-->
ಜನಪ್ರಿಯವಾಗುತ್ತಿದೆ ವಕೀಲರ ವೃತ್ತಿ: ರಾಜ್ಯ ವಕೀಲ ಪರಿಷತ್ತಿನ ಇತಿಹಾಸದಲ್ಲೇ ದಾಖಲೆಯ ಸದಸ್ಯತ್ವ ನೋಂದಣಿ

ಜನಪ್ರಿಯವಾಗುತ್ತಿದೆ ವಕೀಲರ ವೃತ್ತಿ: ರಾಜ್ಯ ವಕೀಲ ಪರಿಷತ್ತಿನ ಇತಿಹಾಸದಲ್ಲೇ ದಾಖಲೆಯ ಸದಸ್ಯತ್ವ ನೋಂದಣಿ

ಜನಪ್ರಿಯವಾಗುತ್ತಿದೆ ವಕೀಲರ ವೃತ್ತಿ: ರಾಜ್ಯ ವಕೀಲ ಪರಿಷತ್ತಿನ ಇತಿಹಾಸದಲ್ಲೇ ದಾಖಲೆಯ ಸದಸ್ಯತ್ವ ನೋಂದಣಿ





ವಕೀಲರ ವೃತ್ತಿ ಜನಪ್ರಿಯವಾಗುತ್ತಿದೆ. ಹೊಸ ಯುವ ಸಮುದಾಯ ನ್ಯಾಯಾಂಗ ಸೇವೆಗೆ ಹರಿದುಬರುತ್ತಿರುವುದಕ್ಕೆ ಇದು ಸಾಕ್ಷಿಯಾಗುತ್ತಿದೆ. ಕರ್ನಾಟಕ ರಾಜ್ಯ ವಕೀಲ ಪರಿಷತ್ತಿನ ಇತಿಹಾಸದಲ್ಲೇ ದಾಖಲೆಯ ಸದಸ್ಯತ್ವ ನೋಂದಣಿಯಾಗಿದ್ದು, ಈ ವರ್ಷ ಎರಡು ಸಾವಿರಕ್ಕೂ ಅಧಿಕ ನವ ಪದವೀಧರರು ವಕೀಲರಾಗಿ ಕೆಎಸ್‌ಬಿಸಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ.


64 ವರ್ಷಗಳ ಇತಿಹಾಸದಲ್ಲೇ ಕರ್ನಾಟಕ ರಾಜ್ಯ ವಕೀಲ ಪರಿಷತ್ತಿನ (ಕೆಎಸ್‌ಬಿಸಿ) 2103 ವಕೀಲರು ನೋಂದಣಿಯಾಗಿದ್ದಾರೆ. ಇದೊಂದು ಹೊಸ ಮೈಲುಗಲ್ಲಾಗಿದೆ.


ಅಕ್ಟೋಬರ್ 22ರಂದು ಕೆಎಸ್‌ಬಿಸಿಯಿಂದ ಕಾನೂನು ಪದವಿ ಹೊಂದಿರುವವರು ವಕೀಲರ ಸನದು ಪಡೆಯುವ ನಿಟ್ಟಿನಲ್ಲಿ ನೋಂದಣಿ ಅಭಿಯಾನ ಹಮ್ಮಿಕೊಂಡಿತ್ತು. ಆ ದಿನ ದೊಡ್ಡ ಪ್ರಮಾಣದಲ್ಲಿ ವಕೀಲರು ನೋಂದಣಿ ಮಾಡಿಸಿಕೊಂಡಿದ್ದಾರೆ.


ಈ ಪೈಕಿ ಪುರುಷರು ದೊಡ್ಡ ಸಂಖ್ಯೆಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಅಖಿಲ ಭಾರತ ನ್ಯಾಯವಾದಿ ವರ್ಗದ ಪರೀಕ್ಷೆಗಳು ನಡೆಯಲಿದೆ. ಇದರಿಂದ ಹೆಚ್ಚಿನ ಕಾನೂನು ಪದವೀಧರರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಕೆಎಸ್‌ಬಿಸಿಯ ನೋಂದಣಿ ಸಮಿತಿ ಸದಸ್ಯ ಹರೀಶ್ ಅವರು ಮಾಹಿತಿ ನೀಡಿದ್ದಾರೆ.


ನ್ಯಾಯಾಂಗ, ಔದ್ಯಮಿಕ, ಕಾರ್ಪೊರೇಟ್ ವಲಯ ಮತ್ತು ಸರ್ಕಾರಿ ಕ್ಷೇತ್ರದಲ್ಲಿ ವಕೀಲರಿಗೆ ದೊಡ್ಡ ಮಟ್ಟದಲ್ಲಿ ಅವಕಾಶಗಳು ದೊರೆಯುತ್ತಿದೆ. ಉನ್ನತ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡುವತ್ತ ಯುವ ವಕೀಲರು ಹೆಚ್ಚೆಚ್ಚು ಒಲವು ತೋರುತ್ತಿದ್ದಾರೆ ಎಂದು ಪರಿಷತ್ತಿನ ಪದಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.


Ads on article

Advertise in articles 1

advertising articles 2

Advertise under the article