ವಾಕ್ ಸ್ವಾತಂತ್ರ್ಯವನ್ನು ನಿರ್ಬಂಧಿಸಲಾಗದು- ದೆಹಲಿ ಹೈಕೋರ್ಟ್: ನವಜ್ಯೋತ್ ಸಿಂಗ್ ಸಿಧು ಹೇಳಿಕೆ ಕುರಿತ ಪಿಐಎಲ್ ಹಿಂಪಡೆದ ವಕೀಲರು
ವಾಕ್ ಸ್ವಾತಂತ್ರ್ಯವನ್ನು ನಿರ್ಬಂಧಿಸಲಾಗದು- ದೆಹಲಿ ಹೈಕೋರ್ಟ್: ನವಜ್ಯೋತ್ ಸಿಂಗ್ ಸಿಧು ಹೇಳಿಕೆ ಕುರಿತ ಪಿಐಎಲ್ ಹಿಂಪಡೆದ ವಕೀಲರು
ದೇಶದ ವಾಕ್ ಸ್ವಾಂತ್ರ್ಯದ ಬಗ್ಗೆ ನ್ಯಾಯಾಂಗಕ್ಕೆ ಸಂಪೂರ್ಣ ನಂಬಿಕೆ ಇದೆ. ಕ್ಯಾನ್ಸರ್ ಚಿಕಿತ್ಸೆ ಬಗ್ಗೆ ಮಾಜಿ ಕ್ರಿಕೆಟರ್ ನವಜ್ಯೋತ್ ಸಿಂಗ್ ಸಿಧು ತಮ್ಮ ಅಭಿಪ್ರಾಯವಷ್ಟೇ ಹೇಳಿದ್ದಾರೆ. ಆದರೆ, ಅದನ್ನು ಪಾಲಿಸಿ ಎಂದು ಎಲ್ಲೂ ಹೇಳಿಲ್ಲ. ಅವರ ವಾಕ್ ಸ್ವಾತಂತ್ರ್ಯವನ್ನು ನಿರ್ಬಂಧಿಸಲಾಗದು ಎಂದು ದೆಹಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ.
ನವಜ್ಯೋತ್ ಸಿಂಗ್ ಸಿಧು ಹೇಳಿಕೆ ಕುರಿತ ಪಿಐಎಲ್ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಮನಮಹನ್ ಮತ್ತು ನ್ಯಾ. ತುಷಾರ್ ರಾವ್ ಗಡೇಲಾ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಆಹಾರ ಪದ್ಧತಿ ಮತ್ತು ಆಯುರ್ವೇದದ ಮೂಲಕ ನಾಲ್ಕನೇ ಹಂತದ ಕ್ಯಾನ್ಸರ್‌ನಿಂದ ತಮ್ಮ ಪತ್ನಿ ಚೇತರಿಸಿಕೊಂಡಿದ್ದಾರೆ ಎಂದು ಮಾಜಿ ಕ್ರಿಕೆಟರ್ ನವಜ್ಯೋತ್ ಸಿಂಗ್ ಸಿಧು ತಮ್ಮ ಎಕ್ಸ್ ಮತ್ತು ಮೆಟಾ ಖಾತೆಯಲ್ಲಿ ಸಂದೇಶ ಹಾಕಿದ್ದರು. ಈ ಹೇಳಿಕೆಗಳನ್ನುತಾತ್ಕಾಲಿಕವಾಗಿ ತೆಗೆದುಹಾಕುವಂತೆ ಕೋರಿ ದಿವ್ಯಾ ರಾಣಾ ಅವರು ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಸಿಧು ಅವರು ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಹೇಳಿದ್ದಾರೆ. ಇದು ಅವರ ವಾಕ್ ಸ್ವಾತಂತ್ರ್ಯದ ಹಕ್ಕು. ಇದನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿತು.
ಸಿಧು ಕೇವಲ ಅವರ ಅಭಿಪ್ರಾಯವನ್ನು ಹೇಳಿದ್ದಾರೆ. ನಂತರ ವೈದ್ಯರ ಸಲಹೆ ಪಡೆದಿರುವುದಾಗಿ ಹೇಳಿದ್ದಾರೆ. ತಮ್ಮ ಹೇಳಿಕೆಯನ್ನು ಪಾಲಿಸಿ ಎಂದು ಯಾರಲ್ಲೂ ಒತ್ತಾಯಿಸಿಲ್ಲ, ಎಲ್ಲೂ ಹೇಳಿಕೆ ನೀಡಿಲ್ಲ. ತಾವೇನು ಮಾಡಿದರೋ ಅದನ್ನು ಅವರು ಹೇಳಿದ್ಧಾರೆ ಎಂದು ನ್ಯಾಯಪೀಠ ಹೇಳಿದೆ.
ಅಷ್ಟೊಂದು ಆರೋಗ್ಯದ ಬಗ್ಗೆ ಕಾಳಜಿ ಇದ್ದರೆ, ಸಿಗರೇಟು ಮತ್ತು ಮದ್ಯದ ತಯಾರಿಕೆ ಬಗ್ಗೆ ಪಿಐಎಲ್ ಸಲ್ಲಿಸಿ. ಇದು ಆರೋಗ್ಯಕರವಲ್ಲ ಎಂದು ಎಲ್ಲರೂ ಒಪ್ಪುತ್ತಾರೆ ಎಂದು ವಕೀಲರನ್ನು ಪರೋಕ್ಷವನ್ನು ನ್ಯಾಯಪೀಠ ಕುಟುಟಕಿತು.
ಪ್ರಕರಣ: ದಿವ್ಯಾ ರಾಣಾ Vs ಭಾರತ ಸರ್ಕಾರ (ದೆಹಲಿ ಹೈಕೋರ್ಟ್)