ಮರಣ ಪ್ರಮಾಣಪತ್ರ ವಿಳಂಬ ನೋಂದಣಿ: ಇನ್ನು ಮುಂದೆ ಕೋರ್ಟ್ ಮೊರೆ ಹೋಗಬೇಕಿಲ್ಲ!
Saturday, December 7, 2024
ಮರಣ ಪ್ರಮಾಣಪತ್ರ ವಿಳಂಬ ನೋಂದಣಿ: ಇನ್ನು ಮುಂದೆ ಕೋರ್ಟ್ ಮೊರೆ ಹೋಗಬೇಕಿಲ್ಲ!
ಮರಣ ಪ್ರಮಾಣಪತ್ರ ವಿಳಂಬ ನೋಂದಣಿ ಮಾಡುವ ನಿಟ್ಟಿನಲ್ಲಿ ಪಕ್ಷಕಾರರು ಇನ್ನು ಮುಂದೆ ಕೋರ್ಟ್ ಮೊರೆ ಹೋಗಬೇಕಿಲ್ಲ...! ಈ ಬಗ್ಗೆ ಜನನ ಮತ್ತು ಮರಣ ತಿದ್ದುಪಡಿ ವಿಧೇಯಕಕ್ಕೆ ರಾಜ್ಯ ಸರ್ಕಾರ ಮಹತ್ವದ ತಿದ್ದುಪಡಿಯನ್ನು ತಂದಿದೆ.
ಒಂದು ವರ್ಷಕ್ಕಿಂತ ಹಿಂದಿನ ಸಾವಿನ ಪ್ರಕರಣಗಳಲ್ಲಿ ಮರಣ ಪ್ರಮಾಣ ಪತ್ರವನ್ನು ನ್ಯಾಯಾಲಯದ ಆದೇಶದ ಮೂಲಕವೇ ಪಡೆಯಬೇಕು ಎಂಬ ಷರತ್ತನ್ನು ಈ ವಿಧೇಯಕದಲ್ಲಿ ತಿದ್ದುಪಡಿ ಮಾಡಲಾಗಿದೆ. ಈ ತಿದ್ದುಪಡಿ ವಿಧೇಯಕಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಮರಣ ಪ್ರಮಾಣ ಪತ್ರದಲ್ಲಿ ಲಭ್ಯವಿದ್ದರೆ ಕಾಯಿಲೆಯ ಅಥವಾ ಅಸ್ವಸ್ಥತೆಯ ಹಿನ್ನೆಲೆಯನ್ನೂ ದಾಖಲಿಸಿ ಡಿಜಿಟಲ್ ಜನನ ಮತ್ತು ಮರಣ ಪ್ರಮಾಣ ಪತ್ರ ವಿತರಣೆ ಮಾಡಲಾಗುವುದು ಎಂದು ಕಾನೂನು ಸಚಿವಾಲಯ ತಿಳಿಸಿದೆ.