-->
ದ.ಕ. ಸರ್ಕಾರಿ ನೌಕರರ ಸಂಘ ಚುನಾವಣೆ: ಕೋರ್ಟ್ ಆದೇಶ ಪಾಲನೆ, ನಾಮಪತ್ರ ತಿರಸ್ಕರಿಸಿದ ಆದೇಶ ರದ್ದು, ಸ್ಪರ್ಧೆಗೆ ಅವಕಾಶ: ನ್ಯಾಯಾಂಗ ನಿಂದನೆ ಪ್ರಕರಣದಿಂದ ಚುನಾವಣಾಧಿಕಾರಿ ಬಚಾವ್‌

ದ.ಕ. ಸರ್ಕಾರಿ ನೌಕರರ ಸಂಘ ಚುನಾವಣೆ: ಕೋರ್ಟ್ ಆದೇಶ ಪಾಲನೆ, ನಾಮಪತ್ರ ತಿರಸ್ಕರಿಸಿದ ಆದೇಶ ರದ್ದು, ಸ್ಪರ್ಧೆಗೆ ಅವಕಾಶ: ನ್ಯಾಯಾಂಗ ನಿಂದನೆ ಪ್ರಕರಣದಿಂದ ಚುನಾವಣಾಧಿಕಾರಿ ಬಚಾವ್‌

ದ.ಕ. ಸರ್ಕಾರಿ ನೌಕರರ ಸಂಘ ಚುನಾವಣೆ: ಕೋರ್ಟ್ ಆದೇಶ ಪಾಲನೆ, ನಾಮಪತ್ರ ತಿರಸ್ಕರಿಸಿದ ಆದೇಶ ರದ್ದು, ಸ್ಪರ್ಧೆಗೆ ಅವಕಾಶ: ನ್ಯಾಯಾಂಗ ನಿಂದನೆ ಪ್ರಕರಣದಿಂದ ಚುನಾವಣಾಧಿಕಾರಿ ಬಚಾವ್‌





ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ನೌಕರರ ಸಂಘದ‌ ಚುನಾವಣಾ ಪ್ರಕ್ರಿಯೆಯ ಕೇಂದ್ರ ಬಿಂದುವಾಗಿರುವ ನಾಮಪತ್ರ ತಿರಸ್ಕರಿಸಿದ ಪ್ರಕರಣ ಕೊನೆಗೂ ಸುಖಾಂತ್ಯಗೊಂಡಿದೆ.


ಸರ್ಕಾರಿ ನೌಕರರ ಮಾಜಿ ಜಿಲ್ಲಾಧ್ಯಕ್ಷ ಶ್ರೀ ಪ್ರಕಾಶ್ ನಾಯಕ್ ಅವರ ನಾಮಪತ್ರವನ್ನು ಕ್ರಮಬದ್ಧ ಎಂದು ಘೋಷಿಸಿದ್ದರೂ ದಿನದಾಂತ್ಯಕ್ಕೆ ನಾಮಪತ್ರವನ್ನು ತಿರಸ್ಕರಿಸಿದ್ದರು. ಈ ಮೂಲಕ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯದ ಆದೇಶ ನೀಡಿದ್ದರೂ ಅದನ್ನು ಪಾಲನೆ ಮಾಡುವಲ್ಲಿ ಚುನಾವಣಾಧಿಕಾರಿ ಹಿಂದೇಟು ಹಾಕಿದ್ದರು.


ಚುನಾವಣಾಧಿಕಾರಿಯವರ ಕ್ರಮವನ್ನು ಪ್ರಶ್ನಿಸಿ ಪ್ರಕಾಶ್ ನಾಯಕ್ ಮತ್ತೆ ನ್ಯಾಯಾಲಯದ ಕದ ಬಡಿದು, ನ್ಯಾಯಾಂಗ ನಿಂದನಾ ಪ್ರಕರಣವನ್ನು ದಾಖಲಿಸಿದ್ದರು. ಅದೇ ದಿನ ನ್ಯಾಯಾಲಯ ಮತ್ತೊಂದು ಆದೇಶವನ್ನು ಜಾರಿಗೊಳಿಸಿ ನಾಮಪತ್ರ ತಿರಸ್ಕರಿಸಿದ ಅಧಿಕಾರಿಗೆ ಚಾಟಿ ಬೀಸಿತ್ತು. ಮಾತ್ರವಲ್ಲದೆ, ಗಂಭೀರ ಪರಿಣಾಮದ ಎಚ್ಚರಿಕೆಯನ್ನೂ ನೀಡಿತ್ತು.


