ಸರ್ಕಾರಿ ನೌಕರರ ಸೇವಾ ದಾಖಲೆಯಲ್ಲಿ ವಿವಾಹಿತ ಪುತ್ರಿಯರ ಹೆಸರೂ ಕಡ್ಡಾಯ: ಪಿಂಚಣಿ ಇಲಾಖೆ ನಿರ್ದೇಶನ
ಸರ್ಕಾರಿ ನೌಕರರ ಸೇವಾ ದಾಖಲೆಯಲ್ಲಿ ವಿವಾಹಿತ ಪುತ್ರಿಯರ ಹೆಸರೂ ಕಡ್ಡಾಯ: ಪಿಂಚಣಿ ಇಲಾಖೆ ನಿರ್ದೇಶನ
ಸರ್ಕಾರಿ ನೌಕರರು ತಮ್ಮ ಸೇವಾ ದಾಖಲೆಯಲ್ಲಿ ವಿವಾಹಿತ ಪುತ್ರಿಯರ ಹೆಸರನ್ನು ಅಳಿಸುವಂತಿಲ್ಲ. ಅವರು ತವರು ಮನೆಯ ಅವಿಭಾಜ್ಯ ಸದಸ್ಯರು. ಹಾಗಾಗಿ, ವಿವಾಹಿತ ಪುತ್ರಿಯರ ಹೆಸರೂ ಕಡ್ಡಾಯ ಎಂದು ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ - (DOPPW) ನಿರ್ದೇಶನ ನೀಡಿದೆ.
ಪುತ್ರಿಯರಿಗೆ ಮದುವೆಯಾಗಿದ್ದರೂ, ಅಥವಾ ಅವರು ಉದ್ಯೋಗದಲ್ಲಿ ಇದ್ದರೂ, ಪಿಂಚಣಿ ಪಡೆಯುವ ಅರ್ಹತೆ ಇಲ್ಲದಿದ್ದರೂ ನೌಕರರು ಪುತ್ರಿಯರ ಹೆಸರುಗಳನ್ನು ಕುಟುಂಬದ ದಾಖಲೆಗಳಲ್ಲಿ ಉಲ್ಲೇಖಿಸಿರಬೇಕು ಎಂದು ಇಲಾಖೆ ತನ್ನ ನಿರ್ದೇಶನದಲ್ಲಿ ತಿಳಿಸಿದೆ.
ಸರ್ಕಾರಿ ನೌಕರರು ನಿವೃತ್ತರಾದ ಬಳಿಕ ಪುತ್ರಿಯರ ಹೆಸರುಗಳನ್ನು ಉಳಿಸಿಕೊಳ್ಳುವ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಎಲ್ಲ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ನಿರ್ದೇಶನ ನೀಡಿದೆ.
ಪಿಂಚಣಿದಾರರು ಹಾಗೂ ಅವರ ಪುತ್ರರು ಅಥವಾ ಪಿಂಚಣಿ ಪಡೆಯಲು ಅರ್ಹರಾದವರು ಇಲ್ಲದಿದ್ದರೆ, ಮೃತಪಟ್ಟಿದ್ದರೆ, ಆಗ ಮಾತ್ರ ಪುತ್ರಿಯರು ಪಿಂಚಣಿ ಪಡೆಯಲು ಅರ್ಹರು ಎಂದು ನಿರ್ದೇಶನದಲ್ಲಿ ತಿಳಿಸಲಾಗಿದೆ.
ಪುತ್ರಿಯರು ಮದುವೆಯಾಗುವ ವರೆಗೆ ಪಿಂಚಣಿಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ವಿಚ್ಚೇದನ ಪಡೆದಿದ್ದರೆ, ಪತಿ ತೀರಿಕೊಂಡಿದ್ದರೂ ಅವರು ಪಿಂಚಣಿಯ ಲಾಭ ಪಡೆಯಬಹುದಾಗಿದೆ ಎಂಬುದನ್ನು ಇಲಾಖೆ ಸ್ಪಷ್ಟಪಡಿಸಿದೆ.
ಮದುವೆಯಾಗಿ ಬೇರೆ ಮನೆಗೆ ಅವರು ತೆರಳಿದ್ದರೂ ಪುತ್ರಿಯರು ತಮ್ಮ ತವರು ಮನೆಯ ಕುಟುಂಬದ ಅವಿಭಾಜ್ಯ ಸದಸ್ಯರಾಗಿರುತ್ತಾರೆ ಎಂಬುದನ್ನು ಇಲಾಖೆಯ ನಿರ್ದೇಶದನಲ್ಲಿ ಸ್ಪಷ್ಟಪಡಿಸಲಾಗಿದೆ.