ವಕೀಲರ ಕಲ್ಯಾಣ ನಿಧಿ: ವಾರ್ಷಿಕ ವಂತಿಗೆ ಡಿಸೆಂಬರ್ 31 ಅಂತಿಮ ದಿನ
Sunday, December 29, 2024
ವಕೀಲರ ಕಲ್ಯಾಣ ನಿಧಿ: ವಾರ್ಷಿಕ ವಂತಿಗೆ ಡಿಸೆಂಬರ್ 31 ಅಂತಿಮ ದಿನ
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿದ ವಕೀಲರು ವಕೀಲರ ಪರಿಷತ್ತಿನ ಕಲ್ಯಾಣ ನಿಧಿಗೆ ತಮ್ಮ ವಾರ್ಷಿಕ ವಂತಿಗೆ ನೀಡಲು ಡಿಸೆಂಬರ್ 31 ಕೊನೆಯ ದಿನವಾಗಿರುತ್ತದೆ.
ಆನ್‌ಲೈನ್ ಮೂಲಕ ಅಥವಾ ವಕೀಲರು ಪ್ರತಿನಿಧಿಸುತ್ತಿರುವ ಬಾರ್ ಅಸೋಸಿಯೇಷನ್ ಮೂಲಕ ವಕೀಲರು ತಮ್ಮ ವಾರ್ಷಿಕ ವಂತಿಗೆಯನ್ನು ಪಾವತಿಸಬಹುದಾಗಿದೆ.
ಪಾವತಿಯ ನಂತರ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಿಂದ ಅಧಿಕೃತ ರಶೀದಿ ಪಡೆದುಕೊಳ್ಳಲು ಸೂಚಿಸಲಾಗಿದೆ.
ನೋಂದಾವಣೆಗೊಂಡು 15 ವರ್ಷ ವೃತ್ತಿ ಪೂರೈಸಿದವರು ₹ 2,000/- ವಾರ್ಷಿಕ ವಂತಿಗೆ ಕಟ್ಟಬೇಕಾಗಿದೆ.
ನೋಂದಾವಣೆಗೊಂಡು 15 ವರ್ಷ ವೃತ್ತಿ ಪೂರೈಸದವರು ₹ 1,000/- ವಾರ್ಷಿಕ ವಂತಿಗೆ ಕಟ್ಟಬೇಕಾಗಿದೆ.
ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ನಲ್ಲಿ welfare Fund ವರ್ಷದ ವಂತಿಗೆ ಕಟ್ಟಲು ಕೊನೆಯ ದಿನಾಂಕ 31/12/20204.