-->
ಹೊಸದಾಗಿ ಜಾರಿಗೆ ಬಂದ ಕರ್ನಾಟಕ ನೋಂದಣಿ ಅಧಿನಿಯಮ-2023ರ ಮಹತ್ವದ ಅಂಶಗಳು

ಹೊಸದಾಗಿ ಜಾರಿಗೆ ಬಂದ ಕರ್ನಾಟಕ ನೋಂದಣಿ ಅಧಿನಿಯಮ-2023ರ ಮಹತ್ವದ ಅಂಶಗಳು

ಹೊಸದಾಗಿ ಜಾರಿಗೆ ಬಂದ ಕರ್ನಾಟಕ ನೋಂದಣಿ ಅಧಿನಿಯಮ-2023 ಮಹತ್ವದ ಅಂಶಗಳು





ನೋಂದಣಿ (ಕರ್ನಾಟಕ ತಿದ್ದುಪಡಿ) ಅಧಿನಿಯಮ 2023ಕ್ಕೆ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು 08-10-2023ರಂದು ಅಂಕಿತ ಹಾಕಿದ್ದು, ಅದರಂತೆ ಕಾಯ್ದೆ ಕರ್ನಾಟಕದಲ್ಲಿ ಜಾರಿಗೆ ಬಂದಿದೆ.


ಕರ್ನಾಟಕ ರಾಜ್ಯಕ್ಕೆ ಅನ್ವಯವಾಗುವಂತೆ ನೋಂದಣಿ ಅಧಿನಿಯಮ 1908ವನ್ನು ಜಾರಿಗೆ ತರಲಾಗಿದೆ.


ಈ ಕಾಯ್ದೆಯಲ್ಲಿ ಹೊಸ ಪ್ರಕರಣ 22-B, 22-C ಮತ್ತು 22-Dಯನ್ನು ಸೇರ್ಪಡೆ ಮಾಡಲಾಘಿದೆ.


ಈ ಸೆಕ್ಷನ್‌ಗಳು ಏನು ಹೇಳುತ್ತವೆ ಎಂಬುದನ್ನು ತಿಳಿದುಕೊಳ್ಳೋಣ...


22-B : ಸುಳ್ಳು ಸ್ಪಷ್ಟನೆಯ ದಸ್ತಾವೇಜುಗಳನ್ನು ಹಾಗೂ ಕಾನೂನಿನ ಮೂಲಕ ನಿಷೇಧಿಸಲಾದ ಇತರೆ ದಸ್ತಾವೇಜುಗಳನ್ನು ನೋಂದಣಿ ಮಾಡಲು ನಿರಾಕರಣೆ:


ಈ ಅಧಿನಿಯಮದಲ್ಲಿ ಏನೇ ಒಳಗೊಂಡಿದ್ದಾಗ್ಯೂ ನೋಂದಣಿ ಅಧಿಕಾರಿಯು ಈ ಕೆಳಕಂಡ ದಸ್ತಾವೇಜುಗಳನ್ನು ನೋಂದಣಿ ಮಾಡಲು ನಿರಾಕರಿಸತಕ್ಕದ್ದು,

ಎ) ಸುಳ್ಳು ಸ್ಪಷ್ಟನೆ ದಸ್ತಾವೇಜು

ಬಿ) ತತ್ಕಾಲದಲ್ಲಿ ಜಾರಿಯಲ್ಲಿ ಇರುವ ಯಾವುದೇ ಕೇಂದ್ರ ಅಧಿನಿಯಮ ಅಥವಾ ರಾಜ್ಯ ಅಧಿನಿಯಮದ ಮೂಲಕ ನಿಷೇಧಿಸಲಾಗಿದ್ದ ವ್ಯವಹರಣೆಗೆ ಸಂಬಂಧಿಸಿದ ದಸ್ತಾವೇಜು.

