-->
NI Act Sec 138 | ಚೆಕ್ ಅಮಾನ್ಯ ಪ್ರಕರಣ: "ಪಾವತಿ ತಡೆಹಿಡಿಯಲಾಗಿದೆ" ಪ್ರಕರಣವೂ ಶಿಕ್ಷಾರ್ಹ ಅಪರಾಧ- ಕರ್ನಾಟಕ ಹೈಕೋರ್ಟ್‌

NI Act Sec 138 | ಚೆಕ್ ಅಮಾನ್ಯ ಪ್ರಕರಣ: "ಪಾವತಿ ತಡೆಹಿಡಿಯಲಾಗಿದೆ" ಪ್ರಕರಣವೂ ಶಿಕ್ಷಾರ್ಹ ಅಪರಾಧ- ಕರ್ನಾಟಕ ಹೈಕೋರ್ಟ್‌

ಚೆಕ್ ಅಮಾನ್ಯ ಪ್ರಕರಣ: "ಪಾವತಿ ತಡೆಹಿಡಿಯಲಾಗಿದೆ" ಪ್ರಕರಣವೂ ಶಿಕ್ಷಾರ್ಹ ಅಪರಾಧ- ಕರ್ನಾಟಕ ಹೈಕೋರ್ಟ್‌







"ಪಾವತಿ ತಡೆ ಹಿಡಿಯಲಾಗಿದೆ" (Payment Stopped by drawer) ಎಂಬ ಹಿಂಬರಹದೊಂದಿಗೆ ಚೆಕ್ ಅಮಾನ್ಯಗೊಂಡರೆ ಅದು ನೆಗೋಷಿಯೆಬಲ್ ಇನ್ಸ್‌ಟ್ರುಮೆಂಟ್ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.


ಕರ್ನಾಟಕ ಹೈಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.


ಆರೋಪಿ ನ್ಯಾಯಾಲಯದ ಮುಂದೆ ನಿರಾಕರಣೆಗಳ ಮೂಲಕ ಕೇವಲ ಅನುಮಾನಗಳನ್ನು ಹುಟ್ಟುಹಾಕಿದರೆ ಸಾಲದು, ಸಾಕಷ್ಟು ನಂಬಲರ್ಹ ಸಾಕ್ಷ್ಯಾಧಾರಗಳನ್ನು ಒದಗಿಸಬೇಕು. ಇಲ್ಲದಿದ್ದಲ್ಲಿ, ಸೆಕ್ಷನ್ 118 ಮತ್ತು ಸೆಕ್ಷನ್‌ 139ರ ಪ್ರಕಾರ ಪೂರ್ವಭಾವನೆಯು ಫಿರ್ಯಾದಿ ಪರವಾಗಿಯೇ ಇರುತ್ತದೆ ಎಂಬುದನ್ನು ನ್ಯಾಯಪೀಠ ಸ್ಪಷ್ಟಪಡಿಸಿದೆ.


ಈ ಪ್ರಕರಣದ ವಿಚಾರಣೆಯ ವೇಳೆ, ವಿಚಾರಣಾ ನ್ಯಾಯಾಲಯದಲ್ಲಿ ಆರೋಪಿ ತನ್ನ ಚೆಕ್ ಮತ್ತು ಅದರಲ್ಲಿ ಇರುವ ಸಹಿಯನ್ನು ಅಲ್ಲಗಳೆದಿಲ್ಲ. ಆ ಚೆಕ್‌ನ್ನು ಭದ್ರತೆಗಾಗಿ ನೀಡಲಾಗಿದೆ ಎಂಬ ಪ್ರತಿರಕ್ಷೆಯನ್ನು ಮಾತ್ರ ಮಾಡಲಾಗಿದೆ. ಆರೋಪಿ DW-1 ಆಗಿ ಸ್ವತಃ ಸಾಕ್ಷಿ ನೀಡಿದ್ದು ಬಿಟ್ಟರೆ ನ್ಯಾಯಾಲಯದ ಮುಂದೆ ಮೌಖಿಕ ಅಥವಾ ದಾಖಲೆಗಳ ಮೂಲಕ ಯಾವುದೇ ಗುರುತರವಾದ ಸಾಕ್ಷ್ಯವನ್ನು ಒದಗಿಸಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿತು.


ವಿಚಾರಣಾ ನ್ಯಾಯಾಲಯವು ಆರೋಪಿ ಪರ ಸಾಕ್ಷ್ಯ ವಿಚಾರಣೆಯನ್ನು ಆಧರಿಸಿ ಚೆಕ್ ಅಮಾನ್ಯ ಪ್ರಕರಣದಿಂದ ಅರೋಪಮುಕ್ತಗೊಳಿಸಿದೆ ಎಂಬುದನ್ನು ಗಮನಿಸಿದ ನ್ಯಾಯಪೀಠ, ಮೇಲ್ಮನವಿದಾರರ ಅರ್ಜಿಯನ್ನು ಪುರಸ್ಕರಿಸಿ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಬದಿಗಿರಿಸಿತು.


ಆರೋಪಿಗೆ ಚೆಕ್‌ನ ದ್ವಿಗುಣ ಮೊತ್ತದ ಪರಿಹಾರ ನೀಡುವಂತೆ ನಿರ್ದೇಶಿಸಿದ್ದು, ಫಿರ್ಯಾದಿಗೆ 8,90,000/- ನೀಡುವಂತೆಯೂ ಉಳಿದ 10 ಸಾವಿರ ರಾಜ್ಯದ ಬೊಕ್ಕಸಕ್ಕೆ ತುಂಬುವಂತೆಯೂ ನಿರ್ದೇಶನ ನೀಡಿದೆ. ಇದಕ್ಕೆ ತಪ್ಪಿದ್ದಲ್ಲಿ ಒಂದು ವರ್ಷದ ಜೈಲು ಶಿಕ್ಷೆಯನ್ನು ಅನುಭವಿಸುವಂತೆ ಆರೋಪಿಗೆ ಶಿಕ್ಷೆ ವಿಧಿಸಿದೆ.





Negotiable Instruments Act: when cheque is returned with the endorsement "Payment Stopped by drawer", the penal provisions of the act are attracted: Justice Ramachandra D Huddar, Karnataka High Court


ಪ್ರಕರಣ: ಪಾರ್ವತಮ್ಮ ಎಂ Vs ಚಂದ್ರಕಲಾ ವಿ.

ಕರ್ನಾಟಕ ಹೈಕೋರ್ಟ್, Crl.A. 508/2015, Dated 14-06-2024




Ads on article

Advertise in articles 1

advertising articles 2

Advertise under the article