ರಾಜ್ಯದಲ್ಲಿ ನೋಂದಣಿಗೆ ಸಮಸ್ಯೆ ಇಲ್ಲ: ನೋಂದಣಿ ಮತ್ತು ಮುದ್ರಾಂಕ ಆಯುಕ್ತ ದಯಾನಂದ್ ಸ್ಪಷ್ಟನೆ
Tuesday, October 22, 2024
ರಾಜ್ಯದಲ್ಲಿ ನೋಂದಣಿಗೆ ಸಮಸ್ಯೆ ಇಲ್ಲ: ನೋಂದಣಿ ಮತ್ತು ಮುದ್ರಾಂಕ ಆಯುಕ್ತ ದಯಾನಂದ್ ಸ್ಪಷ್ಟನೆ
ರಾಜ್ಯದಲ್ಲಿ ನೋಂದಣಿ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ನೋಂದಣಿ ಮತ್ತು ಮುದ್ರಾಂಕಗಳ ಆಯುಕ್ತ ಕೆ.ಎ. ದಯಾನಂದ್ ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ 21-10-2024ರಂದು ನೋಂದಣಿ ಕಾಯ್ದೆ 1908ರ ನಿಯಮ 22B ತಿದ್ದುಪಡಿಯನ್ನು ವಿರೋಧಿಸಿ ರಾಜ್ಯದ ಐದಾರು ಉಪ ನೋಂದಣಾಧಿಕಾರಿಗಳು ಕೆಲ ಕಾಲ ನೋಂದಣಿಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದರು.
ಆದರೆ, ಅವರೊಂದಿಗೆ ಉನ್ನತ ಮಟ್ಟದ ಇಲಾಖಾ ಅಧಿಕಾರಿಗಳು ಮಾತುಕತೆ ನಡೆಸಿದರು. ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿದರು. ಆ ಬಳಿಕ ಅವರ ಮನವೊಲಿಸಲಾಗಿದ್ದು, ನೋಂದಣಿ ಕಾರ್ಯ ಈಗ ಎಂದಿನಂತೆ ಮುಂದುವರಿಸಲು ಕ್ರಮ ವಹಿಸಲಾಗಿದೆ ಎಂದು ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.
ಈಗ ನೋಂದಣಿ ಮಾಡಿಸಿಕೊಳ್ಳಲು ಯಾವುದೇ ಸಮಸ್ಯೆ ಇರುವುದಿಲ್ಲ. ಯಾರು ಬೇಕಾದರೂ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಆಯುಕ್ತ ದಯಾನಂದ್ ಅವರು ಮಾಹಿತಿ ನೀಡಿದ್ದಾರೆ.