ಸಾಮಾಜಿಕ ಜಾಲದಲ್ಲಿ ನಡೆದಿದ್ದ ಚರ್ಚೆ ವೇಳೆ ಸೇನಾನಿಗಳ ಅವಹೇಳನ: ವಾಟ್ಸ್ಯಾಪ್ ಸಂದೇಶ ಹಾಕಿದ್ದ ವಕೀಲರ ಬಂಧನ
ಸಾಮಾಜಿಕ ಜಾಲದಲ್ಲಿ ನಡೆದಿದ್ದ ಚರ್ಚೆ ವೇಳೆ ಸೇನಾನಿಗಳ ಅವಹೇಳನ: ವಾಟ್ಸ್ಯಾಪ್ ಸಂದೇಶ ಹಾಕಿದ್ದ ವಕೀಲರ ಬಂಧನ
ಸಾಮಾಜಿಕ ಜಾಲದಲ್ಲಿ ನಡೆದಿದ್ದ ಚರ್ಚೆ ವೇಳೆ ಸೇನಾನಿಗಳ ಅವಹೇಳನ ಮಾಡಿ ವಾಟ್ಸ್ಯಾಪ್ ಸಂದೇಶ ಹಾಕಿದ್ದ ವಕೀಲರೊಬ್ಬರನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಕೊಡವ ಸೇನಾನಿಗಳ ಬಗ್ಗೆ ವಾಟ್ಸ್ಯಾಪ್ ಗ್ರೂಪ್‌ವೊಂದರಲ್ಲಿ ಅವಹೇಳನಕಾರಿ ಸಂದೇಶ ಹಾಕಿದ ಆರೋಪದಲ್ಲಿ ವಕೀಲರನ್ನುಬಂಧಿಸಲಾಗಿದೆ. ಬಂಧಿತ ವಕೀಲರನ್ನು ದಕ್ಷಿಣ ಕನಕ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹಾಲೆಟ್ಟಿ ಗ್ರಾಮದ ವಿದ್ಯಾಧರ ಗೌಡ (66) ಎಂದು ಗುರುತಿಸಲಾಗಿದೆ.
ಸಪ್ತಸಾಗರ (ಕಡಲು) ಎಂಬ ವಾಟ್ಸ್ಯಾಪ್ ಗ್ರೂಪ್‌ನಲ್ಲಿ ಶ್ರೀವತ್ಸ ಭಟ್ ಎಂಬ ಹೆಸರಿನ ಮೊಬೈಲ್ ಸಂಖ್ಯೆಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಹಾಗೂ ಜನರಲ್ ಕೆ.ಎಸ್. ತಿಮ್ಮಯ್ಯ ಅವರನ್ನು ಅವಾಚ್ಯವಾಗಿ ನಿಂದಿಸಿ ಸಂದೇಶ ಹಾಕಲಾಗಿತ್ತು.
ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾಹಿತಿ ನೀಡಿದ್ದಾರೆ.
ವಾಟ್ಸ್ಯಾಪ್ ಗ್ರೂಪ್‌ನಲ್ಲಿ ನಡೆದ ಚರ್ಚೆಯ ತುಣುಕು ಸಾಮಾಜಿಕ ಜಾಲದಲ್ಲಿ ವ್ಯಾಪಕವಾಗಿ ಹರಿದಾಡಿ ವೈರಲ್ ಆಗಿತ್ತು. ಈ ಘಟನೆಯ ಬಗ್ಗೆ ಜಿಲ್ಲೆಯಲ್ಲಿ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿತ್ತು.