ಸಿ) ತತ್ಕಾಲದಲ್ಲಿ ಜಾರಿಯಲ್ಲಿ ಇರುವ ಯಾವುದೇ ಕೇಂದ್ರ ಅಧಿನಿಯಮ ಅಥವಾ ರಾಜ್ಯ ಅಧಿನಿಯಮದ ಅಡಿಯಲ್ಲಿ ಸಕ್ಷಮ ಪ್ರಾಧಿಕಾರಿಯು ಅಥವಾ ಯಾವುದೇ ನ್ಯಾಯಾಲಯ ಅಥವಾ ನ್ಯಾಯಾಧಿಕರಣವು ಶಾಶ್ವತವಾಗಿ ಅಥವಾ ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿದ್ದ ಯಾವುದೇ ಸ್ವತ್ತನ್ನು ಮಾರಾಟ, ದೇಣಿಗೆ, ಗೇಣಿ ಅಥವಾ ಇತರ ರೂಪದಲ್ಲಿ ವರ್ಗಾವಣೆ ಮಾಡುವುದಕ್ಕೆ ಸಂಬಂಧಿಸಿದ ದಸ್ತಾವೇಜು..

ಡಿ) ರಾಜ್ಯ ಸರ್ಕಾರವು ಅಧಿಸೂಚನೆ ಮೂಲಕ ನಿರ್ದಿಷ್ಟಪಡಿಸಬಹುದಾದ ಇತರ ದಸ್ತವೇಜು.


ಇಲ್ಲಿ ಸುಳ್ಳು ಸ್ಪಷ್ಟನೆಯ ದಸ್ತಾವೇಜು ಎಂಬ ಪದಾವಳಿಯು ಭಾರತ ದಂಡ ಸಂಹಿತೆ 1860 ಇದರ ಸೆಕ್ಷನ್ 470ರಲ್ಲಿ ಅವುಗಳಿಗೆ ಗೊತ್ತುಪಡಿಸಲಾದ ಅರ್ಥವನ್ನೇ ಹೊಂದಿದೆ.


ಸುಳ್ಳು ಸ್ಪಷ್ಟನೆಯ ದಸ್ತಾವೇಜು ಪ್ರಕರಣಗಳನ್ನು ಪರಿಗಣಿಸುವ ಉದ್ದೇಶಕ್ಕಾಗಿ ಹಕ್ಕುಸ್ವಾಮ್ಯದ ಪ್ರಶ್ನೆಯನ್ನು ಒಳಗೊಂಡಿರುವ ಪ್ರಕರಣಗಳನ್ನು ಹೊರತುಪಡಿಸುವುದು.


22-C : ಕೆಲವು ಪ್ರಕರಣಗಳಲ್ಲಿ ನೋಂದಣಿ ಮಾಡಲಾದ ದಸ್ತಾವೇಜುಗಳ ರದ್ದತಿ:


