-->
ಸರ್ಕಾರಿ ನೌಕರರ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ: ಕಾನೂನಾತ್ಮಕ ಅಂಶಗಳ ಬಗ್ಗೆ ಎದ್ದಿರುವ ಪ್ರಶ್ನೆಗಳು!

ಸರ್ಕಾರಿ ನೌಕರರ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ: ಕಾನೂನಾತ್ಮಕ ಅಂಶಗಳ ಬಗ್ಗೆ ಎದ್ದಿರುವ ಪ್ರಶ್ನೆಗಳು!

ಸರ್ಕಾರಿ ನೌಕರರ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ: ಕಾನೂನಾತ್ಮಕ ಅಂಶಗಳ ಬಗ್ಗೆ ಎದ್ದಿರುವ ಪ್ರಶ್ನೆಗಳು!






ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಿದ ಆದೇಶಕ್ಕೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆ ಬಗ್ಗೆ ಸರಕಾರಿ ನೌಕರರಲ್ಲಿ ಮೂಡಿರುವ ಹಲವಾರು ಪ್ರಶ್ನೆಗಳು


ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿ ಸರಕಾರವು ದಿನಾಂಕ 7.10.2024 ರಂದು ಹೊರಡಿಸಿದ ಆದೇಶಕ್ಕೆ ಮಾನ್ಯ ಕರ್ನಾಟಕ ಹೈಕೋರ್ಟ್ ದಿನಾಂಕ 14.10.2024ರಂದು ನೀಡಿರುವ ತಡೆಯಾಜ್ಞೆಯು ರಾಜ್ಯದ ಸರಕಾರಿ ನೌಕರರಲ್ಲಿ ಕುತೂಹಲ ಮೂಡಿಸಿದ್ದು ಹಲವಾರು ಕಾನೂನಾತ್ಮಕ ಅಂಶಗಳ ಕುರಿತಾದ ಚರ್ಚೆಗೆ ಗ್ರಾಸವಾಗಿದೆ.


ಸಂಘಕ್ಕೆ ಆಡಳಿತಾಧಿಕಾರಿಯವರನ್ನು ನೇಮಿಸಿದ ಸರಕಾರಿ ಆದೇಶದ ದಿನಾಂಕದಿಂದ ಸಂಘದ ಆಡಳಿತ ಮಂಡಳಿಯು ತನ್ನ ಅಸ್ತಿತ್ವವನ್ನು ತನ್ನಿಂದ ತಾನೇ ಕಳೆದುಕೊಳ್ಳುತ್ತದೆ. ಸಂಘದ ಪದಾಧಿಕಾರಿಗಳು ಮಾಜಿ ಪದಾಧಿಕಾರಿಗಳ ಸ್ಥಾನ ಪಡೆಯುತ್ತಾರೆ. ಮಾನ್ಯ ನ್ಯಾಯಾಲಯದಲ್ಲಿ ಅಥವಾ ಸರಕಾರದ ಇಲಾಖೆ ಯಾ ಪ್ರಾಧಿಕಾರದ ಸಮಕ್ಷಮ ಸಂಘವನ್ನು ಪ್ರತಿನಿಧಿಸಲು ಆಡಳಿತಾಧಿಕಾರಿಗಳಿಗೆ ಮಾತ್ರ ಹಕ್ಕಿರುತ್ತದೆ. ಮಾಜಿ ಪದಾಧಿಕಾರಿಗಳು ಸಂಘವನ್ನು ಪ್ರತಿನಿಧಿಸಲು ಹಕ್ಕುಳ್ಳವರಾಗಿರುವುದಿಲ್ಲ.


ಆಡಳಿತಾಧಿಕಾರಿಗಳನ್ನು ನೇಮಿಸಿರುವ ಸರಕಾರಿ ಆದೇಶದಿಂದ ಬಾಧಿತ ಪದಾಧಿಕಾರಿಗಳು ಸದರಿ ಆದೇಶವನ್ನು ರದ್ದುಪಡಿಸಬೇಕೆಂದು ಕೋರಿ ವೈಯುಕ್ತಿಕ ನೆಲೆಯಲ್ಲಿ ಮಾನ್ಯ ನ್ಯಾಯಾಲಯದ ಯಾ ಸಕ್ಷಮ ಪ್ರಾಧಿಕಾರದ ಮೊರೆ ಹೋಗಬೇಕಾದದು ಸಮಂಜಸ ಕ್ರಮವಾಗಿದೆ.


