ಆರೋಪಿಯಿಂದ ಲಂಚ ಪಡೆದ ಪಬ್ಲಿಕ್ ಪ್ರಾಸಿಕ್ಯೂಟರ್: ಆರೋಪಿ ಎಪಿಪಿ ಪೊಲೀಸ್ ಬಲೆಗೆ
ಆರೋಪಿಯಿಂದ ಲಂಚ ಪಡೆದ ಪಬ್ಲಿಕ್ ಪ್ರಾಸಿಕ್ಯೂಟರ್: ಆರೋಪಿ ಎಪಿಪಿ ಪೊಲೀಸ್ ಬಲೆಗೆ
ತ್ವರಿತವಾಗಿ ಪ್ರಕರಣವನ್ನು ಇತ್ಯರ್ಥಗೊಳಿಸುವುದಾಗಿ ಭರವಸೆ ನೀಡಿ ಪ್ರಕರಣವೊಂದರ ಆರೋಪಿಯಿಂದ ಲಂಚ ಪಡೆಯುತ್ತಿದ್ದ ಸಹಾಯಕ ಸರ್ಕಾರಿ ಅಭಿಯೋಜಕ (ಪಬ್ಲಿಕ್ ಪ್ರಾಸಿಕ್ಯೂಟರ್)ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಪಬ್ಲಿಕ್ ಪ್ರಾಸಿಕ್ಯೂಟರ್(ಎಪಿಪಿ)ಯನ್ನು ಮೈಸೂರು ಮೂಲದ ಕೆ. ರವಿ ಎಂದು ಗುರುತಿಸಲಾಗಿದೆ.
ಆರೋಪಿಯನ್ನು ಶಿವಮೊಗ್ಗದ ಹೊಸನಗರ ಜೆಎಂಎಫ್‌ಸಿ ನ್ಯಾಯಾಲಯ ಆವರಣದಲ್ಲಿ ಬಂಧಿಸಲಾಗಿದೆ.
ದೂರುದಾರರ ಜೊತೆಗೆ ರಾಜಿ ಮಾಡಿಕೊಳ್ಳುವಂತೆ ತಿಳಿಸಿದ್ದ ರವಿ, ಆರೋಪಿ ರಿಪ್ಪನ್‌ಪೇಟೆ ಸಮೀಪದ ಅಂಜನ್ ಕುಮಾರ್ ಅವರಿಂದ 3000/- ರೂ. ಲಂಚ ಸ್ವೀಕರಿಸುತ್ತಿದ್ದಾಗ ರವಿಯನ್ನು ಬಂಧಿಸಲಾಗಿದೆ. ಈತ ರೂ. 5000/-ಕ್ಕೆ ಬೇಡಿಕೆ ಇಟ್ಟಿದ್ದ. ಈಗಾಗಲೇ ರೂ. 1000/-ನ್ನು ಈಗಾಗಲೇ ಸ್ವೀಕರಿಸಿದ್ದ ಎಂದು ದೂರುದಾರರು ತಿಳಿಸಿದ್ದರು.
ಮೈಸೂರು ಮೂಲದ ಕೆ. ರವಿ ಇತ್ತೀಚೆಗಷ್ಟೇ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ನ್ಯಾಯಾಂಗ ಇಲಾಖೆಗೆ ನಿಯುಕ್ತಿಗೊಂಡಿದ್ದರು.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಚ್. ಮಂಜುನಾಥ ಚೌಧರಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್‌ಗಳಾದ ಪ್ರಕಾಶ್, ಎಚ್.ಎಸ್. ಸುರೇಶ್, ಸಿಬ್ಬಂದಿ ಯೋಗೀಶ್, ಟೀಕಪ್ಪ, ಪ್ರಶಾಂತ್, ಚೆನ್ನೇಶ್, ಆದರ್ಶ್, ದೇವರಾಜ್, ಪ್ರಕಾರ್ಶ ಬಾರಿಮರದ, ಪುಟ್ಟಮ್ಮ, ಅಂಜಲಿ, ಗಂಗಾಧರ್, ಜಯಂತ್, ಗೋಪಿ ಮತ್ತು ತರುಣ್ ಭಾಗವಹಿಸಿದ್ದರು.