ಕೃಷಿ ಜಮೀನಿಗೆ ನಕ್ಷೆ: ಲಂಚ ಸ್ವೀಕರಿಸಿದ ಭೂಮಾಪಕನ ಬಂಧನ
ಕೃಷಿ ಜಮೀನಿಗೆ ನಕ್ಷೆ: ಲಂಚ ಸ್ವೀಕರಿಸಿದ ಭೂಮಾಪಕನ ಬಂಧನ
ಕೃಷಿ ಜಮೀನಿಗೆ ನಕ್ಷೆ ನೀಡಲು ಲಂಚ ಸ್ವೀಕರಿಸಿದ ಭೂಮಾಪಕನನ್ನು ಲೋಕಾಯುಕ್ತ ಪೊಲೀಸರು ಬಂಧನ ಮಾಡಿದ್ದಾರೆ.
ಬಂಧಿತ ಆರೋಪಿಯನ್ನು ಹಾವೇರಿ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಭೂಮಾಪಕ ಅಶೋಕ ಎಚ್.ಜಿ. ಎಂದು ಗುರುತಿಸಲಾಗಿದೆ.
ಈತ ಹಾವೇರಿ ತಾಲೂಕಿನ ಕಳ್ಳಿಹಾಲ ಗ್ರಾಮದ ಮಂಜುನಾಥ ಕಡ್ಲಿ ಎಂಬವರಿಂದ ರೂ. 25000 ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಮಂಜುನಾಥ ಕಡ್ಲಿ ತಮ್ಮ ಜಮೀನಿನ ಪಾಲು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಜಮೀನಿನ ನಕ್ಷೆ ಅಗತ್ಯವಾಗಿ ಬೇಕಾಗಿತ್ತು. ನಕ್ಷೆ ಮಾಡಲು ಹಾವೇರಿ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.
ಅಲ್ಲಿ ಭೂಮಾಪಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಶೋಕ ಎಚ್.ಜಿ. ಅರ್ಜಿದಾರರಿಂದ 25000 ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಅರ್ಜಿದಾರರು ಲೋಕಾಯುಕ್ತಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು.