-->
ಏಕಕಾಲದಲ್ಲಿ ಎರಡು ಹುದ್ದೆ ನಿಭಾಯಿಸಿದ ಸರ್ಕಾರಿ ನೌಕರ: ಸೇವೆಯಿಂದಲೇ ವಜಾಗೊಳಿಸಿದ ಆಯುಕ್ತರು, ಕ್ರಿಮಿನಲ್ ಕೇಸ್‌ಗೆ ಸೂಚನೆ

ಏಕಕಾಲದಲ್ಲಿ ಎರಡು ಹುದ್ದೆ ನಿಭಾಯಿಸಿದ ಸರ್ಕಾರಿ ನೌಕರ: ಸೇವೆಯಿಂದಲೇ ವಜಾಗೊಳಿಸಿದ ಆಯುಕ್ತರು, ಕ್ರಿಮಿನಲ್ ಕೇಸ್‌ಗೆ ಸೂಚನೆ

ಏಕಕಾಲದಲ್ಲಿ ಎರಡು ಹುದ್ದೆ ನಿಭಾಯಿಸಿದ ಸರ್ಕಾರಿ ನೌಕರ: ಸೇವೆಯಿಂದಲೇ ವಜಾಗೊಳಿಸಿದ ಆಯುಕ್ತರು, ಕ್ರಿಮಿನಲ್ ಕೇಸ್‌ಗೆ ಸೂಚನೆ





ಏಕಕಾಲದಲ್ಲಿ ಎರಡು ಬೇರೆ ಬೇರೆ ಕಚೇರಿಗಳಲ್ಲಿ ಎರಡು ಹುದ್ದೆಗಳನ್ನು ನಿಭಾಯಿಸಿದ ಸರ್ಕಾರಿ ನೌಕರ ಸೇವೆಯಿಂದಲೇ ವಜಾಗೊಂಡಿದ್ದಾನೆ.


ಈತನ ಹೆಸರು ಬಿ.ಕೆ. ಕುಮಾರ್. ಮೈಸೂರಿನ ಮಹಾನಗರ ಪಾಲಿಕೆ ಮತ್ತು ಮೈಸೂರು ನಗರಾಭಿವೃದ್ಧಿ ಪಾಲಿಕೆಯಲ್ಲಿ ಈತ ಏಕಕಾಲದಲ್ಲಿ ಎರಡು ಹುದ್ದೆಗಳನ್ನು ನಿಭಾಯಿಸಿದ್ದ.


ಈ ಬಗ್ಗೆ ಗಮನಕ್ಕೆ ಬರುತ್ತಿದ್ದಂತೆಯೇ ಈತನನ್ನು ಸೇವೆಯಿಂದಲೇ ವಜಾಗೊಳಿಸಿ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಈತನ ವಿರುದ್ಧ ಕ್ರಿಮಿನಲ್ ಕೇಸ್‌ ದಾಖಲಿಸುವಂತೆಯೂ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ಧಾರೆ.


ಆರೋಪಿ ನೌಕರ ಪಾಲಿಕೆಯ ವಾಣಿ ವಿಲಾಸ ನೀರು ಸರಬರಾಜು ಮತ್ತು ಒಳಚರಂಡಿ ವಿಭಾಗದ ಮಲಿನ ನೀರು ಶುದ್ಧೀಕರಣ ಘಟಕದ ದ್ವಿತೀಯ ದರ್ಜೆ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದ. ಇದೇ ವೇಳೆ, ಈತ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೂಡದಲ್ಲೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ.


ಈತನ ಎರಡು ಡ್ಯೂಟಿ ಇತ್ತೀಚೆಗೆ ಬೆಳಕಿಗೆ ಬಂದಿದೆ. ಈತನ ಕೃತ್ಯದ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿ ಎರಡು ಹುದ್ದೆಗಳ ಭೂಪನ ವಿರುದ್ಧ ತನಿಖೆ ಕೈಗೊಂಡು ವರದಿಯನ್ನೂ ನೀಡಿತ್ತು.


ಕುಮಾರ್ ಮೂಡಾದ ಕೆಲವು ಅಧಿಕಾರಿಗಳಿಗೆ ಆಪ್ತರಾಗಿದ್ದರು. ನಿವೇಶನ ಹಂಚಿಕೆ ಪ್ರಕರಣದಲ್ಲಿ ಈತನ ಕೃತ್ಯವಿರುವ ಬಗ್ಗೆ ಜಾರಿ ನಿರ್ದೇಶನಾಲಯ ಕೂಡ ಈತನ ವಿಚಾರಣೆಗೆ ನೋಟೀಸ್ ಜಾರಿಗೊಳಿಸಿದೆ.

Ads on article

Advertise in articles 1

advertising articles 2

Advertise under the article