-->
ಜಡ್ಜ್ ಪರೀಕ್ಷೆ ಬರೆದಿದ್ದ ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ: ಡಿವೈಎಸ್‌ಪಿ ಕನಕಲಕ್ಷ್ಮಿಯನ್ನೇಕೆ ಬಂಧಿಸಿಲ್ಲ ಎಂದ ಹೈಕೋರ್ಟ್‌

ಜಡ್ಜ್ ಪರೀಕ್ಷೆ ಬರೆದಿದ್ದ ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ: ಡಿವೈಎಸ್‌ಪಿ ಕನಕಲಕ್ಷ್ಮಿಯನ್ನೇಕೆ ಬಂಧಿಸಿಲ್ಲ ಎಂದ ಹೈಕೋರ್ಟ್‌

ಜಡ್ಜ್ ಪರೀಕ್ಷೆ ಬರೆದಿದ್ದ ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ: ಡಿವೈಎಸ್‌ಪಿ ಕನಕಲಕ್ಷ್ಮಿಯನ್ನೇಕೆ ಬಂಧಿಸಿಲ್ಲ ಎಂದ ಹೈಕೋರ್ಟ್‌





ಬೋವಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ತನಿಖೆಯ ನೆಪದಲ್ಲಿ ಸಿಐಡಿ ನೀಡಿದ ಕಿರುಕುಳದಿಂದ ಮನನೊಂದು ವಕೀಲರಾದ ಎಸ್. ಜೀವಾ ಆತ್ಮಹತ್ಯೆ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ ಡಿವೈಎಸ್‌ಪಿ ಕನಕಲಕ್ಷ್ಮಿ ವಿರುದ್ಧ ತೀಕ್ಷ್ಣ ವಾಕ್ಪ್ರಹಾರ ಮಾಡಿದೆ.


ತಮ್ಮ ಮೇಲೆ ದಾಖಲಾಧ ಎಫ್‌ಐಆರ್‌ ರದ್ದು ಕೋರಿ ಎಸ್. ಜೀವಾ ಸಲ್ಲಿಸಿದ್ದ ಅರ್ಜಿ ಹಾಗೂ ಜೀವಾ ಆತ್ಮಹತ್ಯೆಗೆ ಕಾರಣರಾಗಿದ್ದಾರೆ ಎನ್ನಲಾದ ಡಿವೈಎಸ್‌ಪಿ ಕನಕಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆಕ್ರೋಶ ವ್ಯಕ್ತಪಡಿಸಿದೆ.


ಡಿವೈಎಸ್‌ಪಿ ಕನಕಲಕ್ಷ್ಮಿ ತನಿಖಾಧಿಕಾರಿಯುವ ಪ್ರಕರಣದ ಆರೋಪಿ ಎಸ್. ಜೀವಾ ಆತ್ಮಹತ್ಯೆ ಮಾಡಿಕೊಂಡಿರುವ ಮುನ್ನ ಬರೆದಿರುವ 13 ಪುಟಗಳ ಮರಣಪತ್ರದಲ್ಲಿ ಸಣ್ಣಪುಟ್ಟ ವಿಚಾರಗಳನ್ನೂ ಉಲ್ಲೇಖಿಸಿದ್ದಾರೆ ಎಂಬುದನ್ನು ಗಮನಿಸಿದ ನ್ಯಾಯಪೀಠ ಜೀವಾ ಆತ್ಮಹತ್ಯೆಗೆ ಕುರಿತು BNSS ಸೆಕ್ಷನ್ 306ರ ಆರೋಪದ ತನಿಖೆಯಾಗಲೇಬೇಕು ಎಂದು ಅಭಿಪ್ರಾಯಪಟ್ಟಿದೆ.