ಜಿಲ್ಲಾ ನೋಂದಣಾಧಿಕಾರಿಯು ಸ್ವಯಂ ಪ್ರೇರಣೆಯಿಂದಾಗಲೀ ಅಥವಾ ಯಾರೇ ಬಾಧಿತ ವ್ಯಕ್ತಿಯಿಂದ ಪಡೆದ ದೂರಿನ ಮೇಲಾಗಲಿ 22-B ಪ್ರಕರಣವನ್ನು ಉಲ್ಲಂಘಿಸಿ ದಸ್ತಾವೇಜಿನ ನೋಂದಣಿ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟರೆ, ಆತನು ಬರೆದುಕೊಟ್ಟವರಿಗೆ ಮತ್ತು ದಸ್ತಾವೇಜಿನ ಎಲ್ಲ ಪಕ್ಷಕಾರರಿಗೆ ತರುವಾಯದ ದಸ್ತಾವೇಜು ಯಾವುದಾದರೂ ಇದ್ದರೆ ಅವುಗಳ ಪಕ್ಷಕಾರರಿಗೆ ಮತ್ತು ಜಿಲ್ಲಾ ನೋಂದಣಾಧಿಕಾರಿಯ ಅಭಿಪ್ರಾಯದಲ್ಲಿ ದಸ್ತಾವೇಜಿನ ನೋಂದಣಿಯನ್ನು ರದ್ದುಮಾಡುವುದರಿಂದ ಬಾಧಿತವಾಗಬಹುದಾದ ಎಲ್ಲ ಇತರಗೆ ವ್ಯಕ್ತಿಗಳಿಗೆ ದಸ್ತಾವೇಜಿನ ನೋಂದಣಿಯನ್ನು ಏಕೆ ರದ್ದು ಮಾಡಬಾರದು ಎಂದು ಕಾರಣ ಕೇಳಿ ನೋಟೀಸನ್ನು ನೀಡಬೇಕು. ಅದಕ್ಕಾಗಿ ಯಾವುದೇ ಉತ್ತರನ್ನು ಸ್ವೀಕರಿಸಿದರೆ ಅದನ್ನು ಪರಿಗಣಿಸಿದ ತರುವಾಯ ಜಿಲ್ಲಾ ನೋಂದಣಾಧಿಕಾರಿಯು ದಸ್ತಾವೇಜಿನ ನೋಂದಣಿಯನ್ನು ರದ್ದುಗೊಳಿಸಬಹುದು ಮತ್ತು ಸಂಬಂಧಪಟ್ಟ ಪುಸ್ತಕಗಳು ಮತ್ತು ಸೂಚಿಯಲ್ಲಿ ಅಂತಹ ರದ್ದತಿಯ ಬಗ್ಗೆ ನಮೂದು ಮಾಡುವಂತೆ ಮಾಡತಕ್ಕದ್ದು.


22-D: ಅಪೀಲು:


22-C ಪ್ರಕರಣದ ಅಡಿಯಲ್ಲಿ ಜಿಲ್ಲಾ ನೋಂದಣಾಧಿಕಾರಿಯ ಆದೇಶದಿಂದ ಬಾಧಿತನಾದ ಯಾರೇ ವ್ಯಕ್ತಿಯ ದಸ್ತಾವೇಜಿನ ರದ್ದತಿಯ ದಿನಾಂಕದಿಂದ ಮೂವತ್ತು (30) ದಿನದೊಳಗಾಗಿ ನೋಂದಣಿ ಮಹಾ ಪರಿವೀಕ್ಷಕರಿಗೆ ಅಪೀಲನ್ನು ಸಲ್ಲಿಸಬಹುದು. ಮತ್ತು ನೋಂದಣಿ ಮಹಾ ಪರಿವೀಕ್ಷಕರು ಜಿಲ್ಲಾ ನೋಂದಣಿಯ ಆದೇಶವನ್ನು ಸ್ಥಿರೀಕರಿಸಿ ಮಾರ್ಪಡಿಸಿ ಅಥವಾ ರದ್ದುಗೊಳೀಸಿ ಆದೇಶವನ್ನು ಹೊರಡಿಸತಕ್ಕದ್ದು.



ಎರಡು ಹೊಸ ಸೆಕ್ಷನ್‌ಗಳ ಸೇರ್ಪಡೆ (81-A ಮತ್ತು 81-B)


81-A: ನೋಂದಣಿ (ಕರ್ನಾಟಕ ತಿದ್ದುಪಡಿ) ಅಧಿನಿಯಮ 2023 ಇದರ ಸೆಕ್ಷನ್ 22-Bಯನ್ನು ಉಲ್ಲಂಘಿಸಿದ ದಸ್ತಾವೇಜುಗಳ ನೋಂದಣಿಗಾಗಿ ದಂಡನೆ:


