ಸಾಲಕ್ಕಾಗಿ ಪೊಳ್ಳು ದಾಖಲೆ ಸೃಷ್ಟಿಸಿ ಲೀಗಲ್ ಓಪೀನಿಯನ್ ನೀಡಿದ ವಕೀಲರಿಗೆ ಸಂಕಷ್ಟ: ಮೂರು ವರ್ಷ ಜೈಲು ಶಿಕ್ಷೆ, 40 ಸಾವಿರ ದಂಡ
ಸಾಲಕ್ಕಾಗಿ ಪೊಳ್ಳು ದಾಖಲೆ ಸೃಷ್ಟಿಸಿ ಲೀಗಲ್ ಓಪೀನಿಯನ್ ನೀಡಿದ ವಕೀಲರಿಗೆ ಸಂಕಷ್ಟ: ಮೂರು ವರ್ಷ ಜೈಲು ಶಿಕ್ಷೆ, 40 ಸಾವಿರ ದಂಡ
ರಾಷ್ಟ್ರೀಕೃತ ಬ್ಯಾಂಕಿನ ಲೀಗಲ್ ಒಪೀನಿಯನ್ (ಕಾನೂನಾತ್ಮಕ ಅಭಿಪ್ರಾಯ)ವನ್ನು ನೀಡಿದ ಬ್ಯಾಂಕಿನ ವಕೀಲರಿಗೆ ನ್ಯಾಯಾಲಯವೊಂದು ಮೂರು ವರ್ಷಗಳ ಜೈಲು ಶಿಕ್ಷೆ ನೀಡಿದ ಘಟನೆ ವರದಿಯಾಗಿದೆ.
ಸಿಬಿಐ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯ ಈ ತೀರ್ಪು ನೀಡಿದೆ. 2009ರ ಜೂನ್ 9ರಂದು ಸಿಬಿಐ ನಡೆಸಿದ ತನಿಖೆಯಲ್ಲಿ ಆರೋಪಿ ವಕೀಲರು ಬ್ಯಾಂಕಿನ ಅಧಿಕಾರಿಗಳ ಜೊತೆಗೆ ಸೇರಿಕೊಂಡು ದೊಡ್ಡ ಮೊತ್ತದ ಭ್ರಷ್ಟಾಚಾರದಲ್ಲಿ ತೊಡಗಿರುವುದು ಕಂಡುಬಂದಿತ್ತು.
ಅಲಹಾಬಾದ್ ಬ್ಯಾಂಕಿನ ವಾರಣಾಸಿ ವಲಯ ಕಚೇರಿಯಲ್ಲಿ ಸಹಾಯಕ ಜನರಲ್ ಮ್ಯಾನೇಜರ್ ಆಗಿದ್ದ ಸಂಜೀವ ಮಾಳವೀಯ ಅವರು ಪ್ರಮೋದ್ ಕುಮಾರ್ ಸಿಂಗ್ ಮತ್ತು ಗೀತಾ ಸಿಂಗ್ ಅವರಿಗೆ 6 ಲಕ್ಷ ರೂ.ಗಳ ಸಾಲವನ್ನು ಮಂಜೂರು ಮಾಡಿದ್ದರು.
ಈ ಸಾಲದ ವ್ಯವಹಾರದಲ್ಲಿ ಲೀಗಲ್ ಒಪೀನಿಯನ್ ನೀಡಿದ್ದ ವಕೀಲರಾದ ಸುರೇಶ್ ಚಂದ್ರ ದುಬೆ ಅವರು ಕೆಲವೊಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕಿಗೆ ವಂಚನೆ ಮಾಡಿದ್ದರು. 2013ರಲ್ಲಿ ಈ ಪ್ರಕರಣದ ಆರೋಪಪಟ್ಟಿ ದಾಖಲಿಸಿದ ಸಿಬಿಐ, ಸಂಜೀವ ಮಾಳವೀಯ, ಪ್ರಮೋದ್ ಸಿಂಗ್, ಗೀತಾ ಸಿಂಗ್ ಹಾಗೂ ವಕೀಲರಾದ ಸುರೇಶ್ ಚಂದ್ರ ದುಬೆ ಅವರನ್ನು ಆರೋಪಿಗಳೆಂದು ಹೆಸರಿಸಿತ್ತು.
ವಕೀಲ ಸುರೇಶ್ ಚಂದ್ರ ದುಬೆ ಪ್ರಕರಣದ ವಿಚಾರಣೆಗೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಉಳಿದ ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯವು 2019 ಮತ್ತು 2020ರಲ್ಲಿ ಆರೋಪಿಗಳ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಲಾಯಿತು.
ಆರೋಪಿಗಳಿಗೆ ಮೂರು ಲಕ್ಷ ರೂ. ದಂಡ ಹಾಗೂ ಮೋಸದ ವ್ಯವಹಾರದಲ್ಲಿ ತೊಡದಿದ್ದ ಗ್ರಾಹಕರು ಮತ್ತು ಬ್ಯಾಂಕ್ ಅಧಿಕಾರಿಗಳಿಗೆ ಮೂರು ವರ್ಷದ ಜೈಲು ಶಿಕ್ಷೆ ಮತ್ತು ದಂಡದ ತೀರ್ಪನ್ನು ನೀಡಿತ್ತು.
ಈ ಮಧ್ಯೆ, ಆರೋಪಿ ವಕೀಲರು ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್ ಕದ ತಟ್ಟಿದ್ದರು. ಆ ನಂತರದ ಬೆಳವಣಿಗೆಯಲ್ಲಿ ಸಿಬಿಐ ಪ್ರಕರಣದ ತನಿಖೆ ನಡೆಸುವ ಮೊದಲನೇ ಹೆಚ್ಚುವರಿ ವಿಶೇಷ ನ್ಯಾಯಾಲಯ, ಆರೋಪಿ ವಕೀಲರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ 40 ಸಾವಿರ ದಂಡ ನೀಡುವಂತೆ ಆದೇಶ ಹೊಡಿಸಿತ್ತು.