ಈ ಪ್ರಕರಣದ ತನಿಖೆಯೇ ಆರಂಭವಾಗಿಲ್ಲ.. ಏಕೆ..? ಸಾಮಾನ್ಯ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ ಅದು BNSS ಸೆಕ್ಷನ್ 306ರ ಆರೋಪ ಇದ್ದರೆ ಏನು ಮಾಡುತ್ತೀರಿ? ಆಗ ಬಂಧಿಸುವುದಿಲ್ಲವೇ..? ಅದು ಬಿಡಿ, IPCಯ ಸೆಕ್ಷನ್ 420 ಅಡಿಯ ಪ್ರಕರಣಗಳಲ್ಲಿ ಬಂಧನ ಮಾಡುತ್ತೀರಿ.. ವಕೀಲೆ ಜೀವಾ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಡಿವೈಎಸ್‌ಪಿ ಕನಕಲಕ್ಷ್ಮಿ ಅವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ..? ಆಕೆ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆಯೇ..? ಇಲ್ಲ.. ಏಕೆಂದರೆ, ಕಾನೂನಿನ ಅಸ್ತ್ರ ಪೊಲೀಸರನ್ನು ತಲುಪುವುದಿಲ್ಲ. ಬೇರೆಯವರನ್ನು ದೂರು ದಾಖಲಾದ ತಕ್ಷಣ ಬಂಧಿಸುತ್ತೀರಲ್ವಾ..? ಎಂದು ಪೊಲೀಸರತ್ತ ಆಕ್ರೋಶದ ಕೆಂಗಣ್ಣು ಬೀರಿತು.


ಇದೇ ವೇಳೆ, ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ಅಥವಾ ಸ್ವತಂತ್ರ ತನಿಖಾ ಸಂಸ್ಥೆಗೆ ಒಪ್ಪಿಸಬೇಕು ಎಂಬ ಅರ್ಜಿಯ ಕುರಿತು ನ್ಯಾಯಪೀಠ ತನ್ನ ಆದೇಶವನ್ನು ಶುಕ್ರವಾರಕ್ಕೆ ಕಾಯ್ದಿರಿಸಿತು. ಈ ಅರ್ಜಿಯನ್ನು ಬೆಂಗಳೂರು ವಕೀಲರ ಸಂಘ ಸಲ್ಲಿಸಿದೆ.


ವಕೀಲರ ಸಂಘದ ಪರ ಹಾಜರಾದ ಹಿರಿಯ ವಕೀಲರಾದ ಡಿ.ಆರ್. ರವಿಶಂಕರ್ ಮತ್ತು ವಿವೇಕ್ ಸುಬ್ಭಾರೆಡ್ಡಿ, ಬೆಂಗಳೂರು ಜಿಲ್ಲೆಯ ವಕೀಲರ ಕಲ್ಯಾಣಕ್ಕೆ ವಕೀಲರ ಸಂಘ ಇದೆ. ವಕೀಲೆ ಜೀವಾ ಜಡ್ಜ್ ಪರೀಕ್ಷೆ ಬರೆದಿದ್ದು, ಭಾರತೀಯ ವಕೀಲರ ಪರಿಷತ್ ಸದಸ್ಯತ್ವ ಹೊಂದಿದ್ದಾರೆ. ಎಐಬಿಇ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ ಎಂದು ಮಾಹಿತಿ ನೀಡಿದರು.


ಡಿವೈಎಸ್‌ಪಿ ಕನಕಲಕ್ಷ್ಮಿ ಲಾಟರಿ ಹಗರಣದ ಆರೋಪಿಯಾಗಿದ್ದರು. ತುಮಕೂರಿನಲ್ಲಿ ಅಧಿಕಾರಿಯಾಗಿದ್ದಾಗ ಡಿವೈಎಸ್‌ಪಿ ಕನಕಲಕ್ಷ್ಮಿ ತಮಗಿದ್ದ ತನಿಖಾಧಿಕಾರವನ್ನು ದುರ್ಬಳಕೆ ಮಾಡಿದ ಆರೋಪವನ್ನೂ ಒತ್ತುಕೊಂಡಿದ್ದಾರೆ ಈ ಬಗ್ಗೆ ಅವರ ವಿರುದ್ಧ ಖಾಸಗಿ ದೂರು ಕೂಡ ದಾಖಲಾಗಿದೆ. ಈ ಪ್ರಕರಣದ ಬೆನ್ನಲ್ಲೇ ಡಿವೈಎಸ್‌ಪಿ ಕನಕಲಕ್ಷ್ಮಿ ಪರವಾಗಿ ಬಿ ವರದಿ ಸಲ್ಲಿಸಲಾಗಿದೆ.


