ನಾನು ಕೂಡ ಒಬ್ಬ ಮನುಷ್ಯ; ಎಷ್ಟು ಮೆಮೋಗಳನ್ನು ಸ್ವೀಕರಿಸಲಿ: ಕರ್ನಾಟಕ ಹೈಕೋರ್ಟ್ ನ್ಯಾ. ನಾಗಪ್ರಸನ್ನ
ನಾನು ಕೂಡ ಒಬ್ಬ ಮನುಷ್ಯ; ಎಷ್ಟು ಮೆಮೋಗಳನ್ನು ಸ್ವೀಕರಿಸಲಿ: ಕರ್ನಾಟಕ ಹೈಕೋರ್ಟ್ ನ್ಯಾ. ನಾಗಪ್ರಸನ್ನ
ನಾನು ಕೂಡ ಒಬ್ಬ ಮನುಷ್ಯನೇ... ಎಷ್ಟು ಮೆಮೋಗಳನ್ನು ಸ್ವೀಕರಿಸಲಿ ಎಂದು ಕರ್ನಾಟಕ ಹೈಕೋರ್ಟ್ ನ್ಯಾ. ನಾಗಪ್ರಸನ್ನ ಬೇಸರ ವ್ಯಕ್ತಪಡಿಸಿದರು.
ಪ್ರಕರಣಗಳನ್ನು ಕ್ಷಿಪ್ರಗತಿಯಲ್ಲಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಹೆಸರುವಾಸಿಯಾಗಿರುವ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ಎಂ. ನಾಗಪ್ರಸನ್ನ ರವರು ವಕೀಲರೊಬ್ಬರು ತಮ್ಮ ಅರ್ಜಿಯನ್ನು ಶೀಘ್ರವಾಗಿ ವಿಚಾರಣೆಗೆ ನಿಗದಿ ಪಡಿಸುವಂತೆ ಮನವಿ ಮಾಡಿದ ವೇಳೆ ವ್ಯಕ್ತಪಡಿಸಿದ ಅಸಮಾಧಾನವಿದು.
ರಕ್ತ ಬರೋವರೆಗೂ ಕೆಚ್ಚಲಿಂದ ಹಾಲು ಕರೆಯಬೇಡಿ ... ಎಂದು ತ್ವರಿತ ವಿಚಾರಣೆ ಕೋರಿಕೆಗೆ ಸಲ್ಲಿಸಲಾದ ಅರ್ಜಿಗೆ ನ್ಯಾಯಪೀಠದಲ್ಲಿ ಇದ್ದ ನ್ಯಾಯಾಧೀಶರಾದ ನಾಗಪ್ರಸನ್ನ ಬೇಸರ ವ್ಯಕ್ತಪಡಿಸಿದರು.
ಕಳೆದ 29 ದಿನಗಳಲ್ಲಿ ಸುಮಾರು 7,500 ಮನವಿ ಅರ್ಜಿಗಳನ್ನು (ಮೆಮೊ) ನಾನು ಸ್ವೀಕರಿಸಿದ್ದೇನೆ. ಈ ಅರ್ಜಿಗಳ ಪೈಕಿ 5,500ರಷ್ಟು ಅರ್ಜಿಗಳನ್ನು ವಿಚಾರಣೆಗೆ ನಿಗದಿಪಡಿಸಿದ್ದೇನೆ. ಇನ್ನೂ ಎಷ್ಟು ಮೆಮೊಗಳನ್ನು ಸ್ವೀಕರಿಸಲಿ? ನಾನು ಕೂಡ ಒಬ್ಬ ಮನುಷ್ಯ. ಹಸುವಿನ ಕೆಚ್ಚಲಿನಲ್ಲಿ ರಕ್ತ ಬರುವವರೆಗೆ ನೀವು ಹಾಲು ಕರೆಯಲಾಗದು ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮಂಗಳವಾರ ನ್ಯಾಯಪೀಠದ ಮುಂದೆ ಹಾಜರಾದ ವಕೀಲರೊಬ್ಬರು, ತಮ್ಮ ಪ್ರಕರಣದ ಇತ್ಯರ್ಥಕ್ಕೆ ಸಂಬಂಧಿಸಿದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಕೋರಿ ಮೆಮೊ ಸಲ್ಲಿಸಿದರು.
ಮುಂದುವರಿದು, ನಾನು ಹಲವು ಬಾರಿ ಮೆಮೊ ಸಲ್ಲಿಸಿದ್ದೇನೆ. ಇನ್ನೂ ವಿಚಾರಣೆಗೆ ನಿಗದಿಯಾಗಿಲ್ಲ. ಈ ಬಾರಿ ಪರಿಗಣಿಸಬೇಕು ಎಂದು ಮನವಿ ಮಾಡಿ ಮೆಮೊ ನೀಡಲು ಮುಂದಾದರು. ಅದಾಗಲೇ ಹಲವಾರು ಮೆಮೋಗಳನ್ನು ಸ್ವೀಕರಿಸಿದ್ದ ನ್ಯಾ. ಎಂ. ನಾಗಪ್ರಸನ್ನರವರು ವಕೀಲರ ಮನವಿಗೆ ಪ್ರತಿಕ್ರಿಯಿಸಿ, ಕಳೆದ 29 ದಿನಗಳಲ್ಲಿ 7,500 ಮೆಮೊ ಸಲ್ಲಿಕೆಯಾಗಿವೆ. ಅವುಗಳನ್ನು ಪರಿಗಣಿಸಿ ನಾನು 5,500 ಮೆಮೋಗಳನ್ನು ಪ್ರಕರಣಗಳನ್ನು ವಿಚಾರಣೆಗೆ ಪಟ್ಟಿ ಮಾಡಿದ್ದೇನೆ. ಇದನ್ನೂ ಮೀರಿ ಏನನ್ನು ಪಟ್ಟಿ ಮಾಡಲಾಗುತ್ತದೆ? ನಾನೂ ಮನುಷ್ಯ. ಎಷ್ಟು ಪ್ರಕರಣಗಳನ್ನು ಪಟ್ಟಿ ಮಾಡಬೇಕು. ಎಷ್ಟನ್ನು ವಿಚಾರಣೆಗೆ ಪಟ್ಟಿ ಮಾಡಬೇಕು ಹೇಳಿ? ಎಂದು ಬೇಸರ ವ್ಯಕ್ತಪಡಿಸಿದರು.