ಈ ಅಧಿನಿಯಮದಡಿ ನೇಮಕಗೊಂಡ ಪ್ರತಿಯೊಬ್ಬ ನೋಂದಣಾಧಿಕಾರಿಯು ಮತ್ತು ಈ ಅಧಿನಿಯಮದಡಿಯಲ್ಲಿ ನೋಂದಣಿಗಾಗಿ ಹಾಜರುಪಡಿಸಲಾದ ದಸ್ತಾವೇಜುಗಳ ನೋಂದಣಿ ಮಾಡುವ ಪ್ರಭಾರವನ್ನು ಹೊಂದಿರುವ, ಈ ಅಧಿನಿಯಮದ ಉದ್ದೇಶಗಳಿಗಾಗಿ ತನ್ನ ಕಚೇರಿಯಲ್ಲಿ ನಿಯೋಜನೆಗೊಂಡಿರುವ ಪ್ರತಿಯೊಬ್ಬ ವ್ಯಕ್ತಿಯು 22-B ಪ್ರಕರಣದ ಉಪ ಬಂಧಗಳನ್ನು ಉಲ್ಲಂಘಿಸಿ ದಸ್ತಾವೇಜುಗಳನ್ನು ನೋಂದಣಿ ಮಾಡಿರುವಲ್ಲಿ ಅವರು ಮೂರು ವರ್ಷಗಳ ವರೆಗೆ ವಿಸ್ತರಿಸಬಹುದಾದ ಕಾರಾವಾಸದಿಂದ ಅಥವಾ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ದಂಡಿತನಾಗತಕ್ಕದ್ದು.


ಆದರೆ, ಈ ಪ್ರಕರಣದಲ್ಲಿ ಏನೇ ಇದ್ದರೂ ಸದ್ಭಾವನೆಯಿಂದ ಮಾಡಲಾದ ದಸ್ತಾವೇಜಿನ ನೋಂದಣಿ ಸಂದರ್ಭದಲ್ಲಿ ಅನ್ವಯವಾಗತಕ್ಕದ್ದಲ್ಲ.


81-B: ಕಂಪೆನಿಯಿಂದ ಅಪರಾಧಗಳು:


ಈ ಅಧಿನಿಯಮದ ಅಡಿಯಲ್ಲಿಯ ಅಪರಾಧವನ್ನು ಮಾಡುವ ವ್ಯಕ್ತಿಯು ಒಂದು ಕಂಪೆನಿಯಾಗಿದ್ದರೆ, ಅಪರಾಧವು ನಡೆದ ಕಾಲದಲ್ಲಿ ಆ ಕಂಪೆನಿಯ ವ್ಯವಹರಣೆಗಳ ನಿರ್ವಹಣೆಗಾಗಿ ಕಂಪೆನಿಯ ಪ್ರಭಾರದಲ್ಲಿದ್ದ ಮತ್ತು ಅದಕ್ಕೆ ಜವಾಬ್ದಾರನಾಗಿದ್ದ ಪ್ರತಿಯೊಬ್ಬ ವ್ಯಕ್ತಿಯನ್ನು ಮತ್ತು ಕಂಪೆನಿಯನ್ನು ಆ ಅಪರಾಧದ ದೋಷಿ ಎಂದು ಭಾವಿಸತಕ್ಕದ್ದು. ಮತ್ತು ಅದಕ್ಕೆ ಅನುಸಾರವಾಗಿ ಆತನು ತನ್ನ ವಿರುದ್ಧದ ವ್ಯವಹರಣೆಗೆ ಮತ್ತು ದಂಡನೆಗೆ ಗುರಿಯಾಗತಕ್ಕದ್ದು.



Read This Also

ರಾಜ್ಯದಲ್ಲಿ ನೋಂದಣಿಗೆ ಸಮಸ್ಯೆ ಇಲ್ಲ: ನೋಂದಣಿ ಮತ್ತು ಮುದ್ರಾಂಕ ಆಯುಕ್ತ ದಯಾನಂದ್ ಸ್ಪಷ್ಟನೆ



Ads on article

Advertise in articles 1

advertising articles 2

Advertise under the article