ಗ್ರಾಹಕರಿಗೆ ಮತ್ತೊಂದು ಶಾಕ್ ನೀಡಿದ ಸ್ಟೇಟ್ ಬ್ಯಾಂಕ್: ಇನ್ನು ಈ ಕಾರ್ಡ್ ದುಬಾರಿ! ತಕ್ಷಣದಿಂದಲೇ ಜಾರಿ!
ಗ್ರಾಹಕರಿಗೆ ಮತ್ತೊಂದು ಶಾಕ್ ನೀಡಿದ ಸ್ಟೇಟ್ ಬ್ಯಾಂಕ್: ಇನ್ನು ಈ ಕಾರ್ಡ್ ದುಬಾರಿ! ತಕ್ಷಣದಿಂದಲೇ ಜಾರಿ!
ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಮತ್ತೊಂದು ಶಾಕ್ ನೀಡಿದೆ. ನೀವು ಎಸ್‌ಬಿಐ ಕಾರ್ಡ್ ಹೊಂದಿದ್ದರೆ ದಯವಿಟ್ಟು ಈ ಸುದ್ದಿಯನ್ನು ತಪ್ಪದೆ ಸಂಪೂರ್ಣವಾಗಿ ಓದಿ..
ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಕ್ರೆಡಿಟ್ ಕಾರ್ಡ್ ಶುಲ್ಕವನ್ನು ಪರಿಷ್ಕರಿಸಿದೆ. ಶುಕ್ರವಾರದಿಂದ ಈ ಹೊಸ ಶುಲ್ಕ ಜಾರಿಗೆ ಬರಲಿದೆ.
ಹಣಕಾಸಿ ಭದ್ರತೆ ಇಲ್ಲದ ಅಂದರೆ 'ಅನ್ ಸೆಕ್ಯೂರ್ಡ್" ಕಾರ್ಡ್‌ಗಳ ಮೇಲಿನ ಮಾಸಿಕ ಫೈನಾನ್ಸ್ ಶುಲ್ಕವನ್ನು ಶೇಕಡಾ 3.75ಕ್ಕೆ ಹೆಚ್ಚಿಸಲಾಗಿದೆ.
ಇದು ಶೌರ್ಯ ಹಾಗೂ ಡಿಫೆನ್ಸ್ ಕಾರ್ಡ್‌ಗೆ ಮಾತ್ರ ಅನ್ವಯಿಸುವುದಿಲ್ಲ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ತಿಳಿಸಿದೆ.
ಅಷ್ಟೇ ಅಲ್ಲ, ಅಧಿಕ ಮೊತ್ತದ ಯುಟಿಲಿಟಿ ಬಿಲ್ ಪಾವತಿ ಮಾಡಿದರೆ ಅದರ ಮೇಲೆ ಶೇಕಡಾ 1ರಷ್ಟು ಹೆಚ್ಚುವರಿ ಶುಲ್ಕ ಅಂದರೆ ಸರ್‌ಚಾರ್ಜ್ ವಿಧಿಸಲಾಗುತ್ತದೆ. ಪಾವತಿ ಮೊತ್ತವು 50 ಸಾವಿರ ಮೀರಿದರೆ ಸರ್‌ಚಾರ್ಜ್ ವಿಧಿಸಲಾಗುತ್ತದೆ.
ವಿದ್ಯುತ್ ಬಿಲ್, ಅಡುಗೆ ಅನಿಲ ಸಿಲಿಂಡರ್ ಮತ್ತು ನೀರಿನ ಬಿಲ್ ಇತ್ಯಾದಿ ಯುಟಿಲಿಟಿ ಪಾವತಿಗಳಿಗೆ ಈ ಶುಲ್ಕ ಅನ್ವಯವಾಗಲಿದೆ.
ಡಿಸೆಂಬರ್ 1ರಿಂದ ಈ ಹೊಸ ದರಗಳು ಜಾರಿಗೆ ಬರಲಿದೆ.