-->
ಸುಪ್ರೀಂ ಕೋರ್ಟ್‌ನಲ್ಲಿ ನಕಲಿ ವಕಾಲತ್ ಪ್ರಕರಣ: ಎಂಟು ವಕೀಲರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲು

ಸುಪ್ರೀಂ ಕೋರ್ಟ್‌ನಲ್ಲಿ ನಕಲಿ ವಕಾಲತ್ ಪ್ರಕರಣ: ಎಂಟು ವಕೀಲರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲು

ಸುಪ್ರೀಂ ಕೋರ್ಟ್‌ನಲ್ಲಿ ನಕಲಿ ವಕಾಲತ್ ಪ್ರಕರಣ: ಎಂಟು ವಕೀಲರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲು





ನಕಲಿ ವಕಾಲತ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಎಂಟು ವಕೀಲರ ವಿರುದ್ಧ ಕೇಂದ್ರೀಯ ತನಿಖಾ ದಳ೯ಸಿಬಿಐ) ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌)ನ್ನು ದಾಖಲಿಸಿಕೊಂಡಿದೆ.


ಭಗವಾನ್ ಸಿಂಗ್ Vs ಉತ್ತರ ಪ್ರದೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ನಕಲಿ ವಕಾಲತ್ ಹಾಕಿರುವ ಆರೋಪ ಇದ್ದು, ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ಎಂಟು ವಕೀಲರನ್ನು ಆರೋಪಿಗಳು ಎಂದು ಹೆಸರಿಸಿದೆ.


ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾದ ಬೇಲಾ ಎಂ. ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ನ್ಯಾಯಪೀಠ ನೀಡಿದ ನಿರ್ದೇಶನದ ಮೇರೆಗೆ ಸಿಬಿಐ ಎಫ್‌ಐಆರ್ ದಾಖಲಿಸಿದೆ.


ನ್ಯಾಯಾಂಗದ ಘನತೆ ಎತ್ತರಿಸುವಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ. ವಕೀಲರೇ ಇಂತಹ ಮೋಸದ ಅಭ್ಯಾಸಗಳಲ್ಲಿ ತೊಡಗಿರುವ ಸಂದರ್ಭದಲ್ಲಿ ವಕೀಲರು ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಯಪೀಠ ತನ್ನ ನಿರ್ದೇಶನದಲ್ಲಿ ಸ್ಪಷ್ಟಪಡಿಸಿದೆ.


ಈ ಪ್ರಕರಣವು ಸುಳ್ಳು ವ್ಯಕ್ತಿತ್ವ, ನ್ಯಾಯಾಲಯದಲ್ಲಿ ಸುಳ್ಳು ಹಕ್ಕುಗಳು, ನಕಲಿ ಮತ್ತು ವಂಚನೆ ಅಪರಾಧಗಳನ್ನು ಒಳಗೊಂಡಿರುವ ಶಂಕಿತ ಪ್ರಕರಣವಾಗಿದೆ ಎಂದು ಎಫ್‌ಐಆರ್ ದಾಖಲಿಸಿರುವುದನ್ನು ನ್ಯಾಯಪೀಠ ಗಮನಿಸಿತು.


ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಜೆ ಅರ್ಜಿ (ಸ್ಪೆಷಲ್ ಲೀವ್ ಪಿಟಿಷನ್‌-ಎಸ್‌ಎಲ್‌ಪಿ) ಸಲ್ಲಿಸಲುನಿರಾಕರಿಸಿದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ನಿರ್ದೇಶನ ಜಾರಿಗೊಳಿಸಿತ್ತು. ಈ ವಿವಾದಿತ ಎಸ್‌ಎಲ್‌ಪಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ರಾಜ್ಯಕ್ಕೆ ನೋಟೀಸ್ ನೀಡಿದ ಒಂದು ತಿಂಗಳ ನಂತರ, ಅರ್ಜಿದಾರರಾದ ಭಗವಾನ್ ಸಿಂಗ್ ಅವರು ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿಗೆ ಪತ್ರ ಬರೆದು ತಾವು ಅಂತಹ ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ ಎಂದು ತಿಳಿಸಿದ್ದರು.


ಈ ವಿದ್ಯಮಾನವು ಆನ್‌ ರೆಕಾರ್ಡ್‌ ವಕೀಲ (Advocates on Record) ರಿಗೆ ಕಟ್ಟುನಿಟ್ಟಾದ ನಿರ್ದೇಶನಗಳನ್ನು ನೀಡಲು ಕಾರಣವಾಯಿತು. ಅವರು ಈಗ ನಿರ್ದಿಷ್ಟ ದಿನದಂದು ಆ ಪ್ರಕರಣಕ್ಕೆ ಹಾಜರಾಗಲು ಮತ್ತು ವಾದಿಸಲು ಅಧಿಕಾರ ಹೊಂದಿರುವ ವಕೀಲರನ್ನು ಮಾತ್ರ ನಿಗದಿಪಡಿಸಬೇಕು.


ವಾದ ಮಂಡಿಸುವ ವಕೀಲರ ಹೆಸರಿನಲ್ಲಿ ಬದಲಾವಣೆ ಇದ್ದರೆ ಅಥವಾ ಬೇರೆಯೇ ವಕೀಲರ ನಿಗದಿಯಾಗಿದ್ದರೆ, ಸಂಬಂಧಪಟ್ಟ ನ್ಯಾಯಾಲಯದ ಮಾಸ್ಟರ್‌ ರವರಿಗೆ ಮುಂಚಿತವಾಗಿ ಅಥವಾ ವಿಚಾರಣೆ ಸಮಯದಲ್ಲಿ ತಿಳಿಸುವುದು ಸಂಬಂಧಪಟ್ಟವರ ಕರ್ತವ್ಯವಾಗಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.


ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿದ ನಂತರ ಸಿಬಿಐ ಎಫ್‌ಐಆರ್ ಸಲ್ಲಿಸಿದ್ದು, ಭಗವಾನ್ ಸಿಂಗ್ ಅವರು ನ್ಯಾಯಾಲಯದ ಮುಂದೆ ತನ್ನನ್ನು ಪ್ರತಿನಿಧಿಸುವುದಾಗಿ ಹೇಳಿಕೊಂಡ ಯಾವುದೇ ವಕೀಲರನ್ನು ಭೇಟಿ ಮಾಡಿಲ್ಲ ಎಂದು ಸಿಬಿಐ ತಿಳಿಸಿದೆ.



Ads on article

Advertise in articles 1

advertising articles 2

Advertise under the article