ಅಕ್ಟೋಬರ್ 3-10: ಕರ್ನಾಟಕ ಹೈಕೋರ್ಟ್ ದಸರಾ ರಜೆ- ತುರ್ತು ಅರ್ಜಿಗಳ ವಿಚಾರಣಾ ಪೀಠದ ವಿವರ
ಅಕ್ಟೋಬರ್ 3-10: ಕರ್ನಾಟಕ ಹೈಕೋರ್ಟ್ ದಸರಾ ರಜೆ- ತುರ್ತು ಅರ್ಜಿಗಳ ವಿಚಾರಣಾ ಪೀಠದ ವಿವರ
ಅಕ್ಟೋಬರ್ 3ರಿಂದ 10ರ ವರೆಗೆ ಕರ್ನಾಟಕ ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠ, ಧಾರವಾಡ ಮತ್ತು ಕಲ್ಬುರ್ಗಿಯ ವಿಭಾಗೀಯ ಪೀಠಗಳು ದಸರಾ ರಜೆ ಪ್ರಯುಕ್ತ ರಜೆ ಇರುತ್ತದೆ. ತುರ್ತು ಅರ್ಜಿಗಳ ವಿಚಾರಣೆ ಮಾತ್ರ ಈ ಪೀಠದಲ್ಲಿ ನಡೆಯಲಿದೆ.
ಅಕ್ಟೋಬರ್ 3ರಿಂದ 10ರ ವರೆಗೆ ಕರ್ನಾಟಕ ಹೈಕೋರ್ಟ್‌ಗೆ ರಜೆ ಇದ್ದರೂ ಅಕ್ಟೋಬರ್ 2 ರಂದು ಗಾಂಧಿ ಜಯಂತಿ ದಿನದಂದೇ ಈ ರಜೆ ಪ್ರಾರಂಭವಾಗಲಿದೆ. ಅಕ್ಟೋಬರ್ 11ರಂದು ಆಯುಧ ಪೂಜೆಯ ರಜೆ ಇರುತ್ತದೆ. ಹಾಗೂ ಆ ಬಳಿಕ ಶನಿವಾರ ಮತ್ತು ಭಾನುವಾರ ಕಳೆದ ಅಕ್ಟೋಬರ್ 14ರಂದು ಮತ್ತೆ ಪೂರ್ಣ ಪ್ರಮಾಣದಲ್ಲಿ ಕೋರ್ಟ್ ಕಲಾಪಗಳು ಅಧಿಕೃತವಾಗಿ ಆರಂಭವಾಗಲಿದೆ.
ಅಕ್ಟೋಬರ್ 4 ಮತ್ತು 9ರಂದು ರಜಾಕಾಲೀನ ಪೀಠಗಳು ಕರ್ತವ್ಯ ನಿರ್ವಹಿಸಲಿವೆ.
ಅಕ್ಟೋಬರ್ 4ರಂದು ಕಾರ್ಯನಿರ್ವಹಣೆಯ ವಿವರ
ಬೆಂಗಳೂರು ಪ್ರಧಾನ ಹೈಕೋರ್ಟ್ ಪೀಠ
ವಿಭಾಗೀಯ ಪೀಠ: ನ್ಯಾ. ಎಸ್.ಆರ್. ಕೃಷ್ಣ ಕುಮಾರ್ ಮತ್ತು ಎಂಜಿ ಉಮಾ
ಏಕಸದಸ್ಯ ಪೀಠ : ನ್ಯಾ. ವಿ. ಶ್ರೀಶಾನಂದ ಮತ್ತು ನ್ಯಾ. ಸಿ.ಎಂ. ಪೂಣಚ್ಚ
ಧಾರವಾಡ ಪೀಠ
ವಿಭಾಗೀಯ ಪೀಠ: ನ್ಯಾ. ಎಂ. ನಾಗಪ್ರಸನ್ನ ಮತ್ತು ನ್ಯಾ. ಕೆ.ಎಸ್. ಹೇಮಲೇಖ
ಏಕಸದಸ್ಯ ಪೀಠ: ನ್ಯಾ. ಎಂ. ನಾಗಪ್ರಸನ್ನ ಮತ್ತು ನ್ಯಾ. ಕೆ.ಎಸ್. ಹೇಮಲೇಖ (ಪ್ರತ್ಯೇಕವಾಗಿ)
ಕಲ್ಬುರ್ಗಿ ಪೀಠ
ವಿಭಾಗೀಯ ಪೀಠ: ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಮತ್ತು ನ್ಯಾ. ರಾಜೇಶ್ ರೈ ಕೆ.
ಏಕಸದಸ್ಯ ಪೀಠ: ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಮತ್ತು ನ್ಯಾ. ರಾಜೇಶ್ ರೈ ಕೆ. (ಪ್ರತ್ಯೇಕವಾಗಿ)
ಅಕ್ಟೋಬರ್ 9ರಂದು ಕಾರ್ಯನಿರ್ವಹಣೆಯ ವಿವರ
ಬೆಂಗಳೂರು ಪ್ರಧಾನ ಹೈಕೋರ್ಟ್ ಪೀಠ
ವಿಭಾಗೀಯ ಪೀಠ: ನ್ಯಾ. ಎಸ್.ಜಿ. ಪಂಡಿತ್ ಮತ್ತು ಎಸ್. ರಾಚಯ್ಯ
ಏಕಸದಸ್ಯ ಪೀಠ : ನ್ಯಾ. ಮೊಹಮ್ಮದ್ ನವಾಜ್ ಮತ್ತು ನ್ಯಾ. ಜಿ. ಬಸವರಾಜ (ಪ್ರತ್ಯೇಕವಾಗಿ)
ಧಾರವಾಡ ಪೀಠ
ವಿಭಾಗೀಯ ಪೀಠ: ನ್ಯಾ. ಇ.ಎಸ್. ಇಂದಿರೇಶ್ ಮತ್ತು ನ್ಯಾ. ಸಿ.ಎಂ. ಜೋಶಿ
ಏಕಸದಸ್ಯ ಪೀಠ: ನ್ಯಾ. ಇ.ಎಸ್. ಇಂದಿರೇಶ್ ಮತ್ತು ನ್ಯಾ. ಸಿ.ಎಂ. ಜೋಶಿ (ಪ್ರತ್ಯೇಕವಾಗಿ)
ಕಲ್ಬುರ್ಗಿ ಪೀಠ
ವಿಭಾಗೀಯ ಪೀಠ: ನ್ಯಾ. ಇ.ಎಸ್. ಇಂದಿರೇಶ್ ಮತ್ತು ನ್ಯಾ. ಸಿ.ಎಂ. ಜೋಶಿ
ಏಕಸದಸ್ಯ ಪೀಠ: ನ್ಯಾ. ಇ.ಎಸ್. ಇಂದಿರೇಶ್ ಮತ್ತು ನ್ಯಾ. ಸಿ.ಎಂ. ಜೋಶಿ (ಪ್ರತ್ಯೇಕವಾಗಿ)