-->
ಸರ್ಕಾರಿ ಉದ್ಯೋಗ: ಅನುಕಂಪದ ಆಧಾರದಲ್ಲಿ ನೇಮಕ ಹಕ್ಕಲ್ಲ- ಸುಪ್ರೀಂ ಕೋರ್ಟ್ ತ್ರಿಸದಸ್ಯ ನ್ಯಾಯಪೀಠದ ಮಹತ್ವದ ತೀರ್ಪು

ಸರ್ಕಾರಿ ಉದ್ಯೋಗ: ಅನುಕಂಪದ ಆಧಾರದಲ್ಲಿ ನೇಮಕ ಹಕ್ಕಲ್ಲ- ಸುಪ್ರೀಂ ಕೋರ್ಟ್ ತ್ರಿಸದಸ್ಯ ನ್ಯಾಯಪೀಠದ ಮಹತ್ವದ ತೀರ್ಪು

ಸರ್ಕಾರಿ ಉದ್ಯೋಗ: ಅನುಕಂಪದ ಆಧಾರದಲ್ಲಿ ನೇಮಕ ಹಕ್ಕಲ್ಲ- ಸುಪ್ರೀಂ ಕೋರ್ಟ್ ತ್ರಿಸದಸ್ಯ ನ್ಯಾಯಪೀಠದ ಮಹತ್ವದ ತೀರ್ಪು





ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಪಡೆಯುವುದು ಯಾವುದೇ ವ್ಯಕ್ತಿಯ ಹಕ್ಕಲ್ಲ. ಮೃತ ನೌಕರನ ಸೇವಾ ಷರತ್ತುಗಳಲ್ಲಿ ಈ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ನಿಗದಿತ ಕಾಲಮಿತಿ ಬಳಿಕ ಇಂತಹ ಉದ್ಯೋಗಕ್ಕೆ ಮನವಿ ಮಾಡಿದರೆ ಅದನ್ನು ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಸುಪ್ರೀಂ ಕೋರ್ಟ್‌ನ ನ್ಯಾ. ಅಭಯ ಶ್ರೀನಿವಾಸ ಓಕಾ, ನ್ಯಾ. ಅಹ್ಸಾನುದ್ದೀನ್ ಅಮಾನುಲ್ಲ ಮತ್ತು ಆಗಸ್ಟಿನ್ ಮಾಸಿಹ್ ಅವರಿದ್ದ ತ್ರಿಸದಸ್ಯ ನ್ಯಾಯಮೂರ್ತಿಗಳ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.


ಇಂತಹ ಅನುಕಂಪದ ಆಧಾರಿತ ನೇಮಕಾತಿಯು ಸಂತ್ರಸ್ತ ಕುಟುಂಬದ ಸಂಕಷ್ಟದಲ್ಲಿ ಕೈಹಿಡಿಯಬೇಕು ಎಂಬ ಸದುದ್ದೇಶದಿಂದ ಕೂಡಿದ್ದಾಗಿದೆ. ಇದು ಆ ಕುಟುಂಬಕ್ಕೆ ಆಧಾರಸ್ತಂಬವಾಗಿದ್ದ ವ್ಯಕ್ತಿಯ ಮರಣದ ಸಂದರ್ಭದಲ್ಲಿ ಉದ್ಭವಿಸಬಹುದಾದ ಆರ್ಥಿಕ ಸಂಕಷ್ಟವನ್ನು ಎದುರಿಸಲು ಶಕ್ತಿ ನೀಡುತ್ತದೆ. ಆದರೆ, ಆ ಹುದ್ದೆ ಬಯಸುವ ಅಭ್ಯರ್ಥಿಯು ಅದನ್ನು ಒಂದು ಪರಿಪೂರ್ಣ ಹಕ್ಕನ್ನಾಗಿ ಮಂಡಿಸುವಂತಿಲ್ಲ ಎಂದು ನ್ಯಾಯಪೀಠ ಹೇಳಿದೆ.


1997ರಲ್ಲಿ ಮೃತಪಟ್ಟ ಪೊಲೀಸ್ ಕಾನ್ಸ್‌ಟೇಬರ್‌ನ ಪುತ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ನೀತಿಗೆ ವಿರುದ್ಧವಾಗಿ ಒಬ್ಬರ ಪರವಾಗಿ ಅಕ್ರಮವನ್ನು ಮುಂದುವರಿಸುವಂತೆ ರಾಜ್ಯಕ್ಕೆ ನಿರ್ದೇಶನ ನೀಡಲಾಗದು ಎಂಬುದನ್ನು ಸ್ಪಷ್ಟಪಡಿಸಿದೆ.


ಪ್ರಕರಣದ ವಿವರ:

1997ರಲ್ಲಿ ಜೈಪ್ರಕಾಶ್ ಎಂಬ ಪೊಲೀಸ್ ಕಾನ್ಸ್‌ಟೇಬಲ್‌ ಕರ್ತವ್ಯದ ವೇಳೆ ಮೃತಪಟ್ಟಿದ್ದರು. ಆಗ ಅವರ ಪುತ್ರ ಟಿಂಕುವಿಗೆ 7 ವರ್ಷ ವಯಸ್ಸು. ಪತ್ನಿ ಅನಕ್ಷರಸ್ಥೆಯಾಗಿದ್ದ ಕಾರಣ ಅನುಕಂಪದ ಆಧಾರದಲ್ಲಿ ತನಗೆ ಕೆಲಸ ಕೊಡುವಂತೆ ಅರ್ಜಿ ಹಾಕಿರಲಿಲ್ಲ. ಬದಲಿಗೆ, ಅಪ್ರಾಪ್ತ ವಯಸ್ಸಿನ ಮಗ ಪ್ರಾಯಕ್ಕೆ ಬಂದಾಗ ಅವನಿಗೆ ಕೆಲಸ ಕೊಡಬೇಕೆಂದು ಮನವಿ ಮಾಡಿದ್ದರು. ಅದರಂತೆ ಟಿಂಕು 2008ರಲ್ಲಿ ಅದೇ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು.


ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಅಧಿಕಾರಿಗಳು, ನೌಕರ ಮೃತಪಟ್ಟ ಮೂರು ವರ್ಷದೊಳಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿತ್ತು. ಪಂಜಾಬ್ ಮತ್ತು ಹರಿಯಾಣ ಸರ್ಕಾರವೂ ಈ ಮನವಿಯನ್ನು ತಿರಸ್ಕರಿಸಿವೆ. ಇದೀಗ ಸುಪ್ರೀಂ ಕೋರ್ಟ್ ಕೂಡ ಸರ್ಕಾರದ ನಿರ್ಧಾರಕ್ಕೆ ಹಸಿರು ನಿಶಾನೆ ತೋರಿದ್ದು, ಸಂತ್ರಸ್ತ ಕುಟುಂಬಕ್ಕೆ ಆರ್ಥಿಕ ನೆರವಿನ ಭರವಸೆಯನ್ನು ಒದಗಿಸಲು ನಿರ್ದೇಶಿಸುವುದಾಗಿ ಹೇಳಿದೆ.



Ads on article

Advertise in articles 1

advertising articles 2

Advertise under the article