ನ್ಯಾಯದೇವತೆಯ ಪ್ರತಿಮೆಗೆ ಮರುವಿನ್ಯಾಸ: ಹೊಸ ರೂಪದಲ್ಲಿ ಕಂಗೊಳಿಸಲಿರುವ ಕಣ್ಣಿಂದ ಬಟ್ಟೆ ತೆಗೆದ ನ್ಯಾಯದೇವತೆ
ನ್ಯಾಯದೇವತೆಯ ಪ್ರತಿಮೆಗೆ ಮರುವಿನ್ಯಾಸ: ಹೊಸ ರೂಪದಲ್ಲಿ ಕಂಗೊಳಿಸಲಿರುವ ಕಣ್ಣಿಂದ ಬಟ್ಟೆ ತೆಗೆದ ನ್ಯಾಯದೇವತೆ
ಎಲ್ಲರಿಗೂ ನ್ಯಾಯ ಸಮಾನ... ಕಾನೂನು ಕುರುಡಲ್ಲ ಎಂಬ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ನ್ಯಾಯದೇವತೆಯ ಪ್ರತಿಮೆಯನ್ನು ಮರು ವಿನ್ಯಾಸಗೊಳಿಸಲು ಸುಪ್ರೀಂ ಕೋರ್ಟ್ ಮುಂದಾಗಿದೆ.
ನ್ಯಾಯಾಲಯ ಎಂದರೆ ತಕ್ಷಣ ನೆನಪಿಗೆ ಬರುವುದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೈಯಲ್ಲಿ ತಕ್ಕಡಿ ಹಿಡಿದುಕೊಂಡು ನಿಂತಿರುವ ನ್ಯಾಯದೇವತೆಯ ಪ್ರತಿಮೆ.
ಈ ನ್ಯಾಯದ ಸಂಕೇತ ಎನಿಸಿರುವ ಪ್ರತಿಮೆಗೆ ಮರುವಿನ್ಯಾಸಗೊಳಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಟ್ ಅವರ ನೇತೃತ್ವದಲ್ಲಿ ನ್ಯಾಯದೇವತೆಯ ಪ್ರತಿಮೆ ಮರುವಿನ್ಯಾಸಗೊಂಡಿದೆ.
ಕಣ್ಣಿಗೆ ಬಟ್ಟೆ ಕಟ್ಟದೇ ಇರುವ ಹಾಗೂ ಕೈಯಲ್ಲಿ ಕತ್ತಿಯ ಬದಲು ಸಂವಿಧಾನವನ್ನು ಹಿಡಿದಿರುವ ಹೊಸ ನ್ಯಾಯದೇವತೆಯ ಪ್ರತಿಮೆ ಸುಪ್ರೀಂ ಕೋರ್ಟ್ ಆವರಣದಲ್ಲಿ ಅನಾವರಣಗೊಂಡಿದೆ. ನ್ಯಾಯಮೂರ್ತಿಗಳ ಅಧ್ಯಯನಕ್ಕೆ ಮೀಸಲಿರುವ ಗ್ರಂಥಾಲಯದಲ್ಲಿ ಈ ಪ್ರತಿಮೆ ಲೋಕಾರ್ಪಣೆಗೊಂಡಿದೆ.
ನ್ಯಾಯದೇವತೆಯ ಕೈಯಲ್ಲಿದ್ದ ಕತ್ತಿಯ ಬದಲು ಸಂವಿಧಾನವನ್ನು ನೀಡಲಾಗಿದೆ. ಪ್ರತಿಮೆಯ ಕಣ್ಣಿಗೆ ಕಟ್ಟಲಾದ ಬಟ್ಟೆ ತೆಗೆಯಲಾಗಿದೆ. ತಕ್ಕಡಿಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದ್ದು, ಇದು ನಿಷ್ಪಕ್ಷಪಾತವನ್ನು ಪ್ರತಿಬಿಂಬಿಸುತ್ತದೆ.
ಇದು ಭಾರತೀಯ ಸಂಬಿಧಾನದ ಅನುಸಾರವೇ ನ್ಯಾಯವಿತರಣೆಯಾಗಲಿದೆ. ಎಲ್ಲರಿಗೂ ಸಮಾನ ನ್ಯಾಯ ಮತ್ತು ಕಾನೂನು ಕುರುಡಲ್ಲ ಎಂಬ ಸಂದೇಶವನ್ನು ಸಾರುವುದು ನ್ಯಾಯದೇವತೆಯ ಪ್ರತಿಮೆಯ ಮರುವಿನ್ಯಾಸದ ಹಿಂದಿನ ಉದ್ದೇಶ ಎಂದು ಉನ್ನತ ಮೂಲಗಳು ಹೇಳಿವೆ.