-->
ಸಿವಿಲ್ ಜಡ್ಜರ ಪರೀಕ್ಷೆಯಲ್ಲಿ ಮಹತ್ತರ ಬದಲಾವಣೆ: ಸರ್ಕಾರ ಪ್ರಕಟಿಸಿದ ಕರಡು ನಿಯಮ ಪತ್ರ ಬಗ್ಗೆ ಮಾಹಿತಿ

ಸಿವಿಲ್ ಜಡ್ಜರ ಪರೀಕ್ಷೆಯಲ್ಲಿ ಮಹತ್ತರ ಬದಲಾವಣೆ: ಸರ್ಕಾರ ಪ್ರಕಟಿಸಿದ ಕರಡು ನಿಯಮ ಪತ್ರ ಬಗ್ಗೆ ಮಾಹಿತಿ

ಸಿವಿಲ್ ಜಡ್ಜರ ಪರೀಕ್ಷೆಯಲ್ಲಿ ಮಹತ್ತರ ಬದಲಾವಣೆ: ಸರ್ಕಾರ ಪ್ರಕಟಿಸಿದ ಕರಡು ನಿಯಮ ಪತ್ರ ಬಗ್ಗೆ ಮಾಹಿತಿ





ಸಿವಿಲ್ ನ್ಯಾಯಾಧೀಶರ ಪರೀಕ್ಷೆ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರ ನೂತನ ಕರಡು ನಿಯಮ ಪತ್ರವನ್ನು (draft rules)ನ್ನು ಪ್ರಕಟಿಸಿದೆ. ಇದರಿಂದಾಗಿ ಇನ್ನು ನಡೆಯಲಿರುವ ಸಿವಿಲ್ ಜಡ್ಜ್‌ ಪರೀಕ್ಷೆಯಲ್ಲಿ ಮಹತ್ತರ ಬದಲಾವಣೆಗಳು ಉಂಟಾಗಲಿವೆ.


ಕರ್ನಾಟಕ ನ್ಯಾಯಿಕ ಸೇವೆ (ನೇಮಕಾತಿ) ನಿಯಮಗಳು 2004ಕ್ಕೆ ರಾಜ್ಯ ಸರ್ಕಾರ ಕರಡು ನಿಯಮ ಪತ್ರದ ಮೂಲಕ ತಿದ್ದುಪಡಿ ತಂದಿದ್ದು, ಸಾರ್ವಜನಿಕರ ಅವಗಾಹನೆಗಾಗಿ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.


ಸಾರ್ವಜನಿಕರ ಅಭಿಪ್ರಾಯ, ಅಹವಾಲುಗಳನ್ನು ಆಲಿಸಿದ ನಂತರ 15 ದಿನದೊಳಗಾಗಿ ಗಜೆಟ್ ನೋಟಿಫಿಕೇಶನ್ ಹೊರಬೀಳುವ ಸಾಧ್ಯತೆ ಇದೆ.


ರಾಜ್ಯ ಸರ್ಕಾರ ಕರಡು ನಿಯಮ ಪತ್ರ (draft rules) ಪ್ರಕಾರ, ಇನ್ನು ಮುಂದೆ ಸಿವಿಲ್ ನ್ಯಾಯಾಧೀಶರ ಪರೀಕ್ಷಾ ವೇಳಾಪಟ್ಟಿಯಲ್ಲಿ ಹಳೆ ಕ್ರಿಮಿನಲ್ ಕಾನೂನುಗಳ ಜೊತೆ ಹೊಸ ಕ್ರಿಮಿನಲ್ ಕಾನೂನುಗಳು ಸಹ ಪಠ್ಯಕ್ರಮದಲ್ಲಿ ಸೇರಿಸಲಾಗುತ್ತದೆ.


ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪ್ರಕಟಿಸಿರುವ ಕರಡು ನಿಯಮ ಪತ್ರದ ಮೂಲಕ ಮಾಡಲಾದ ಸದರಿ ತಿದ್ದುಪಡಿಯು ಗಜೆಟ್ ನೋಟಿಫಿಕೇಷನ್ ಹೊರಡಿಸಿದ ನಂತರ ಜಾರಿಗೆ ಬರಲಿದೆ.


ಹಾಗಾಗಿ ಇನ್ನು ಮುಂದೆ ಸಿವಿಲ್ ನ್ಯಾಯಾಧೀಶರ ಪರೀಕ್ಷಾರ್ಥಿಗಳು ಹಳೆ ಕ್ರಿಮಿನಲ್ ಕಾನೂನುಗಳ ಜೊತೆ ಹೊಸ ಕ್ರಿಮಿನಲ್ ಕಾನೂನುಗಳನ್ನು ಸಹಾ ಓದಬೇಕಾದ ಅನಿವಾರ್ಯತೆ ಇರುತ್ತದೆ.


Ads on article

Advertise in articles 1

advertising articles 2

Advertise under the article