ಹುದ್ದೆಯ ಗೌರವ-ಘನತೆ ಕಾಪಾಡಿ: ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬುದ್ದಿವಾದ ಹೇಳಿದ ಸುಪ್ರೀಂ ಕೋರ್ಟ್
ಹುದ್ದೆಯ ಗೌರವ-ಘನತೆ ಕಾಪಾಡಿ: ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬುದ್ದಿವಾದ ಹೇಳಿದ ಸುಪ್ರೀಂ ಕೋರ್ಟ್
ಹೈಕೋರ್ಟ್ ನ್ಯಾಯಾಧೀಶರು ತಮ್ಮ ಗೌರವ ಮತ್ತು ತಮ್ಮ ಹುದ್ದೆಯ ಘನತೆಯನ್ನು ಕಾಪಾಡಿಕೊಳ್ಳಬೇಕು ಸುಪ್ರೀಂ ಕೋರ್ಟ್ ಕೊಲಿಜಿಯಂ ಎಚ್ಚರಿಕೆ ನೀಡಿದೆ.
ಮುಸ್ಲಿಮರ ಬಗ್ಗೆ ವಿವಾದಾತ್ಮಕ ಭಾಷಣ ಮಾಡಿದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಎಸ್ ಕೆ ಯಾದವ್ ಅವರಿಗೆ ಸುಪ್ರೀಂ ಕೋರ್ಟ್ ಈ ಕಿವಿಮಾತು ಹೇಳಿದೆ.
ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಶ್ರೀ ಸಂಜೀವ್ ಖನ್ನ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಬಿ ಆರ್ ಗವಾಯಿ, ರಿಷಿಕೇಶ್ ರಾಯ್ ಹಾಗೂ ಅಭಯ ಶ್ರೀನಿವಾಸ್ ಅವರನ್ನೊಳಗೊಂಡ ಕೊಲೀಜಿಯಂ ಈ ಕಿವಿಮಾತು ಹೇಳಿದೆ.
ವಿಶ್ವ ಹಿಂದೂ ಪರಿಷತ್ ಸಭೆಯೊಂದರಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಎಸ್ ಕೆ ಯಾದವ್ ಅವರಿಗೆ ಸುಪ್ರೀಂ ಕೋರ್ಟ್ ಕೊಲೀಜಿಯಂ ಎಚ್ಚರಿಕೆ ನೀಡಿದೆ.
ಹೈಕೋರ್ಟ್ ನ್ಯಾಯಮೂರ್ತಿಗಳು ತಮ್ಮ ಹುದ್ದೆಯ ಘನತೆಯನ್ನು ಕಾಪಾಡಿಕೊಳ್ಳಬೇಕು ತಮ್ಮ ಹುದ್ದೆಗೆ ತಕ್ಕದಾದ ರೀತಿಯಲ್ಲಿ ವರ್ತಿಸಬೇಕು ಎಂದು ಸುಪ್ರೀಂ ಕೋರ್ಟ್ ಅಲಹಾಬಾದ್ ಹೈಕೋಟ್ ನ್ಯಾಯಮೂರ್ತಿ ಯಾದವ್ ಅವರಿಗೆ ಕಿವಿಮಾತು ಹೇಳಿದೆ.
ಏಕರೂಪ ನಾಗರಿಕ ಸಂಹಿತೆ ಕುರಿತಂತೆ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಎಸ್ ಕೆ ಯಾದವ್ ಅವರು ವಿಶ್ವ ಹಿಂದೂ ಪರಿಷತ್ನ ಕಾನೂನು ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ್ದರು.
ಬಹುಸಂಖ್ಯಾತರ ಆಶಯದಂತೆ ಭಾರತ ಕೆಲಸ ಮಾಡಲಿದೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ಅವರು ಈ ಉಪನ್ಯಾಸದ ವೇಳೆ ನೀಡಿದರು. ಅಲ್ಲದೆ ಮುಸ್ಲಿಮರ ವಿರುದ್ಧ ಅವಹೇಳನಕಾರಿಯಾದ ಕಠ್‌ಮುಲ್ಲ ಎಂಬ ಪದ ಕೂಡ ಬಳಸಿದರು.
ಈ ಘಟನೆ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು ಆನಂತರ ಸುಪ್ರೀಂ ಕೋರ್ಟ್ ಹುಲಿ ಜಿಎಂ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಸಮನ್ಸ್ ನೀಡಿತು. ಕೊಲೀಜಿಯಂ ಮುಂದೆ ಹಾಜರಾದ ನ್ಯಾಯಮೂರ್ತಿ ಯಾದವ್ ತಮ್ಮ ನಿಲುವನ್ನು ವಿವರಿಸಿದರು. ವಿವಾದ ಸೃಷ್ಟಿ ಮಾಡಲು ತಮ್ಮ ಭಾಷಣದ ಆಯ್ದ ಭಾಗವನ್ನಷ್ಟೇ ಮಾಧ್ಯಮಗಳು ಪ್ರಸಾರ ಮಾಡಿವೆ ಎಂದು ಅವರು ಸಮಜಾಯಿಸಿ ನೀಡಿದ್ದರು.
ನ್ಯಾಯಮೂರ್ತಿ ಎಸ್ ಕೆ ಯಾದವ್ ಅವರ ವಿವರಣೆಗಳಿಗೆ ತೃಪ್ತರಾಗದ ಕೊಲೀಜಿಯಂ, ನ್ಯಾಯಾಲಯದ ಒಳಗೆ ಮತ್ತು ಹೊರಗೆ ನ್ಯಾಯಾಧೀಶರು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ತಿಳಿಸಿದರು ಜನ ನ್ಯಾಯಾಂಗದಲ್ಲಿ ಇರಿಸಿದ ನಂಬಿಕೆ, ಮಸುಕಾಗದಂತೆ ಅವರು ನೀಡಿದ ಪ್ರತಿ ಹೇಳಿಕೆಯು ಅವರ ಸ್ಥಾನದ ಘನತೆಗೆ ತಕ್ಕುದಾಗಿರಬೇಕು ಎಂದು ಕೊಲೀಜಿಯಂ ಬುದ್ಧಿವಾದ ಹೇಳಿತು.