-->
ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆ: ಅಚ್ಚರಿಯ ಫಲಿತಾಂಶ; ಉಪವಿಭಾಗಾಧಿಕಾರಿ ಸತ್ಯನಾರಾಯಣ ಗೆಲುವು

ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆ: ಅಚ್ಚರಿಯ ಫಲಿತಾಂಶ; ಉಪವಿಭಾಗಾಧಿಕಾರಿ ಸತ್ಯನಾರಾಯಣ ಗೆಲುವು

ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆ: ಅಚ್ಚರಿಯ ಫಲಿತಾಂಶ; ಉಪವಿಭಾಗಾಧಿಕಾರಿ ಸತ್ಯನಾರಾಯಣ ಗೆಲುವು





ಸರ್ಕಾರಿ ನೌಕರರ ವಲಯದಲ್ಲಿ ಅಪಾರ ಕುತೂಹಲಕ್ಕೆ ಕಾರಣವಾಗಿದ್ದ ಶಿವಮೊಗ್ಗ ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಪ್ರಕಟವಾಗಿದೆ. ಬಹುತೇಕ ಇಲಾಖೆಗಳ ಚುನಾವಣೆಯಲ್ಲಿ ಅನಿರೀಕ್ಷಿತ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ.


ಶಿವಮೊಗ್ಗ ಜಿಲ್ಲಾ ಘಟಕದ 30 ಮಂದಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಎಲ್ಲರ ಹುಬ್ಬೇರಿಸುವಂತೆ ಶಿವಮೊಗ್ಗದ ಉಪವಿಭಾಗಾಧಿಕಾರಿ ಸತ್ಯನಾರಾಯಣ ಕಂದಾಯ ಇಲಾಖೆಯಲ್ಲಿ ಗೆಲುವು ಸಾಧಿಸಿದ್ದಾರೆ.


ಅವರ ಪ್ರತಿಸ್ಪರ್ಧಿ ಗಿರೀಶ್ ಕೇವಲ ಒಂದು ಮತದ ಅಂತರದಲ್ಲಿ ಸೋಲು ಕಂಡಿದ್ದಾರೆ. ಕೂದಲೆಳೆಯ ಅಂತರದಲ್ಲಿ ಗೆಲುವು ಕಂಡ ಸತ್ಯನಾರಾಯಣ ನೌಕರರ ಜಿಲ್ಲಾ ಘಟಕ ಪ್ರವೇಶಿಸಿದ್ದಾರೆ.


ಕೃಷಿ ಇಲಾಖೆಯಿಂದ ಗಿರೀಶ್ ಬಿ., ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದಿಂದ ದೀಪಕ್ ಪಿ.ಎಸ್., ಜಿಲ್ಲಾ ಪಂಚಾಯತ್‌ನಿಂದ ಕಿರಣ್ ಎಚ್. ತಾಲೂಕು ಪಂಚಾಯತ್‌ನಿಂದ ಪ್ರವೀಣ್ ಕುಮಾರ್, ಅಬಕಾರಿ ಇಲಾಖೆಯಿಂದ ಮಧುಸೂದನ್, ಸಮಾಜ ಕಲ್ಯಾಣ ಇಲಾಖೆಯಿಂದ ಕೊಟ್ರೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅನಿತಾ ವಿ ಆಯ್ಕೆಯಾಗಿದ್ದಾರೆ.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ರಂಗನಾಥ್, ಮೀನುಗಾರಿಕೆ ಇಲಾಖೆಯಿಂದ ಸತ್ಯಭಾಮ, ಅರಣ್ಯ ಇಲಾಖೆಯಿಂದ ರಾಜು ಲಿಂಬು ಚೌಹಾಣ್, ಆರೋಗ್ಯ ಇಲಾಖೆಯಿಂದ ಡಾ. ಗುಡದಪ್ಪ ಕಸಬಿ, ಆಯುಷ್ ಇಲಾಖೆಯಿಂದ ಡಾ. ಸಿ.ಎ. ಹಿರೇಮಠ, ಇಎಸ್‌ಐನಿಂದ ಮಹೇಶ್ ಪಿ.ಎಲ್. ಮತ್ತು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ರಮೇಶ್ ಎಸ್.ವೈ ಆಯ್ಕೆಯಾಗಿದ್ದಾರೆ.


ಗ್ರಂಥಾಲಯ ಇಲಾಖೆಯಿಂದ ಮಹೇಶ್ ಕೆ.ಎಸ್., ಪ್ರೌಢ ಶಾಲೆ ವಿಭಾಗದಿಂದ ಲಿಂಗಪ್ಪ ಮತ್ತು ಧರ್ಮಪ್ಪ, ಪಿ.ಯು. ಇಲಾಖೆಯಿಂದ ಶಶಿಧರ್ ಡಿ.ಟಿ., ಪ್ರಥಮ ದರ್ಜೆ ಕಾಲೇಜಿನಿಂದ ಧನ್ಯ ಕುಮಾರ್, ಮಹಿಳಾ ಪಾಲಿಟೆಕ್ನಿಕ್‌ನಿಂದ ಹನುಮಂತಪ್ಪ ಜಿ., ಎಪಿಎಂಸಿಯಿಂದ ಅಣ್ಣಪ್ಪ ವಿ.ಬಿ., ಗಣಿ-ಭೂ ವಿಜ್ಞಾನ ಇಲಾಖೆಯಿಂದ ರವಿಕಿರಣ್ ವೈ, ಭೂಮಾಪನ ಮತ್ತು ಕಂದಾಯ ಇಲಾಖೆಯಿಂದ ಚನ್ನಕೇಶವ ಮೂರ್ತಿ, ಶಾಲಾ ಶಿಕ್ಷಣ ಇಲಾಖೆಯಿಂದ ಸುಬ್ರಹ್ಮಣ್ಯ ಜಾದವ್, ವಿಜಯ್ ಅಂಟೋ ಸಗಾಯ್, ಅಶೋಕ್ ಟಿ.ಜಿ ಮತ್ತು ನರಸಿಂಹ ಕೆ ಆಯ್ಕೆಯಾದವರ ಪಟ್ಟಿಯಲ್ಲಿ ಸೇರಿದ್ದಾರೆ.


ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ 68 ಮಂದಿ ನಿರ್ದೇಶಕರ ಸ್ಥಾನಗಳ ಪೈಕಿ ಈಗಾಗಲೇ 38 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 30 ಸ್ಥಾನಗಳಿಗೆ ಶನಿವಾರ ಚುನಾವಣೆ ನಡೆದಿತ್ತು.

Ads on article

Advertise in articles 1

advertising articles 2

Advertise under the article