ರಿಸರ್ವ್ ಬ್ಯಾಂಕ್‌ನಿಂದ ವ್ಯವಸ್ಥಿತ ಬ್ಯಾಂಕ್‌ಗಳ ಪಟ್ಟಿ: ಹೊಸದಾಗಿ ಸ್ಥಾನ ಪಡೆದ ಬ್ಯಾಂಕ್ ಯಾವುದು..?
ರಿಸರ್ವ್ ಬ್ಯಾಂಕ್‌ನಿಂದ ವ್ಯವಸ್ಥಿತ ಬ್ಯಾಂಕ್‌ಗಳ ಪಟ್ಟಿ: ಹೊಸದಾಗಿ ಸ್ಥಾನ ಪಡೆದ ಬ್ಯಾಂಕ್ ಯಾವುದು..?
ಭಾರತೀಯ ರಿಸರ್ವ್ ಬ್ಯಾಂಕ್ ದೇಶೀಯವಾಗಿ ವ್ಯವಸ್ಥಿತ ಹಾಗೂ ಮಹತ್ವದ ಬ್ಯಾಂಕ್‌ಗಳನ್ನು ಪಟ್ಟಿ ಮಾಡಿದೆ.
ಈ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ 2014ರಿಂದ ಪ್ರತಿ ವರ್ಷ ಪಟ್ಟಿ ಮಾಡುತ್ತಲೇ ಬರುತ್ತಿದೆ.
ಈ ವರ್ಷದ ಪಟ್ಟಿಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಎಂದಿನಂತೆ ಮೊದಲ ಮೂರು ಸ್ಥಾನಗಳನ್ನು ಅಲಂಕರಿಸಿಕೊಂಡಿದೆ.
ಬ್ಯಾಂಕ್‌ಗಳ ಬಂಡವಾಳ ಸೃಷ್ಟಿಯಲ್ಲಿ ಹೊಂದಿರುವ ಸಾಮಾನ್ಯ ಈಕ್ವಿಟಿ ಶ್ರೇಣಿ ಅನುಪಾತ ಆಧಾರದ ಮೇಲೆ ಈ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
ಈ ಶ್ರೇಣಿಯು ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಬ್ಯಾಂಕ್ ಹೊಂದಿರುವ ಬಂಡವಾಳ ಸಾಮರ್ಥ್ಯದ ಸೂಚ್ಯOಕವನ್ನು ತೋರಿಸುತ್ತದೆ.
ಬ್ಯಾಂಕ್‌ಗಳಿಂದ ಮಾರ್ಚ್‌ನಲ್ಲಿ ಸಂಗ್ರಹಿಸುವ ದತ್ತಾಂಶದ ಆಧಾರದ ಮೇಲೆ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
2014ರಲ್ಲಿ ಆರ್‌ಬಿಐ ಮೊದಲ ಬಾರಿಗೆ ಈ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. 2015 ಮತ್ತು 2016ರಲ್ಲಿ ಎಸ್‌ಬಿಐ ಮತ್ತು ಐಸಿಐಸಿಐ ಬ್ಯಾಂಕ್‌ಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದವು. 2017ರಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಕೂಡ ಈ ಪಟ್ಟಿಗೆ ಸೇರ್ಪಡೆಗೊಂಡಿತು.