-->
ಜಡ್ಜ್ ಕುರಿತ ಅವಹೇಳನಕಾರಿ ಪೋಸ್ಟ್‌: ವಕೀಲನ ವಿರುದ್ಧದ ಕೇಸ್ ರದ್ದತಿಗೆ ಹೈಕೋರ್ಟ್ ನಕಾರ

ಜಡ್ಜ್ ಕುರಿತ ಅವಹೇಳನಕಾರಿ ಪೋಸ್ಟ್‌: ವಕೀಲನ ವಿರುದ್ಧದ ಕೇಸ್ ರದ್ದತಿಗೆ ಹೈಕೋರ್ಟ್ ನಕಾರ

ಜಡ್ಜ್ ಕುರಿತ ಅವಹೇಳನಕಾರಿ ಪೋಸ್ಟ್‌: ವಕೀಲನ ವಿರುದ್ಧದ ಕೇಸ್ ರದ್ದತಿಗೆ ಹೈಕೋರ್ಟ್ ನಕಾರ





ಉತ್ತರ ಪ್ರದೇಶದ ಜ್ಞಾನವ್ಯಾಪಿ ಪ್ರಕರಣದ ತೀರ್ಪಿಗೆ ಸಂಬಂಧಿಸಿದಂತೆ ಅಲ್ಲಿನ ಜಿಲ್ಲಾ ನ್ಯಾಯಾಧೀಶರ ಬಗ್ಗೆ ಅವಹೇಳನ ಪೋಸ್ಟ್‌ ಹಾಕಿದ್ದ ವಕೀಲರಿಗೆ ಸಂಕಷ್ಟ ಎದುರಾಗಿದೆ. ಜಡ್ಜ್‌ ಅವರನ್ನು ಅವಹೇಳನ ಮಾಡಿದ್ದ ವಕೀಲರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.


ಕರ್ನಾಟಕ ಹೈಕೋರ್ಟ್‌ನ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಅವರು ಈ ತೀರ್ಪು ನೀಡಿದ್ದು, ರಾಮನಗರದ ವಕೀಲ ಛನ್ ಪಾಷಾ ಐಜೂರು ಅವರ ವಿರುದ್ಧ ದಾಖಲಾದ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದೆ.


ಯಾವುದೇ ಹೇಳಿಕೆ ನೀಡುವುದಕ್ಕೆ ಒಂದು ಮಿತಿ ಇರುತ್ತದೆ. ಫೇಸ್‌ಬುಕ್ ಪೋಸ್ಟ್‌ನಲ್ಲಿ ಭಯಾನಕ ಪದಗಳನ್ನು ಬಳಸಲಾಗಿದೆ. ನಿಜವಾಗಿಯೂ ಇದೊಂದು ದುರ್ವರ್ತನೆ. ಹಾಗಾಗಿ, ನಾನು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಬೇಕಿದ್ದರೆ ನೀವು ವಿಚಾರಣಾ ನ್ಯಾಯಾಲಯದ ಮುಂದೆ ಆರೋಪಗಳನ್ನು ಕೈಬಿಡುವಂತೆ ಮನವಿ ಸಲ್ಲಿಸಿ ಅರ್ಜಿ ಹಾಕಿಕೊಳ್ಳಿ ಎಂದು ನ್ಯಾಯಪೀಠ ಅರ್ಜಿದಾರರ ವಕೀಲರಿಗೆ ಸೂಚಿಸಿದೆ.


ಪ್ರಕರಣದ ವಿವರ:

ಉತ್ತರ ಪ್ರದೇಶದ ಜ್ಞಾನವ್ಯಾಪಿ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅಲ್ಲಿನ ಜಿಲ್ಲಾ ನ್ಯಾಯಾಲಯದ ಜನವರಿ 31ರಂದು ಅವಕಾಶ ಕಲ್ಪಿಸಿ ಆದೇಶ ಮಾಡಿತ್ತು. ಈ ಆದೇಶವನ್ನು ಆಕ್ಷೇಪಿಸಿ ರಾಮನಗರ ವಕೀಲರ ಸಂಘದ ಸದಸ್ಯ ಹಾಗು SPDI ಮುಖಂಡ ಚಾನ್ ಪಾಶಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದರು.


ಇದನ್ನು ಆಧರಿಸಿ ಬಿಜೆಪಿ ನಾಯಕ ಶಿವಾನಂದ, ಪಾಷಾ ಅವರ ವಿರುದ್ಧ ರಾಮನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ ರಾಮನಗರ ಜಿಲ್ಲಾ ವಕೀಲರ ಸಂಘ ಅವರ ವಿರುದ್ಧ ಕ್ರಮ ಕೈಗೊಳ್ಳಲು ಫೆಬ್ರವರಿ 6ರಂದು ಸಂಜೆ ಸರ್ವ ಸದಸ್ಯರ ಸಭೆ ಕರೆದಿತ್ತು. ಆಗ ದಲಿತ ಮತ್ತು ಪ್ರಗತಿಪರ ಮುಖಂಡರ ನಿಯೋಗವು ರಾಮನಗರ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿಯನ್ನು ಭೇಟಿ ಮಾಡಿ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಂತೆ ಮನವಿ ಮಾಡಿತ್ತು.


Ads on article

Advertise in articles 1

advertising articles 2

Advertise under the article