-->
ಹಿರಿಯ ಧುರೀಣ ಎಸ್.ಎಂ. ಕೃಷ್ಣ ಅಸ್ತಂಗತ: ಹೈಕೋರ್ಟ್ ಸಹಿತ ರಾಜ್ಯದ ಎಲ್ಲ ಕೋರ್ಟ್ ಗಳಿಗೆ ಬುಧವಾರ ರಜೆ ಘೋಷಣೆ

ಹಿರಿಯ ಧುರೀಣ ಎಸ್.ಎಂ. ಕೃಷ್ಣ ಅಸ್ತಂಗತ: ಹೈಕೋರ್ಟ್ ಸಹಿತ ರಾಜ್ಯದ ಎಲ್ಲ ಕೋರ್ಟ್ ಗಳಿಗೆ ಬುಧವಾರ ರಜೆ ಘೋಷಣೆ

ಹಿರಿಯ ಧುರೀಣ ಎಸ್.ಎಂ. ಕೃಷ್ಣ ಅಸ್ತಂಗತ: ಹೈಕೋರ್ಟ್ ಸಹಿತ ರಾಜ್ಯದ ಎಲ್ಲ ಕೋರ್ಟ್ ಗಳಿಗೆ ಬುಧವಾರ ರಜೆ ಘೋಷಣೆ

ಮಾಜಿ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಹಿರಿಯ ರಾಜಕೀಯ ಧುರೀಣ ಶ್ರೀ ಎಸ್.ಎಂ. ಕೃಷ್ಣ ಅವರು ನಿಧನರಾದ ಹಿನ್ನೆಲೆಯಲ್ಲಿ ಮೂರು ದಿನಗಳ ಶೋಕಾಚರಣೆ ನಡೆಯಲಿದೆ.

ಎಸ್. ಎಂ. ಕೃಷ್ಣ ಅಸ್ತಂಗತರಾದ ಹಿನ್ನೆಲೆಯಲ್ಲಿ ಹೈಕೋರ್ಟ್ ಸಹಿತ ರಾಜ್ಯದ ಎಲ್ಲ ಕೋರ್ಟ್ ಗಳಿಗೆ ಬುಧವಾರ ರಜೆ ಘೋಷಣೆ ಮಾಡಲಾಗಿದೆ.

ಈ ಬಗ್ಗೆ ಕರ್ನಾಟಕ ಹೈಕೋರ್ಟ್ ಅಧಿಸೂಚನೆಯನ್ನು ಪ್ರಕಟಿಸಿದ್ದು, ಸರ್ಕಾರಿ ನೋಟಿಫಿಕೇಶನ್ ಆಧರಿಸಿ, 11-12-2024ರಂದು ರಾಜ್ಯದ ಹೈಕೋರ್ಟ್ ಪೀಠಗಳಿಗೆ ಮತ್ತು ಎಲ್ಲ ಜಿಲ್ಲೆಗಳ ನ್ಯಾಯಾಲಯಗಳಿಗೆ ರಜೆಯನ್ನು ಘೋಷಿಸಲಾಗಿದೆ ಎಂದು ರಿಜಿಸ್ಟ್ರಾರ್ ಜನರಲ್ ಶ್ರೀ ಕೆ.ಎಸ್. ಭರತ್ ಕುಮಾರ್ ಅವರು ತಿಳಿಸಿದ್ದಾರೆ.

ಇದೇ ವೇಳೆ, ಮೃತರ ಗೌರವಾರ್ಥ ರಾಜ್ಯದ ಎಲ್ಲ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ಮೂರು ದಿನಗಳ ಕಾಲ ರಾಷ್ಟ್ರೀಯ ಧ್ವಜವನ್ನು ಅರ್ಧಕ್ಕೆ ಹಾರಿಸಲು ಆದೇಶ ಹೊರಡಿಸಲಾಗಿದೆ.

Ads on article

Advertise in articles 1

advertising articles 2

Advertise under the article