತದೆ.


ಅಂತಹ ಸನ್ನಿವೇಶಗಳಲ್ಲಿ ನ್ಯಾಯಾಲಯದ ಸುಗಮ ಕಾರ್ಯನಿರ್ವಹಣೆಯ ದೃಷ್ಟಿಯಿಂದ ಜೇಷ್ಟತೆಯನ್ನು ಪರಿಗಣಿಸಿ ಮಹಿಳಾ ನೌಕರರಿಗೆ ಶಿಶು ಪಾಲನಾ ರಜೆಯನ್ನು ಮಂಜೂರು ಮಾಡಲಾಗುವುದು.


ಆದರೂ ಕೆಲವು ವಿಶೇಷ ಸಂದರ್ಭಗಳಲ್ಲಿ ಅರ್ಹ ಮಹಿಳಾ ನೌಕರರಿಗೆ ಜಿಲ್ಲಾ ಘಟಕದ ಮುಖ್ಯಸ್ಥರ ವರದಿಯ ಆಧಾರದಲ್ಲಿ ಮಂಜೂರು ಮಾಡಬಹುದು.


4) ಮಹಿಳಾ ನೌಕರರು ನಿಗದಿತ ಪ್ರಪತ್ರದಲ್ಲಿ ವಿವರಗಳನ್ನು ಭರ್ತಿ ಮಾಡಿ ಸಮುಚಿತ ಹಾದಿಯಲ್ಲಿ ತಮ್ಮ ಅರ್ಜಿಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಗೆ ಸಲ್ಲಿಸಬೇಕು. ಮಹಿಳಾ ನೌಕರರ ಕಾರ್ಯನಿರ್ವಹಣೆ, ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು, ಜಿಲ್ಲಾ ಘಟಕದಲ್ಲಿ ಕಾರ್ಯನಿರ್ವಹಿಸುವ ನ್ಯಾಯಾಲಯಗಳು, ಬದಲಿ ವ್ಯವಸ್ಥೆ ಮುಂತಾದ ಅಂಶಗಳನ್ನು ಪರಿಗಣಿಸಿ ಮಾನ್ಯ ಜಿಲ್ಲಾ ನ್ಯಾಯಾಧೀಶರು ತಮ್ಮ ಘಟಕದಲ್ಲಿ ಸೇವೆ ಸಲ್ಲಿಸುವ ಮಹಿಳಾ ನೌಕರರಿಗೆ ಶಿಶು ಪಾಲನಾ ರಜೆಯನ್ನು ಮಂಜೂರು ಮಾಡಬಹುದು.


ದಿನಾಂಕ 21.6.2021ರ ಸರಕಾರಿ ಆದೇಶದ ಪ್ರಕಾರ ರಜೆಯನ್ನು ಮಂಜೂರಾತಿ ಮಾಡುವ ಪ್ರಾಧಿಕಾರವು ಶಿಶು ಪಾಲನಾ ರಜೆಯನ್ನು ಮಂಜೂರು ಮಾಡಬಹುದು. ಅಂತೆಯೇ ತಮ್ಮ ಘಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ನೌಕರರು ಶಿಶುಪಾಲನ ರಜೆ ಕೋರಿ ಅರ್ಜಿ ಸಲ್ಲಿಸಿದಾಗ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು/ಪೀಠಾಸೀನಾಧಿಕಾರಿಗಳು ಶಿಶುಪಾಲನಾ ರಜೆಯನ್ನು ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರವಾಗಿರುತ್ತಾರೆ.


ಮಾಹಿತಿ: ಶ್ರೀ ಪ್ರಕಾಶ್ ನಾಯಕ್, ಶಿರಸ್ತೇದಾರ್ ನ್ಯಾಯಾಂಗ ಇಲಾಖೆ, ಮಂಗಳೂರು

Ads on article

Advertise in articles 1

advertising articles 2

Advertise under the article