ಲೈಂಗಿಕ ದೌರ್ಜನ್ಯ ಪ್ರಕರಣ: ಹರೆಯದ ಪ್ರೇಮಿಗಳಲ್ಲಿ ಆಲಿಂಗನ, ಚುಂಬನ ಸಾಮಾನ್ಯ ಎಂದ ಹೈಕೋರ್ಟ್
ಲೈಂಗಿಕ ದೌರ್ಜನ್ಯ ಪ್ರಕರಣ: ಹರೆಯದ ಪ್ರೇಮಿಗಳಲ್ಲಿ ಆಲಿಂಗನ, ಚುಂಬನ ಸಾಮಾನ್ಯ ಎಂದ ಹೈಕೋರ್ಟ್
ಹರೆಯದ ಪ್ರೇಮಿಗಳಲ್ಲಿ ಆಲಿಂಗನ, ಚುಂಬನ ಸಾಮಾನ್ಯ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ ಮತ್ತು ಯುವಕನ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ರದ್ದುಮಾಡಿ ಆದೇಶ ಹೊರಡಿಸಿದೆ.
ಮದ್ರಾಸ್ ಹೈಕೋರ್ಟ್‌ನ ನ್ಯಾ. ಆನಂದ್ ವೆಂಕಟೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ದೂರುದಾರೆ ಮತ್ತು ಆರೋಪಿ ಇಬ್ಬರೂ ಸಹ ಹದಿಹರೆಯಕ್ಎಕ ಸೇರಿದವರಾಗಿದ್ದಾರೆ. ಪರಸ್ಪರ ಪ್ರೀತಿಯಲ್ಲಿ ಇದ್ದಾಗ, ಹಗ್ ಮಾಡುವುದು ಅಥವಾ ಕಿಸ್ ಕೊಡುವುದು ಇವೆಲ್ಲ ಸಾಮಾನ್ಯ ಪ್ರಕ್ರಿಯೆಗಳು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
19 ವರ್ಷದ ಯುವತಿಯೊಬ್ಬಳು ತನ್ನ ಬಾಯ್‌ಫ್ರೆಂಡ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಆತ ತನ್ನ ಪ್ರೇಮಿಯಾಗಿದ್ದು, ತಬ್ಬಿಕೊಂಡಿದ್ದಲ್ಲದೆ ಆತ ನನಗೆ ಮುತ್ತು ಕೂಡ ಕೊಟ್ಟಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಳು.
ಆದರೆ, ಪ್ರೇಮಿ ಯುವಕ ಈಗ ನನ್ನನ್ನು ಮದುವೆಯಾಗಲು ನಿರಾಕರಿಸುತ್ತಿದ್ದಾನೆ ಎಂದು ದೂರು ಯುವಕನ ವಿರುದ್ಧ ಯುವತಿ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದಳು. ಈ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿ ಆರೋಪಿ ಯುವಕ ಹೈಕೋರ್ಟ್ ಮೆಟ್ಟಿಲೇರಿದ್ದ.