ಜಾಮೀನಿಗಾಗಿ ಹೈಕೋರ್ಟ್ ನ್ಯಾಯಮೂರ್ತಿ ಹೆಸರು ದುರ್ಬಳಕೆ: ಜಡ್ಜ್ 50 ಲಕ್ಷ ರೂ ಲಂಚ ಕೇಳಿದ್ದಾರೆಂದ ಮಹಿಳಾ ವಕೀಲರ ವಿರುದ್ಧ ವಂಚನೆ ಕೇಸು- ವಕಲಾತ್ತು ರದ್ದುಪಡಿಸಲು ಬಾರ್ ಕೌನ್ಸಿಲ್‌ಗೂ ಸೂಚನೆ
ಜಾಮೀನಿಗಾಗಿ ಹೈಕೋರ್ಟ್ ನ್ಯಾಯಮೂರ್ತಿ ಹೆಸರು ದುರ್ಬಳಕೆ: ಜಡ್ಜ್ 50 ಲಕ್ಷ ರೂ ಲಂಚ ಕೇಳಿದ್ದಾರೆಂದ ಮಹಿಳಾ ವಕೀಲರ ವಿರುದ್ಧ ವಂಚನೆ ಕೇಸು- ವಕಲಾತ್ತು ರದ್ದುಪಡಿಸಲು ಬಾರ್ ಕೌನ್ಸಿಲ್‌ಗೂ ಸೂಚನೆ
ಆರೋಪಿಯೊಬ್ಬರ ಬಿಡುಗಡೆಗೆ ಜಾಮೀನು ಮಂಜೂರು ಮಾಡಬೇಕಿದ್ದರೆ ಹೈಕೋರ್ಟ್ ಜಡ್ಜ್ 50 ಲಕ್ಷ ರೂ ಲಂಚ ಕೇಳಿದ್ದಾರೆಂದ ಮಹಿಳಾ ವಕೀಲರ ವಿರುದ್ಧ ವಂಚನೆ ಕೇಸು ದಾಖಲಾಗಿದೆ. ನ್ಯಾಯಮೂರ್ತಿ ಹೆಸರು ದುರ್ಬಳಕೆ ಮಾಡಿದ ಹಾಗೂ ಇತರ ಆರೋಪದ ಮೇಲೆ ಮಹಿಳಾ ವಕೀಲರ ವಿರುದ್ಧ ಪ್ರಕರಣ ದಾಖಲಾಗಿದೆ. ಇದೇ ವೇಳೆ, ಆರೋಪಿ ವಕೀಲರ ವಕಲಾತ್ತು ರದ್ದುಪಡಿಸಲು ಹೈಕೋರ್ಟ್ ಬಾರ್ ಕೌನ್ಸಿಲ್‌ಗೂ ಸೂಚನೆ ನೀಡಿದೆ.
ಕೊಲೆ ಪ್ರಕರಣದಲ್ಲಿ ಒಂದರಲ್ಲಿ ಕಳೆದ ಮೂರು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿ ಇರುವ ಆರೋಪಿಗೆ ಮೀನು ಮಂಜೂರು ಮಾಡಲು ನ್ಯಾಯಮೂರ್ತಿಗಳು 50 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎಂದು ಕೊಲೆ ಆರೋಪಿ ವಿಷ್ಣುದೇವನ್ ಅವರ ತಾಯಿ ತೆರೆಸಾ ಅವರಿಗೆ ವಕೀಲೆ ದಯೀನಾ ಬಾನು ಹೇಳಿದ್ದರು ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಜಾಮೀನು ನಿರೀಕ್ಷೆಯಲ್ಲಿ ಇರುವ ಬಂಧಿತನ ತಾಯಿ ತೆರೆಸಾ ಅವರು ಮಹಿಳಾ ವಕೀಲರಾದ ಬಿ.ಎಂ. ದಯೀನಾ ಬಾನು ಅವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಕೋರಿ ಹೈಕೋರ್ಟಿನ ರಿಜಿಸ್ಟರ್ ಜನರಲ್ ಅವರಿಗೆ ತೆರೆಸಾ ದೂರು ನೀಡಿದ್ದರು. ಜಾಮೀನು ಕೋರಿರುವ ಅರ್ಜಿಯ ದಾಖಲೆ ಪಡೆದು ದಯೀನಾ ಬಾನು ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನ್ಯಾಯಮೂರ್ತಿಗಳು ಆದೇಶ ನೀಡಿದ್ದರು.
