ವಕೀಲರಿಗೆ ಸುವರ್ಣಾವಕಾಶ: ಡಿಫೆನ್ಸ್ ಕೌನ್ಸೆಲ್ ನೇಮಕ ಪ್ರಕ್ರಿಯೆ- 16 ಜಿಲ್ಲೆಗಳಲ್ಲಿ ವಕೀಲರಿಂದ ಅರ್ಜಿ ಆಹ್ವಾನ; ಮಾಸಿಕ 80,000/- ವೇತನ
ವಕೀಲರಿಗೆ ಸುವರ್ಣಾವಕಾಶ: ಡಿಫೆನ್ಸ್ ಕೌನ್ಸೆಲ್ ನೇಮಕ ಪ್ರಕ್ರಿಯೆ- 16 ಜಿಲ್ಲೆಗಳಲ್ಲಿ ವಕೀಲರಿಂದ ಅರ್ಜಿ ಆಹ್ವಾನ; ಮಾಸಿಕ 80,000/- ವೇತನ
ರಾಜ್ಯದ 16 ಜಿಲ್ಲೆಗಳಲ್ಲಿ ಡಿಫೆನ್ಸ್ ಕೌನ್ಸೆಲ್ ನೇಮಕ ಪ್ರಕ್ರಿಯೆಯನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಆರಂಭಿಸಿದೆ. ಈ ಹುದ್ದೆಗೆ ಅರ್ಹ ವಕೀಲರಿಂದ ಅರ್ಜಿ ಆಹ್ವಾನ ಮಾಡಲಾಗಿದ್ದು, ಜನವರಿ 10, 2025 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.
ಇದು ವಕೀಲರಿಗೆ ಒಂದು ಅಪೂರ್ವ ಅವಕಾಶವಾಗಿದ್ದು, ತಿಂಗಳಿಗೆ ರೂ. 80,000/- ವರೆಗೆ ವೇತನ ದೊರೆಯಲಿದೆ.
ನೇಮಕಾತಿಯ ವಿವರ ಹೀಗಿದೆ.
ನೇಮಕಾತಿಗೆ ಸಂಬಂಧಿಸಿದ ಹುದ್ದೆಗಳ ವಿವರ-
ಚೀಫ್ ಡಿಫೆನ್ಸ್ ಕೌನ್ಸೆಲ್- 19 ಹುದ್ದೆಗಳು
ಉಪ ಡಿಫೆನ್ಸ್ ಕೌನ್ಸೆಲ್ - 16 ಹುದ್ದೆಗಳು
ಸಹಾಯಕ ಡಿಫೆನ್ಸ್ ಕೌನ್ಸೆಲ್ - 21 ಹುದ್ದೆಗಳು
ವೇತನ
ಚೀಫ್ ಡಿಫೆನ್ಸ್ ಕೌನ್ಸೆಲ್-: ಗರಿಷ್ಟ ರೂ. 80,000 - -ಕನಿಷ್ಟ ರೂ. 70, 000/-
ಉಪ ಡಿಫೆನ್ಸ್ ಕೌನ್ಸೆಲ್ - : ಗರಿಷ್ಟ ರೂ. 60,000 - -ಕನಿಷ್ಟ ರೂ. 45, 000/-
ಸಹಾಯಕ ಡಿಫೆನ್ಸ್ ಕೌನ್ಸೆಲ್: - ಗರಿಷ್ಟ ರೂ. 35,000 - -ಕನಿಷ್ಟ ರೂ. 30, 000/-
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಈ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯದ 30 ಜಿಲ್ಲೆಗಳಲ್ಲಿ ಸೇವಾ ಪ್ರಾಧಿಕಾರದ ವತಿಯಿಂದ ಕಾನೂನು ನೆರವು ವಂಚಿತರಿಗೆ ಸೂಕ್ತ ಮಾರ್ಗದರ್ಶನ ನೀಡಿ ಅವರ ಪ್ರಕರಣಗಳ ಪರವಾಗಿ ವಾದ ಮಂಡಿಸಲು ವಕೀಲರನ್ನು ನೇಮಕಾತಿ ಮಾಡಲಾಗುತ್ತಿದೆ.
ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸೇವಾ ಪ್ರಾಧಿಕಾರದ ವಕೀಲರನ್ನು ನೇಮಿಸುವ ಪ್ರಕ್ರಿಯೆ ನಡೆಯುತ್ತದೆ.
ಬೆಂಗಳೂರು ನಗರ
ಬೆಂಗಳೂರು ಗ್ರಾಮಾಂತರ
ಬಳ್ಳಾರಿ
ಚಿಕ್ಕಮಗಳೂರು
ದಕ್ಷಿಣ ಕನ್ನಡ- ಮಂಗಳೂರು
ದಾವಣಗೆರೆ
ಧಾರವಾಡ
ಹಾಸನ
ಕಲಬುರ್ಗಿ
ಮಂಡ್ಯ
ಮೈಸೂರು
ರಾಯಚೂರು
ರಾಮನಗರ
ಶಿವಮೊಗ್ಗ
ತುಮಕೂರು
ವಿಜಯಪುರ
ಅರ್ಹತೆಗಳು:
ಕ್ರಿಮಿನಲ್ ಕಾನೂನಿನಲ್ಲಿ ಕನಿಷ್ಟ 10 ವರ್ಷಗಳ ವಕೀಲ ವೃತ್ತಿ ನಡೆಸಿರಬೇಕು
ಮೌಖಿಕ ಮತ್ತು ಲಿಖಿತ ಸಂವಹನದಲ್ಲಿ ಉತ್ತಮ ಪ್ರಾವೀಣ್ಯತೆ ಪಡೆದಿರಬೇಕು
ಅಪರಾಧಿಕ ಕಾನೂನಿನ ಆಳವಾದ ಜ್ಞಾನವನ್ನು ಹೊಂದಿರಬೇಕು
ಕನಿಷ್ಟ 30 ಕೇಸುಗಳನ್ನು ಸೆಷನ್ಸ್ ಕೋರ್ಟ್‌ನಲ್ಲಿ ನಡೆಸಿರಬೇಕು
ಕಂಪ್ಯೂಟರ್ ಜ್ಞಾನವನ್ನು ಹೊಂದಿದ್ದರೆ ಉತ್ತಮ
ಕಚೇರಿಯನ್ನು ನಿರ್ವಹಿಸಿ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರಬೇಕು