-->
ವಕೀಲರ ನೋಂದಣಿ ಶುಲ್ಕ 25,000/- ಕ್ಕೆ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಭಾರತೀಯ ವಕೀಲರ ಮಂಡಳಿ

ವಕೀಲರ ನೋಂದಣಿ ಶುಲ್ಕ 25,000/- ಕ್ಕೆ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಭಾರತೀಯ ವಕೀಲರ ಮಂಡಳಿ

ವಕೀಲರ ನೋಂದಣಿ ಶುಲ್ಕ 25,000/- ಕ್ಕೆ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಿಸಿ





ವಕೀಲರ ಪರಿಷತ್ತುಗಳಲ್ಲಿ ಸಂಗ್ರಹಿಸುತ್ತಿರುವ ವಕೀಲರ ನೋಂದಣಿ ಶುಲ್ಕವನ್ನು ರೂ. 25,000/-ಕ್ಕೆ ಹೆಚ್ಚಳ ಮಾಡುವಂತೆ ಕೋರಿ ಭಾರತೀಯ ವಕೀಲರ ಮಂಡಳಿ (ಬಿಸಿಐ) ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.


ಆರ್ಥಿಕ ಸಂಕಷ್ಟಗಳನ್ನು ಮುಂದಿಟ್ಟಿರುವ ಭಾರತೀಯ ವಕೀಲರ ಸಂಘ, ವಕೀಲರ ನೋಂದಣಿ ಶುಲ್ಕ ಹೆಚ್ಚಳ ಮಾಡಲು ಅನುಕೂಲವಾಗುವಂತೆ ವಕೀಲರ ಕಾಯ್ದೆ 1961ಕ್ಕೆ ತಿದ್ದುಪಡಿ ಮಾಡಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದೆ.


ಭಾರತೀಯ ವಕೀಲರ ಮಂಡಳಿ ಸಲ್ಲಿಸಿರುವ ಅರ್ಜಿಯಲ್ಲಿ, ಕೇವಲ ನೋಂದಣಿ ಶುಲ್ಕ ಮಾತ್ರವೇ ವಕೀಲರ ಪರಿಷತ್ತುಗಳ ಮುಖ್ಯ ಆದಾಯದ ಮೂಲವಾಗಿದೆ. ಇದೀಗ ಆದಾಯದ ಕೊರತೆ ಉಂಟಾಗಿದೆ ಎಂದು ಹೇಳಲಾಗಿದೆ.


ಸಿಬ್ಬಂದಿ ವೇತನ ನಿರ್ವಹಣೆ ಕಷ್ಟಕರವಾಗಿದ್ದು, ವಕೀಲರ ಪರಿಷತ್ತುಗಳ ಕಾರ್ಯನಿರ್ವಹಣೆ ವಿಪರೀತವಾಗಿ ತ್ರಾಸದಾಯಕವಾಗಿದೆ. ವಕೀಲರ ಕಾಯ್ದೆಯ ನಿಯಮ ಅನುಸಾರ ರೂ. 600/-ಗಿಂತ ಹೆಚ್ಚು ಶುಲ್ಕ ವಿಧಿಸುವಂತಿಲ್ಲ. ಹೀಗೆ, ವಕೀಲರ ಪರಿಷತ್ತುಗಳಿಗೆ ನಿರ್ಬಂಧ ವಿಧಿಸಿದರೆ ಅವು ತೀವ್ರ ಸಂಕಷ್ಟಕ್ಕೆ ಸಿಲುಕಲಿವೆ ಎಂದು ಭಾರತೀಯ ವಕೀಲರ ಮಂಡಳಿ (ಬಿಸಿಐ) ಹೇಳಿದೆ.


ಈ ಹಿನ್ನೆಲೆಯಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಿ ನಿಗದಿಪಡಿಸಿರುವ ಶುಲ್ಕ ಮಿತಿಯನ್ನು ಮೀರಿ ಹೆಚ್ಚಿನ ಶುಲ್ಕ ಸಂಗ್ರಹಕ್ಕೆ ವಕೀಲರ ಕಾಯ್ದೆಗೆ ಸೂಕ್ತ ತಿದ್ದುಪಡಿ ಆಗಬೇಕು ಎಂದು ಬಿಸಿಐ ಸುಪ್ರೀಂಕೋರ್ಟಿಗೆ ಮಾಡಿದ ಮನವಿ ಅರ್ಜಿಯಲ್ಲಿ ವಿವರಣೆ ನೀಡಿದೆ.


ವಕೀಲರ ಕಾಯ್ದೆಯ ಅನುಸಾರ ವಕೀಲರ ಪರಿಷತ್ತುಗಳು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಂದ ರೂ. 750/-, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ರೂ. 125/- ಸಂಗ್ರಹಿಸಲು ಮಾತ್ರ ಅವಕಾಶ ನೀಡುತ್ತದೆ ಹೀಗಿದ್ದು ಕೆಲವು ರಾಜ್ಯಗಳಲ್ಲಿ ವಕೀಲರ ಪರಿಷತ್ತು ಹೆಚ್ಚಿನ ಮೊತ್ತವನ್ನು ನೋಂದಣಿಯಾಗಿ ಸಂಗ್ರಹ ಮಾಡುತ್ತಿದ್ದವು.


ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಕೆಲ ವಕೀಲರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಕೀಲರ ಕಾಯ್ದೆಯಲ್ಲಿ ನಿಗದಿಪಡಿಸಿರುವ ಮೊತ್ತಕ್ಕಿಂತ ಹೆಚ್ಚಿನ ನೋಂದಣಿ ಶುಲ್ಕ ಸಂಗ್ರಹ ಮಾಡುವಂತಿಲ್ಲ ಎಂದು ಜುಲೈ ತಿಂಗಳಲ್ಲಿ ರಾಜ್ಯ ವಕೀಲರ ಪರಿಷತ್ತುಗಳಿಗೆ ಮತ್ತು ಬಿಸಿಐಗೆ ಆದೇಶ ನೀಡಿತ್ತು.


ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸುವುದಕ್ಕೂ ಮುನ್ನ, ಭಾರತೀಯ ವಕೀಲರ ಪರಿಷತ್ತು ಮತ್ತು ಕೇಂದ್ರ ಸರಕಾರಕ್ಕೆ ಕಾಯ್ದೆ ತಿದ್ದುಪಡಿ ತರಲು ಕೋರಿತ್ತು. ವಕೀಲರ ಕಾಯಿದೆಗೆ ತಿದ್ದುಪಡಿ ತಂದು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ನೋಂದಣಿ ಶುಲ್ಕವನ್ನು 25,000 ಮತ್ತು ಬಿಸಿಐ ನಿಧಿಯನ್ನು 6,250 ಕ್ಕೆ ಏರಿಕೆ ಮಾಡುವಂತೆ ಕೋರಲಾಗಿತ್ತು.


ಅದೇ ರೀತಿ, ರಾಜ್ಯ ವಕೀಲರ ಪರಿಷತ್ತುಗಳಲ್ಲಿ ನೋಂದಾಯಿಸುವ ಎಸ್ ಸಿ ಎಸ್ ಟಿ ಅಭ್ಯರ್ಥಿಗಳ ನೋಂದಣಿ ಶುಲ್ಕವನ್ನು 10,000/- ರೂಪಾಯಿಗೆ ಮತ್ತು ಬಿಸಿಐ ನಿಧಿಯನ್ನು 2,500/- ರೂಪಾಯಿಗೆ ಏರಿಕೆ ಮಾಡುವಂತೆ ಈ ಅರ್ಜಿಯಲ್ಲಿ ಕೋರಲಾಗಿತ್ತು ಇದೀಗ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿ ಹೆಚ್ಚಿನ ಶುಲ್ಕ ಸಂಗ್ರಹಕ್ಕೆ ಅನುವು ಮಾಡಿ ಕೊಡುವಂತೆ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಲಾದ ಅರ್ಜಿಯಲ್ಲಿ ಕೋರಲಾಗಿದೆ.



Ads on article

Advertise in articles 1

advertising articles 2

Advertise under the article