ಇದರ ಬೆನ್ನಿಗೆ ದಯೀನಾ ಬಾನು ವಿರುದ್ಧ ಮುಂದಿನ ಕ್ರಮಕ್ಕಾಗಿ ಹೈಕೋರ್ಟಿನ ಕಾನೂನು ಘಟಕದ ಜಂಟಿ ರಿಜಿಸ್ಟರ್ ಎಂ. ರಾಜೇಶ್ವರಿ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318(4)ರ ಅಡಿಯಲ್ಲಿ ವಿಧಾನಸೌಧ ಪೊಲೀಸರು ವಕೀಲರಾದ ದಯೀನಾ ಬಾನು ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ತೆರೆಸ ಅವರ ಪುತ್ರ 24 ವರ್ಷದ ವಿಷ್ಣುದೇವನ್ ಕೊಲೆ ಪ್ರಕರಣದ ಆರೋಪದಲ್ಲಿ 3 ವರ್ಷದಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ ಅವರಿಗೆ ಜಾಮೀನು ಕೊಡಿಸುವುದಾಗಿ ಹೇಳಿದ ವಕೀಲರಾದ ಮರೀನಾ ಫರ್ನಾಂಡಿಸ್ 10 ಲಕ್ಷ ರೂಪಾಯಿ ಪಡೆದುಕೊಂಡಿದ್ದರು. ಜಾಮೀನು ಅರ್ಜಿ ತಿರಸ್ಕೃತಗೊಂಡ ಕಾರಣದಿಂದ ಹಣ ಹಿಂತಿರುಗಿಸುವಂತೆ ಮರೀನಾ ಫರ್ನಾಂಡಿಸ್ ಅವರನ್ನು ತೆರೆಸಾ ಅವರು ಕೇಳಿದ್ದರು. ವಕೀಲರಾದ ಮರೀನಾ ತಲಾ ಮೂರು ಲಕ್ಷ ರೂ.ಗಳ ಚೆಕ್‌ನ್ನು ನೀಡಿದ್ದರು. ಆದರೆ, ಹಣ ಹಿಂತಿರುಗಿಸಲಿಲ್ಲ ಎಂದು ತೆರೆಸಾ ಹೇಳಿದ್ಧಾರೆ.
ಬಳಿಕ, ಆರತಿ ಎಂಬಾಕೆಯನ್ನು ಮರೀನಾ ಫರ್ನಾಂಡಿಸ್ ಪರಿಚಯಿಸಿದರು. ಆಕೆಗೆ ಹೈಕೋರ್ಟ್ ನ್ಯಾಯಮೂರ್ತಿಗಳ ಪರಿಚಯವಿದೆ ಎಂದು ಹೇಳಿಕೊಂಡು 72,000 ರೂಪಾಯಿಗಳನ್ನು ಆರತಿ ಪಡೆದುಕೊಂಡಿದ್ದರು. ದಯೀನಾ ಬಾನು ಅವರು ನ್ಯಾಯಮೂರ್ತಿಗಳು 50 ಲಕ್ಷ ರೂಪಾಯಿಗಳನ್ನು ನಿರೀಕ್ಷೆ ಮಾಡಿಸಿದ್ದಾರೆ. ಇಲ್ಲದಿದ್ದಲ್ಲಿ ಜಾಮೀನು ಪ್ರಕ್ರಿಯೆಯನ್ನು ಬೇರೆ ವಕೀಲರಲ್ಲಿ ಮಾಡಿಸಿಕೊಳ್ಳುವಂತೆ ಸೂಚಿಸಿದ್ದರು ಎಂದು ತೆರೆಸಾ ತಾನು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.