-->
ತಮ್ಮ ಸ್ಥಾನದಲ್ಲಿ ಕೂರದ, ಕಚೇರಿ ಬಿಟ್ಟು ತೆರಳುವ ಸರ್ಕಾರಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ನೂತನ ಸುತ್ತೋಲೆಯಲ್ಲಿ ಖಡಕ್ ವಾರ್ನಿಂಗ್

ತಮ್ಮ ಸ್ಥಾನದಲ್ಲಿ ಕೂರದ, ಕಚೇರಿ ಬಿಟ್ಟು ತೆರಳುವ ಸರ್ಕಾರಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ನೂತನ ಸುತ್ತೋಲೆಯಲ್ಲಿ ಖಡಕ್ ವಾರ್ನಿಂಗ್

ತಮ್ಮ ಸ್ಥಾನದಲ್ಲಿ ಕೂರದ, ಕಚೇರಿ ಬಿಟ್ಟು ತೆರಳುವ ಸರ್ಕಾರಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ನೂತನ ಸುತ್ತೋಲೆಯಲ್ಲಿ ಖಡಕ್ ವಾರ್ನಿಂಗ್





ಸರಕಾರಿ ಕಚೇರಿಗಳಿಗೆ ಅಧಿಕಾರಿಗಳು ಮತ್ತು ನೌಕರರು ಸರಿಯಾಗಿ ಸರಿಯಾದ ಸಮಯಕ್ಕೆ ಆಗಮಿಸುತ್ತಿಲ್ಲ ಮತ್ತು ಕರ್ತವ್ಯದ ವೇಳೆ ಕಚೇರಿಯಲ್ಲಿ ಇರುವುದಿಲ್ಲ ಎಂಬ ಆರೋಪಗಳು ಸದಾ ಕೇಳಿ ಬರುತ್ತದೆ. ಇದೀಗ ಅಧಿಕಾರಿಗಳ ಕಾರ್ಯದಕ್ಷತೆಯನ್ನು ಖಾತ್ರಿಪಡಿಸುವ ಬಗ್ಗೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.


ಸರಕಾರಿ ಅಧಿಕಾರಿಗಳು ಮತ್ತು ಸರಕಾರಿ ನೌಕರರು ಸರಿಯಾದ ಸಮಯಕ್ಕೆ ತಮ್ಮ ಕರ್ತವ್ಯದ ಸ್ಥಳಕ್ಕೆ ಆಗಮಿಸಬೇಕು ಮತ್ತು ಸೇವಾ ಅವಧಿಯಲ್ಲಿ ಕರ್ತವ್ಯ ಸ್ಥಳವನ್ನು ಬಿಟ್ಟು ಎಲ್ಲೂ ಹೊರಗೆ ಹೋಗುವ ಹಾಗೆ ಇಲ್ಲ. ಒಂದು ವೇಳೆ, ಕರ್ತವ್ಯ ನಿಮಿತ್ತ ಕಚೇರಿ ಬಿಟ್ಟು ಹೊರ ಹೋಗುವ ಸಂದರ್ಭ ಬಂದರೆ ಅದನ್ನು ಕಚೇರಿಯ ದಾಖಲೆಯಲ್ಲಿ ನಮೂದಿಸಿ ತೆರಳಬೇಕು ಎಂದು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ.


ಈ ಬಗ್ಗೆ ಕರ್ನಾಟಕ ಸರಕಾರ ಹೊಸ ನಿಯಮವನ್ನು ಜಾರಿಗೊಳಿಸಿದೆ. ಕಚೇರಿಯ ವೇಳೆಯಲ್ಲಿ ಅಧಿಕಾರಿಗಳು ಮತ್ತು ನೌಕರರು ಆಲಿಸಬೇಕಾದ ನಿಯಮಗಳ ಕುರಿತು ಸುತ್ತೋಲೆಯನ್ನು ಹೊರಡಿಸಲಾಗಿದೆ.


ತನ್ನ ಅಧಿಕಾರಿಗಳು ಮತ್ತು ನೌಕರರಿಗೆ ಈ ಸೂಚನೆಯನ್ನು ನೀಡಲಾಗಿದೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಸುತ್ತೊಲೆಯನ್ನು ಹೊರಡಿಸಿದ್ದು ಈ ಸುತ್ತೋಲೆಯಲ್ಲಿ ಕಚೇರಿಯ ವೇಳೆಯಲ್ಲಿ ಅಧಿಕಾರಿಗಳು ಮತ್ತು ನೌಕರರು ಪಾಲಿಸಬೇಕಾದ ಮುಖ್ಯ ಸೂಚನೆಗಳ ಬಗ್ಗೆ ಖಡಕ್ ವಾರ್ನಿಂಗ್ ನೀಡಲಾಗಿದೆ.


ಅಧಿಕಾರಿಗಳು ಮತ್ತು ನೌಕರರು ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು, ಸೇವಾ ನಿಯಮವನ್ನು ಸರಿಯಾಗಿ ಪಾಲಿಸಬೇಕು. ಆದರೆ, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಮಯ ಪಾಲನೆ ಮಾಡದಿರುವುದು ಚಲನ ವಲನ ವಹಿಯನ್ನು ನಿರ್ವಹಿಸದೇ ಇರುವುದು. ಕರ್ತವ್ಯದ ಅವಧಿಯಲ್ಲಿ ಗುರುತಿನ ಚೀಟಿಯನ್ನು ಧರಿಸದಿರುವುದು, ಅಧಿಕಾರಿಗಳು ಮತ್ತು ಸಿಬ್ಬಂದಿಯ ಹೆಸರು ಹುದ್ದೆಯ ನಾಮಫಲಕಗಳನ್ನು ಅಳವಡಿಸದೆ ಇರುವ ಬಗ್ಗೆ ದೂರುಗಳು ಸ್ವೀಕೃತವಾಗಿರುವುದರಿಂದ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ನಿರ್ದೇಶನ ನೀಡಲಾಗಿದೆ.


ನಿಯಮಗಳ ವಿವರ ಹೀಗಿದೆ

ನೌಕರರು ಮತ್ತು ಅಧಿಕಾರಿಗಳು ಕಚೇರಿಗೆ ಬರುವ ವೇಳೆ ಮತ್ತು ಕಚೇರಿಯಿಂದ ಹೊರಡುವ ವೇಳೆಯನ್ನು ಪಾಲನೆ ಮಾಡುವುದು ಕಚೇರಿ ಅವಧಿ ಪೂರ್ಣವಾಗುವವರೆಗೆ ತಮಗೆ ನಿಗದಿ ಪಡಿಸಿದ ಸ್ಥಳದಲ್ಲಿ ಇದ್ದು, ಕರ್ತವ್ಯ ನಿರ್ವಹಿಸುವುದು, ಕಚೇರಿ ಸಮಯದಲ್ಲಿ ನೌಕರರು ಅಧಿಕಾರಿಗಳು ಕೆಲಸದ ನಿಮಿತ್ತ ಬೇಕಾಗಿದ್ದಲ್ಲಿ ಚಲನ ವಾಲನ ವಹಿಯಲ್ಲಿ ಸಕಾರಣವನ್ನು ನಮೂದಿಸಿ ಮೇಲಾಧಿಕಾರಿಗಳ ಪೂರ್ವ ಅನುಮತಿಯನ್ನು ಪಡೆಯತಕ್ಕದ್ದು. 


ಕರ್ತವ್ಯದ ಅವಧಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಇಲಾಖೆಯಿಂದ ಪಡೆದ ಗುರುತಿನ ಚೀಟಿಯನ್ನು ಹೊರಳಿಗೆ ಧರಿಸುವುದು, ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಅಧಿಕಾರಿಗಳು ತಾವು ಕುಳಿತು ಕರ್ತವ್ಯ ನಿರ್ವಹಿಸುವ ಮೇಜಿನ ಮೇಲೆ ಅವರ ಹೆಸರು ಹುದ್ದೆಯನ್ನು ಸೂಚಿಸುವ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳತಕ್ಕದ್ದು.


ಹಿರಿಯ ನಾಗರಿಕರು ಮತ್ತು ಸಾರ್ವಜನಿಕರ ಜೊತೆ ಸೌಜನ್ಯದಿಂದ ವರ್ತಿಸಿ ಅವರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದು.


ಯಾವುದೇ ರೀತಿಯ ಪತ್ರಗಳು ಬಂದಾಗ ಕಚೇರಿ ಕೈಪಿಡಿಯನ್ವಯ ಕಾರ್ಯನಿರ್ವಹಿಸುವುದು ಕಡತಗಳ ಚಲನವಲನ ಬಗ್ಗೆ ನಿಗ ವಹಿಸುವುದು.


ಇ-ಆಫೀಸ್ ಲಭ್ಯವಿರುವ ಕಡೆ ಕಡತ ಸ್ವೀಕರಿಸಿ ಪತ್ರ ಪರಿಶೀಲಿಸಿ ತುರ್ತಾಗಿ ನಿಯಮಗಳನ್ನುಯ ವಿಲೇವಾರಿ ಮಾಡುವುದು.


ಸುತ್ತೋಲೆಯ ಈ ಮೇಲಿನ ನಿಯಮಗಳನ್ನು ಪಾಲಿಸದೆ ಇದ್ದರೆ ಸಿಸಿಎ ನಿಯಮ ಅನುದಾನ ನಿಯಮ ಅನುಸಾರ ಅಂತಹ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೊಲೆಯಲ್ಲಿ ಎಚ್ಚರಿಸಲಾಗಿದೆ


ಕರ್ನಾಟಕ ಸರಕಾರ ಈಗಾಗಲೇ ಗುರುತಿನ ಚೀಟಿಯ ಟ್ಯಾಗ್‌ನ್ನು ಬದಲಿಸಲಾಗಿದೆ. ಹೊಸದಾಗಿ ಕೆಂಪು ಹಳದಿ ಬಣ್ಣದ ನೂತನ ಪರಿಚಯಿಸಿದ್ದು, ಅದನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯದ ಅವಧಿಯಲ್ಲಿ ಕೊರಳಿಗೆ ಧರಿಸುವುದು, ಮುಂತಾದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.


Ads on article

Advertise in articles 1

advertising articles 2

Advertise under the article