-->
ದೇಶದ ಮೊದಲ 24 X 7 ಆನ್‌ಲೈನ್ ಕೋರ್ಟ್‌ ಕೇರಳದ ಕೊಲ್ಲಂನಲ್ಲಿ ಉದ್ಘಾಟನೆ

ದೇಶದ ಮೊದಲ 24 X 7 ಆನ್‌ಲೈನ್ ಕೋರ್ಟ್‌ ಕೇರಳದ ಕೊಲ್ಲಂನಲ್ಲಿ ಉದ್ಘಾಟನೆ

ದೇಶದ ಮೊದಲ 24 X 7 ಆನ್‌ಲೈನ್ ಕೋರ್ಟ್‌ ಕೇರಳದ ಕೊಲ್ಲಂನಲ್ಲಿ ಉದ್ಘಾಟನೆ





ವಾರದ ಏಳು ದಿನಗಳು ಹಾಗೂ ದಿನದ ಎಲ್ಲ 24 ಗಂಟೆಗಳೂ ಕಾರ್ಯನಿರ್ವಹಿಸುವ ದೇಶದ ಮೊದಲ 24 X 7 ಆನ್‌ಲೈನ್ ಕೋರ್ಟ್‌ ಕೇರಳದ ಕೊಲ್ಲಂನಲ್ಲಿ ಉದ್ಘಾಟನೆಗೊಂಡಿದೆ.


ದೂರು ಸಲ್ಲಿಕೆಯಿಂದ ಹಿಡಿದು ವಿಚಾರಣೆಯ ವರೆಗೆ ಎಲ್ಲವೂ ಡಿಜಿಟಲ್ ಕೋರ್ಟ್‌ ರೂಮ್‌ನಲ್ಲೇ ನಡೆಯುವ ಹೈಟೆಕ್ ನ್ಯಾಯದಾನ ವ್ಯವಸ್ಥೆ ಇದಾಗಿದೆ.


ದೂರುದಾರರು ಕೋರ್ಟ್‌ ಮೆಟ್ಟಿಲು ಹತ್ತದೆಯೇ, ತಮ್ಮ ಅರ್ಜಿಗಳನ್ನುಆನ್‌ಲೈನ್ ಮೂಲಕವೇ ಸಲ್ಲಿಸಬಹುದು. ಆನ್‌ಲೈನ್‌ ಮೂಲಕವೇ ಅಗತ್ಯ ಶುಲ್ಕವನ್ನು ಪಾಔತಿಸಬಹುದು. ಅಲ್ಲದೆ, ಆನ್‌ಲೈನ್ ಮೋಡ್‌ನಲ್ಲಿ ನ್ಯಾಯಾಲಯದ ಕಲಾಪ ಹಾಗೂ ವಿಚಾರಣೆಗೂ ಹಾಜರಾಗಬಹುದು.


ಆರಂಭಿಕವಾಗಿ ಚೆಕ್‌ ಬೌನ್ಸ್‌ ಸಂಬಂಧಿಸಿದ ಪ್ರಕರಣಗಳನ್ನು ಮಾತ್ರ ಇಲ್ಲಿ ಇತ್ಯರ್ಥಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ಇತರೆ ಪ್ರಕರಣಗಳ ವಿಚಾರಣೆಯೂ ನಡೆಯಲಿದೆ ಎಂದು ನ್ಯಾಯಾಂಗ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ವಕೀಲರು ಸಾಕ್ಷ್ಯಗಳು ಮತ್ತು ಸಾಕ್ಷಿಗಳನ್ನು ಆನ್‌ಲೈನ್ ಮೂಲಕವೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಬಹುದಾಗಿದೆ. ಆರೋಪಿಗಳಿಗೆ ಸಮನ್ಸ್‌ಗಳನ್ನೂ ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ವಿದ್ಯುನ್ಮಾನ ವ್ಯವಸ್ಥೆಯಲ್ಲೇ ತಲುಪಿಸಲಾಗುವುದು. ಜಾಮೀನು ಅರ್ಜಿಗಳನ್ನೂ ಆನ್‌ಲೈನ್ ಮೂಲಕವೇ ಸಲ್ಲಿಸಲು ಅವಕಾಶ ಇದೆ.


ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಶ್ರೀ ಸೂರ್ಯ ಸುಕುಮಾರನ್ ಈ ಆನ್‌ಲೈನ್‌ ಕೋರ್ಟ್‌ನ ಮೊದಲ ಕಲಾಪವನ್ನು ನಡೆಸಿಕೊಟ್ಟರು.


ಕೊಲ್ಲಂನ ಆನ್‌ಲೈನ್ ಕೋರ್ಟ್‌ನಲ್ಲಿ ಮೂರು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ (ಜೆಎಂಎಫ್‌ಸಿ)ಗಳು ಮತ್ತು ಒಂದು ಮುಖ್ಯ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯ ಕಾರ್ಯ ನಿರ್ವಹಿಸಲಿವೆ.


ದಿನದ ಯಾವುದೇ ಸಮಯದಲ್ಲೂ ಪ್ರಕರಣವನ್ನು ದಾಖಲಿಸಲು ಅನುಕೂಲ ಕಲ್ಪಿಸಲಾಗಿದ್ದು, ವಿಶ್ವದ ಯಾವುದೇ ಮೂಲೆಯಿಂದಲೂ ಪ್ರಕರಣವನ್ನು ಹಾಜರುಪಡಿಸಬಹುದಾಗಿದೆ.


Ads on article

Advertise in articles 1

advertising articles 2

Advertise under the article