CrPC ಸೆಕ್ಷನ್ 197: ಅಧಿಕಾರ ದುರುಪಯೋಗ: ಸರ್ಕಾರಿ ಅಧಿಕಾರಿ ಕಾನೂನಿನಡಿ ರಕ್ಷಣೆ ಕೇಳುವಂತಿಲ್ಲ - ಸುಪ್ರೀಂ ಕೋರ್ಟ್
CrPC ಸೆಕ್ಷನ್ 197: ಅಧಿಕಾರ ದುರುಪಯೋಗ: ಸರ್ಕಾರಿ ಅಧಿಕಾರಿ ಕಾನೂನಿನಡಿ ರಕ್ಷಣೆ ಕೇಳುವಂತಿಲ್ಲ - ಸುಪ್ರೀಂ ಕೋರ್ಟ್
ಸುಳ್ಳು ಪ್ರಕರಣ ದಾಖಲಿಸುವ ಪೊಲೀಸ್ ಅಧಿಕಾರಿಗಳು ತಾನು ಅಧಿಕೃತ ಕರ್ತವ್ಯದಲ್ಲಿದ್ದೆ ಎಂಬ ನೆಪ ಹೇಳಿ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳುವ ಹಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
"ಓಂ ಪ್ರಕಾಶ್ ಯಾದವ್ Vs ನಿರಂಜನ ಕುಮಾರ್ ಉಪಾಧ್ಯಾಯ" ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಶ್ರೀ ಜೆ.ಬಿ. ಪರ್ದಿವಾಲ ಮತ್ತು ಶ್ರೀ ಮನೋಜ್ ಮಿಶ್ರ ಅವರಿದ್ದ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.
ಸುಳ್ಳು ಪ್ರಕರಣ ದಾಖಲಿಸುವುದು ಮತ್ತು ಅದಕ್ಕೆ ಸಂಬಂಧಿಸಿದಂತೆ ಸಾಕ್ಷಿಯ ಅಥವಾ ದಾಖಲೆಗಳನ್ನು ಸೃಷ್ಟಿ ಮಾಡುವುದು ಸರಕಾರಿ ಅಧಿಕಾರಿಯ ಅಧಿಕೃತ ಕರ್ತವ್ಯದ ಭಾಗವಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ನ್ಯಾಯ ಪೀಠ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ
ಸುಳ್ಳು ಪ್ರಕರಣ ದಾಖಲಿಸುವ ಮೂಲಕ ಸರಕಾರದ ಅಧಿಕಾರಿ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಅಂತಹ ಅಧಿಕಾರಿಗಳಿಗೆ ಸಿಆರ್ಪಿಸಿ ಸೆಕ್ಷನ್ 197ರ ಅಡಿಯಲ್ಲಿ ರಕ್ಷಣೆಯನ್ನು ಒದಗಿಸಲಾಗದು ಎಂಬುದನ್ನು ನ್ಯಾಯ ಪೀಠ ಹೇಳಿದೆ.
ಸಿಆರ್ಪಿಸಿ ಸೆಕ್ಷನ್ 197 ಪ್ರಕಾರ:- "ಸಾರ್ವಜನಿಕ ಸೇವಕರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ಅಪರಾಧ ಎಸಗಿದ್ದಾರೆ ಎಂದು ಆರೋಪಿಸಿದರೆ ಅವರನ್ನು ಕಾನೂನು ಕ್ರಮದಿಂದ ರಕ್ಷಿಸುತ್ತದೆ. ಅಂತಹ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸಲು ಸರಕಾರದಿಂದ ಪೂರ್ವಾನುವತಿ ಪಡೆಯಬೇಕು" ಎಂಬುದನ್ನು ಈ ಸೆಕ್ಷನ್ ಹೇಳುತ್ತದೆ.
'ನಾನು ಹೇಳಿದಂತೆ ಹೇಳಿಕೆ ನೀಡು' ಎಂದು ಬೆದರಿಕೆ ಹಾಕುವುದು ಅಥವಾ ಖಾಲಿ ಕಾಗದದ ಮೇಲೆ ಸಹಿ ಹಾಕಲು ಒತ್ತಾಯಿಸುವುದು, ಆರೋಪಿಯನ್ನು ಅಕ್ರಮವಾಗಿ ಬಂಧಿಸಿ ಇರಿಸಿಕೊಳ್ಳುವುದು, ಸುಳ್ಳು ಇಲ್ಲವೇ ಕೃತಕ ದಾಖಲೆಗಳ ಸೃಷ್ಟಿಗಾಗಿ ಪಿತೂರಿಯಲ್ಲಿ ತೊಡಗುವುದು, ವ್ಯಕ್ತಿಗೆ ಕೂಡ ನೀಡುವ ಅಥವಾ ಬೆದರಿಕೆ ಹಾಕುವ ಏಕೈಕ ಉದ್ದೇಶದಿಂದ ಶೋಧ ಕಾರ್ಯ ನಡೆಸುವುದು... ಇತ್ಯಾದಿಗಳು ಸಿಆರ್ಪಿಸಿ ಸೆಕ್ಷನ್ 197 ಅಡಿಯಲ್ಲಿ ರಕ್ಷಣೆಯ ವ್ಯಾಪ್ತಿಗೆ ಬರುವುದಿಲ್ಲ ಎಂಬುದನ್ನು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ
ಹೀಗಾಗಿ ಪೊಲೀಸ್ ಅಧಿಕಾರಿ ಸುಳ್ಳು ಪ್ರಕರಣ ದಾಖಲಿಸಿದ ಆರೋಪ ಕೇಳಿ ಬಂದಾಗ ಅವರಿಗೆ ಸಿಆರ್ಪಿಸಿ ಸೆಕ್ಷನ್ 197ರ ಅಡಿಯಲ್ಲಿ ರಕ್ಷಣೆಯನ್ನು ನೀಡಲಾಗದು ಅಲ್ಲದೆ ಸುಳ್ಳು ಪ್ರಕರಣ ದಾಖಲಿಸುವುದು ಮತ್ತು ಅದಕ್ಕೆ ಸಂಬಂಧಿಸಿದಂತೆ ಸಾಕ್ಷ ಅಥವಾ ದಾಖಲೆಗಳನ್ನು ಸೃಷ್ಟಿಸುವುದು ಸರಕಾರಿ ಅಧಿಕಾರಿಯ ಅಧಿಕೃತ ಕರ್ತವ್ಯದ ಭಾಗವಲ್ಲ ಎಂದು ತೀರ್ಪು ಹೇಳಿದೆ.