ಇದರ ಬೆನ್ನಲ್ಲೇ, ಹೈಕೋರ್ಟ್‌ನಲ್ಲಿ ಎಫ್‌ಐಆರ್ ರದ್ದು ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಜೀವಾ ಆತ್ಮಹತ್ಯೆ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸುವುದಾಗಿ ಹೇಳಿದೆ. ಇದರಿಂದ ಅವರ ಸಾವಿಗೆ ನ್ಯಾಯ ಸಿಗಲಾರದು. ಹೀಗಾಗಿ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಕೋರಿಕೆಯನ್ನು ಸಲ್ಲಿಸುತ್ತಿದ್ದೇವೆ ಎಂದು ವಕೀರಲ ಸಂಘ ನ್ಯಾಯಪೀಠವನ್ನು ವಿನಂತಿಸಿತು.


ತನಗೆ ಡಿಐಜಿ ಗೊತ್ತಿದೆ. ಹೆಚ್ಚುವರಿ ಡಿಐಜಿ ಅವರೂ ತಮ್ಮ ಆತ್ಮೀಯರು. ಅಷ್ಟೇ ಅಲ್ಲದೆ ನ್ಯಾಯಾಲಯಗಳು ತನಗೆ ಏನೂ ಮಾಡಲಾಗದು ಎಂದು ಡಿವೈಎಸ್‌ಪಿ ಕನಕಲಕ್ಷ್ಮಿ ಹೇಳಿದ್ಧಾರೆ ಎಂದು ಸಹ ಆರೋಪಿಗಳು ಆರೋಪಿಸಿದ್ದಾರೆ. ತನಿಖಾಧಿಕಾರಿಯ ಇಂತಹ ನಡೆಯನ್ನು ತಡೆದು ನಿಲ್ಲಿಸಬೇಕಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಎದುರುದಾರರ ಪರ ವಕೀಲರು ವಾದಿಸಿದರು.


ತನಿಖೆ ಯಾರು ನಡೆಸಬೇಕು ಎಂಬುದನ್ನು ರಾಜ್ಯ ಸರ್ಕಾರಕ್ಕೆ ಸೂಚಿಸಲು ಹೇಳಲಾಗಿತ್ತು. ಆದರೆ, ಸರ್ಕಾರದ ಆಕ್ಷೇಪಣೆಯಲ್ಲಿ ತನಿಖೆ ನಡೆಸುವ ಆಸಕ್ತಿ ಹೊಂದಿಲ್ಲ ಎಂಬುದನ್ನು ಹೇಳಿಕೆ ಮೂಲಕ ಸರ್ಕಾರ ಬಹಿರಂಗಪಡಿಸಿದೆ. ಪ್ರಮುಖ ಆರೋಪಿಯ ಸೂಚನೆಯಂತೆ ಎಎಬಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗದ ಎಂಬ ಭರವಸೆಯನ್ನು ನೀಡುತ್ತೇವೆ. ಸರ್ಕಾರ ತನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಕೋರಿಕೆ ಸಲ್ಲಿಸಿದರು.


ಜೀವಾ ಅವರನ್ನು ಬೋವಿ ಹಗರಣಕ್ಕೆ ಸಂಬಂಧಿಸಿದ ಬಗ್ಗೆ ಪ್ರಶ್ನೆಗಳನ್ನು ಮಾಡಲಾಗಿಲ್ಲ. ಡಿವೈಎಸ್‌ಪಿ ಕನಕಲಕ್ಷ್ಮಿ ತನಗೆ ಬೇಕಾದ ಉತ್ತರ ಬರುವ ನಿಟ್ಟಿನಲ್ಲಿ ಜೀವಾ ಅವರಿಗೆ ಕಿರುಕುಳ ನೀಡಿದ್ಧಾರೆ. ಈಗ ತನಿಖೆಗೆ ಸಹಕಾರ ನೀಡಿಲ್ಲ ಎಂದು ಹೇಳುತ್ತಿದ್ದಾರೆ. ಜೀವಾ ಅವರ ಸಾವಿನ ತನಿಖೆ ಮಾಡುವುದನ್ನು ಬಿಟ್ಟು, ಅವರೊಬ್ಬ ವಕೀಲರೋ.. ಅಲ್ವೋ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲು ಪೊಲೀಸರು ನ್ಯಾಯಾಲಯದಲ್ಲಿ ಓಡಾಡುತ್ತಿದ್ದಾರೆ ಎಂದು ವಕೀಲರ ವಾದಿಸಿದರು.


Ads on article

Advertise in articles 1

advertising articles 2

Advertise under the article