ಇದಾದ ಬೆನ್ನಲ್ಲೇ ಚುನಾವಣಾಧಿಕಾರಿಯು ರಜೆಯ ಕಪಟ ನಾಟಕ ಆಡಿ, ಆ ದಿನ ಕೋರ್ಟ್ ಆದೇಶ ಜಾರಿಯಾಗದಂತೆ ತಲೆಮರೆಸಿಕೊಂಡರು. ಬಾಧಿತ ಅರ್ಜಿದಾರರು ಮತ್ತೆ ಕೋರ್ಟ್‌ನಿಂದ ಆದೇಶ ಪಡೆದುಕೊಂಡಿದ್ದು, ವಾಟ್ಸ್ಯಾಪ್, ಇಮೇಲ್ ಮತ್ತು ಆದೇಶವನ್ನು ಸಂಘದ ಕಚೇರಿಯ ಬಾಗಿಲಿಗೆ ಅಂಟಿಸುವ ಆದೇಶವನ್ನು ಪಡೆದುಕೊಂಡರು. 


ಈ ಆದೇಶ ಜಾರಿ ಪ್ರಕ್ರಿಯೆಯನ್ನು ಪೊಲೀಸರ ಸಮ್ಮುಖದಲ್ಲಿ ಅವರ ಸಹಕಾರವನ್ನು ಪಡೆದುಕೊಳ್ಳುವಂತೆ ನ್ಯಾಯಾಲಯ ನಿರ್ದಿಷ್ಟ ನಿರ್ದೇಶನವನ್ನು ನೀಡಿತ್ತು. ಇದರಿಂದ ಚುನಾವಣಾಧಿಕಾರಿ ಸಂಭಾವ್ಯ ನ್ಯಾಯಾಂಗ ನಿಂದನೆಯನ್ನು ತಮ್ಮ ತಲೆಗೆ ಎಳೆದುಕೊಳ್ಳುವ ಸೂಚನೆ ನೀಡಿದ್ದರು.


ಆದರೆ, ಬುಧವಾರ ನ್ಯಾಯಾಲಯದ ಆದೇಶ ಜಾರಿಗೊಳ್ಳುತ್ತಲೇ ಚುನಾವಣಾಧಿಕಾರಿ ತಮ್ಮ ತಪ್ಪನ್ನು ಅರಿತುಕೊಂಡು, ನಾಮಪತ್ರ ತಿರಸ್ಕರಿಸಿದ ಆದೇಶವನ್ನು ರದ್ದುಪಡಿಸಿದರು. 


ನ್ಯಾಯಾಲಯದ 7-11-2024 ಮತ್ತು 11-11-2024ರ ಆದೇಶವನ್ನು ಉಲ್ಲೇಖಿಸಿದ ಚುನಾವಣಾಧಿಕಾರಿಯು ತಾವು ಈ ಹಿಂದೆ ಆದೇಶವನ್ನು ರದ್ದುಪಡಿಸಿದ್ದು, ಪ್ರಕಾಶ್ ನಾಯಕ್ ಅವರ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟರು.


16-11-2024ರಂದು ನಡೆಯಲಿರುವ ಚುನಾವಣೆಯಲ್ಲಿ ಪ್ರಕಾಶ್ ನಾಯಕ್ ಅವರು ಮತ ಚಲಾಯಿಸಲು ಮತ್ತು ಸದರಿಯವರ ನಾಮಪತ್ರವನ್ನು ಪರಿಗಣಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ನ್ಯಾಯಾಲಯ ಆದೇಶ ಮಾಡಿದೆ. ಈ ಹಿನ್ನೆಲೆಯಲ್ಲಿ ಘನ ನ್ಯಾಯಾಲಯದ ಆದೇಶದಂತೆ ಈಗಾಗಲೇ ಮತಕ್ಷೇತ್ರ ಸಂಖ್ಯೆ 47 ನ್ಯಾಯಾಂಗ ಇಲಾಖೆಯ ಅವಿರೋಧವಾಗಿ ಆಯ್ಕೆಯಾದ ಜಿಲ್ಲೆಯ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಪಟ್ಟಿಯನ್ನು ರದ್ದುಪಡಿಸಿ ಆ ಸ್ಥಾನಕ್ಕೆ ಚುನಾವಣೆಯನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ.


ಇದರಿಂದ ನ್ಯಾಯಾಂಗ ಇಲಾಖೆಯ ಶಿರಸ್ತೇದಾರ್ ಅಗಿರುವ ಪ್ರಕಾಶ್ ನಾಯಕ್ ಅವರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ.


ಈ ಮೂಲಕ ಒಂದು ವಾರದಿಂದ ಕಾನೂನು ಸಮರದ ಮೂಲಕ ವಿವಾದದ ಗೂಡಾಗಿದ್ದ ಚುನಾವಣಾ ಪ್ರಕ್ರಿಯೆಯ ನಾಮಪತ್ರ ತಿರಸ್ಕರಿಸಿದ ಪ್ರಕರಣ ಸುಖಾಂತ್ಯಗೊಂಡಿದೆ.



Sri Prakash Nayak, Shirasthedar, Mangalore Court Complex


Ads on article

Advertise in articles 1

advertising articles 2

Advertise under the article