ಆದರೆ ರಿಟ್ ಅರ್ಜಿ ಸಂಖ್ಯೆ 27644/2024 ಯು ಶೀರ್ಷಿಕೆಯನ್ನು ಪರಿಶೀಲಿಸಿದಾಗ ಆಡಳಿತಾಧಿಕಾರಿಯ ನೇಮಕದ ದಿನಾಂಕದಿಂದ ತಮ್ಮ ಹುದ್ದೆಗಳ ಅಸ್ತಿತ್ವ ಕಳೆದುಕೊಂಡ ರಾಜ್ಯ ಸಂಘದ ಮಾಜಿ ಪದಾಧಿಕಾರಿಗಳಾದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಯವರು ತಾವೇ ರಾಜ್ಯ ಸಂಘವನ್ನು ಪ್ರತಿನಿಧಿಸಿ ರಿಟ್ ಅರ್ಜಿ ಸಲ್ಲಿಸಿರುವುದು ಕಾನೂನಾತ್ಮಕ ಅಂಶಗಳ ಬಗ್ಗೆ ಸರಕಾರಿ ನೌಕರರಲ್ಲಿ ಚರ್ಚೆಗೆ ಗ್ರಾಸವಾಗಿದೆ.





ನೋಂದಾಯಿತ ನೌಕರರ ಸಂಘಗಳು ಕರ್ನಾಟಕ ಸಂಘಗಳ ಕಾಯ್ದೆ 1960 ರ ವ್ಯಾಪ್ತಿಗೊಳಪಟ್ಟಿದ್ದು ಸಹಕಾರ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳ ನಿಯಂತ್ರಣಕ್ಕೆ ಒಳಪಟ್ಟಿವೆ. ನೌಕರರ ಸಂಘಗಳು ಅಕ್ರಮ ವ್ಯವಹಾರಗಳಲ್ಲಿ ತೊಡಗಿಕೊಂಡಲ್ಲಿ ಅಥವಾ ಸಂಘದ ವಿರುದ್ಧ ಭ್ರಷ್ಟಾಚಾರದ ದೂರುಗಳು ಬಂದಲ್ಲಿ ಸರಕಾರವು ಸಹಕಾರ ಇಲಾಖೆಯ ಅಧಿಕಾರಿಗಳಿಂದ ವರದಿ ಪಡೆದು ಸದರಿ ವರದಿಯ ಆಧಾರದಲ್ಲಿ, ಆಡಳಿತಾಧಿಕಾರಿಯನ್ನು ನೇಮಿಸುವುದು ಅನಿವಾರ್ಯ ಎಂಬ ನಿಷ್ಕರ್ಷೆಗೆ ಬಂದಲ್ಲಿ ಸಂಘಗಳ ಕಾಯ್ದೆ 27ರಡಿ ಪ್ರದತ್ತ ಅಧಿಕಾರವನ್ನು ಚಲಾಯಿಸಿ ಸರಕಾರವು ಆಡಳಿತಾಧಿಕಾರಿಗಳನ್ನು ನೇಮಿಸಬಹುದು.


ಆಡಳಿತಾಧಿಕಾರಿಗಳನ್ನು ನೇಮಿಸಿದ ಆದೇಶದಿಂದ ಬಾಧಿತರಾದ ಸಂಘದ ಪದಾಧಿಕಾರಿಗಳು ಸದರಿ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬೇಕಾದರೆ ವೈಯುಕ್ತಿಕವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕೇ ಹೊರತು ಬರ್ಖಾಸ್ತುಗೊಂಡ ಆಡಳಿತ ಮಂಡಳಿಯ ಹುದ್ದೆಯಲ್ಲಿ ತಾವು ಇನ್ನೂ ಮುಂದುವರೆದಿದ್ದೇವೆ ಎಂಬ ನೆಲೆಯಲ್ಲಿ ಸಂಘವನ್ನು ಪ್ರತಿನಿಧಿಸಿ ಯಾವುದೇ ಪ್ರಾಧಿಕಾರ ಅಥವಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಸಂಘಗಳ ಕಾಯ್ದೆಯಡಿ ಅವಕಾಶವಿಲ್ಲ. ಆರ್ಥಿಕ ಅವ್ಯವಹಾರ, ಅಕ್ರಮ ಹಾಗೂ ಭ್ರಷ್ಟಾಚಾರದ ದೂರುಗಳ ಆಧಾರದಲ್ಲಿ ರಾಜ್ಯಾದ್ಯಂತ ಪ್ರತಿನಿತ್ಯ ಹಲವಾರು ಸಂಘಗಳಿಗೆ ಆಡಳಿತಾಧಿಕಾರಿಯ ನೇಮಕವಾಗುತ್ತದೆ. ಬರ್ಖಾಸ್ತುಗೊಂಡ ಸಂಘವನ್ನು ಪ್ರತಿನಿಧಿಸಿ ಪ್ರಕರಣ ದಾಖಲಿಸಲು ಮಾಜಿ ಪದಾಧಿಕಾರಿಗಳಿಗೆ ಅವಕಾಶವಿಲ್ಲ. ಸಂಘವನ್ನು ಪ್ರತಿನಿಧಿಸಿ ಪ್ರಕರಣದ ದಾಖಲಿಸಲು ಆಡಳಿತಾಧಿಕಾರಿಗಳು ಮಾತ್ರ ಹಕ್ಕುಳ್ಳವರಾಗಿರುತ್ತಾರೆ.


ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿದ ಆದೇಶಕ್ಕೆ ಮಾನ್ಯ ಹೈಕೋರ್ಟ್ ದಿನಾಂಕ 14.10.2024ರಂದು ಮಧ್ಯಂತರ ತಡೆಯಾಜ್ಞೆ ನೀಡಿ ಸರಕಾರಿ ವಕೀಲರ ವಾದವನ್ನು ಆಲಿಸಲು ಪ್ರಕರಣವನ್ನು ದಿನಾಂಕ 16.10.2024ಕ್ಕೆ ಮುಂದೂಡಿದೆ.


ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಐದು ವರ್ಷಗಳ ಅವಧಿ ದಿನಾಂಕ 7.8.2024ಕ್ಕೆ ಕೊನೆಗೊಂಡಿದೆ. ಅಧಿಕಾರಾವಧಿ ಮುಗಿದು ಎರಡು ತಿಂಗಳುಗಳು ಕಳೆದರು ಚುನಾವಣೆ ನಡೆದಿಲ್ಲ, ಹಲವಾರು ಜಿಲ್ಲಾ ಹಾಗೂ ತಾಲೂಕು ಶಾಖೆಗಳಲ್ಲಿ ಮತದಾರರ ಪಟ್ಟಿ ಇನ್ನೂ ಅಂತಿಮಗೊಂಡಿಲ್ಲ. ಹಲವಾರು ಜಿಲ್ಲಾ ಮತ್ತು ತಾಲೂಕು ಶಾಖೆಗಳಲ್ಲಿ ಚುನಾವಣಾ ಅಧಿಕಾರಿಗಳ ನೇಮಕವಾಗಿಲ್ಲ. ಸದಸ್ಯತ್ವ ಶುಲ್ಕ ಪಾವತಿ ಮಾಡಿದ ನೂರಾರು ಸದಸ್ಯರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ. ಮುಕ್ತ ಪಾರದರ್ಶಕ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಯುತ್ತಿಲ್ಲ ಎಂಬುದಾಗಿ ತಾಲೂಕು ಹಾಗೂ ಜಿಲ್ಲಾ ಶಾಖೆಗಳಿಂದ ಹಲವಾರು ದೂರುಗಳು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಗಳ ನೇಮಕವಾಗಿತ್ತು.


ಇದೀಗ ರಿಟ್ ಪ್ರಕರಣದ ವಿಚಾರಣೆ ದಿನಾಂಕ 16.10.2024 ರಂದು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನಡೆಯಲಿದೆ. ಮಾಜಿ ಪದಾಧಿಕಾರಿಗಳಿಗೆ ಸಂಘವನ್ನು ಪ್ರತಿನಿಧಿಸಲು ಅವಕಾಶವಿದೆಯೇ ಎಂಬ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಒಂದು ವೇಳೆ ಆಡಳಿತಾಧಿಕಾರಿಯವರ ನೇಮಕದ ಬಳಿಕ ಮಾಜಿ ಪದಾಧಿಕಾರಿಗಳು ಸಂಘವನ್ನು ಪ್ರತಿನಿಧಿಸಬಹುದು ಎಂಬ ಆದೇಶ ಹೊರ ಬಿದ್ದಲ್ಲಿ ಅಕ್ರಮ ಆರ್ಥಿಕ ಅವ್ಯಹಾರಗಳನ್ನು ನಡೆಸಿರುವ ರಾಜ್ಯದ ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಸಂಘದ ಖರ್ಚಿನಲ್ಲಿ ಕಾನೂನು ಸಮರ ಹೂಡಲು ಅವಕಾಶ ನೀಡಿದಂತಾಗುವುದು.




Ads on article

Advertise in articles 1

advertising articles 2

Advertise under the article